ಆ್ಯಪ್ನಗರ

19 ಕೋಟಿ ರೂ.ವೆಚ್ಚದಲ್ಲಿ ಕಾಲುವೆ

ಘಟಪ್ರಭಾ ಎಡದಂಡೆ ಕಾಲುವೆಯ ದುರಸ್ತಿಗೆ 19 ಕೋಟಿ ರೂ.ವೆಚ್ಚ ಮಾಡಲಾಗುತ್ತಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

Vijaya Karnataka Web 28 May 2020, 5:00 am
ಮುಧೋಳ: ಘಟಪ್ರಭಾ ಎಡದಂಡೆ ಕಾಲುವೆಯ ದುರಸ್ತಿಗೆ 19 ಕೋಟಿ ರೂ.ವೆಚ್ಚ ಮಾಡಲಾಗುತ್ತಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.
Vijaya Karnataka Web 27MDL2 DCM_41


ತಾಲೂಕಿನ ಬೆಳಗಲಿ ಗ್ರಾಮದಲ್ಲಿಜಿಎಲ್‌ಬಿಸಿ ಕಾಲುವೆ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿ, ಐವತ್ತು ವರ್ಷಗಳಿಂದಲೂ ರಿಪೇರಿಯಾಗದೇ ಹಾಗೆ ಉಳಿದಿದ್ದ ಕಾಲುವೆಗೆ ಹೊಸ ಸ್ಪರ್ಶ ನೀಡಲಾಗುವುದು. ಮುಗಳಖೋಡ, ಬೆಳಗಲಿ, ನಾಗರಾಳ, ಅಕ್ಕಿಮರಡಿ ಗ್ರಾಮಗಳ ರೈರು ಸಹಕರಿಸಬೇಕು.ಈ ಭಾಗದಲ್ಲಿ94 ಕ್ಯುಸೆಕ್‌ ನೀರು ಹರಿಯುತ್ತದೆ. ಲಾಕ್‌ಡೌನ್‌ ಹಿನ್ನಲೆಯಲ್ಲಿಕಾಮಗಾರಿ ಅರ್ಧಕ್ಕೆ ಉಳಿದಿತ್ತು. ಎಲ್ಲಾಕಾಮಗಾರಿಗಳು ನಿಗದಿತ ಅವಧಿಯೊಳಗೆ ಮುಗಿಸಲು ಪ್ರಯತ್ನಿಸಲಾಗುವುದು ಎಂದರು.

ಬೆಳಗಲಿಗೆ 10 ಕೋಟಿ ರೂ. ವೆಚ್ಚದಲ್ಲಿಕೆರೆ ನಿರ್ಮಾಣ ಮಾಡಲಾಗುತ್ತಿದೆ. ಪಟ್ಟಣದ ಜನರಹಿತದೃಷ್ಠಿಯಿಂದ ನೀರಾವರಿ, ಮೂಲ ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ಮುಖಂಡ ಅರುಣ ಕಾರಜೋಳ, ತಾಪಂ ಮಾಜಿ ಅಧ್ಯಕ್ಷ ರಂಗಪ್ಪ ಒಂಟಗೋಡಿ, ಪುಟ್ಟು ಕುಲಕರ್ಣಿ, ನೀರಾವರಿ ಅಧಿಕಾರಿ ಎಚ್‌.ಜಿ.ಆಲೂರ, ಮುಖ್ಯಾಧಿಕಾರಿ ವಿದ್ಯಾದರ ಕಲಾದಗಿ, ಅಶೋಕ ಸಿದ್ದಾಪೂರ, ಪಂಡೀತ ಪೂಜಾರಿ, ಮಲ್ಲುಕ್ವಾನ್ಯಾಗೋಳ ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ