ಆ್ಯಪ್ನಗರ

ಬಾಗಲಕೋಟೆ ಯೋಧ ವಿದ್ಯುತ್‌ ಶಾಕ್‌ಗೆ ಬಲಿ

ಬಾಗಲಕೋಟೆಯ ಬಿಎಸ್‌ಎಫ್‌​​ ಯೋಧ ಪಾಪಣ್ಣ ಟೆಂಟ್‌ ಹೌಸ್‌ನಲ್ಲಿ ಶಾಕ್‌ ತಗುಲಿ ಮೃತಪಟ್ಟಿದ್ದಾರೆ.

Vijaya Karnataka Web 17 Jul 2018, 8:55 pm
ಬಾಗಲಕೋಟ : ಗುಜರಾತ್‌ನ ಜಾಮ್‌ ನಗರದಲ್ಲಿನ ಟೆಂಟ್‌ ಹೌಸ್‌ನಲ್ಲಿ ವಿದ್ಯುತ್‌ ಶಾಕ್‌ನಿಂದ ಬಾಗಲಕೋಟೆಯ ಸೈನಿಕ ಮೃತಪಟ್ಟಿದ್ದಾರೆ.
Vijaya Karnataka Web bagalkot.


ಗಡಿ ರಕ್ಷಣಾ ಪಡೆ (ಬಿಎಸ್‌ಎಫ್‌)ಯಲ್ಲಿ ಯೋಧನಾಗಿ ಗುಜರಾತ್‌ನಲ್ಲಿ ಕಾರ್ಯ ನಿರ್ವಹಿಸಿತ್ತಿದ್ದ ಪಾಪಣ್ಣ ಯರನಾಳ (34) ಮೃತರು.

ಮಂಗಳವಾರ ಟೆಂಟ್ ನಲ್ಲಿ ಶಾಟ್೯ ಸರ್ಕೀಟ್‌ನಿಂದ ಪಾಪಣ್ಣಗೆ ವಿದ್ಯುತ್ ಶಾಕ್ ತಗುಲಿದೆ. ಇದರಿಂದ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಯೋಧನ ಮೃತದೇಹವನ್ನು ಸ್ವಗ್ರಾಮ ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮಕ್ಕೆ ಬುಧವಾರ ತರಲಾಗುತ್ತದೆ. ನಂತರ ಸಕಲ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಪಾಪಣ್ಣ ಅವರು ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ