ಆ್ಯಪ್ನಗರ

ಕರ್ತವ್ಯಕ್ಕೆ ಅಡ್ಡಿ, ಯುವಕನ ವಿರುದ್ಧ ಕೇಸ್‌

ನಗರದ ಮಸ್ತಾನ್‌ (40) ವಿರುದ್ಧ ವಿಕೋಪ ನಿಯಂತ್ರಣ ಕಾಯ್ದೆಯನ್ವಯ ಕಲಂ 353, 188, 269 ಹಾಗೂ 270ರ ಮೇರೆಗೆ ನವನಗರ ಪೊಲೀಸ್‌ ಠಾಣೆಯಲ್ಲಿದೂರು ದಾಖಲಿಸಲಾಗಿದೆ. ಮಸ್ತಾನ್‌ ಸೇರಿದಂತೆ ವೃದ್ಧೆಯ ಕುಟುಂಬದ 13ಸದಸ್ಯರನ್ನು ಕ್ವಾರಂಟೈನ್‌ ಮಾಡಲಾಗಿದೆ.

Vijaya Karnataka Web 12 May 2020, 5:00 am
ಬಾಗಲಕೋಟೆ : ನಗರದ ಮಸ್ತಾನ್‌ (40) ವಿರುದ್ಧ ವಿಕೋಪ ನಿಯಂತ್ರಣ ಕಾಯ್ದೆಯನ್ವಯ ಕಲಂ 353, 188, 269 ಹಾಗೂ 270ರ ಮೇರೆಗೆ ನವನಗರ ಪೊಲೀಸ್‌ ಠಾಣೆಯಲ್ಲಿದೂರು ದಾಖಲಿಸಲಾಗಿದೆ. ಮಸ್ತಾನ್‌ ಸೇರಿದಂತೆ ವೃದ್ಧೆಯ ಕುಟುಂಬದ 13ಸದಸ್ಯರನ್ನು ಕ್ವಾರಂಟೈನ್‌ ಮಾಡಲಾಗಿದೆ.
Vijaya Karnataka Web case against young man for obstruction of duty
ಕರ್ತವ್ಯಕ್ಕೆ ಅಡ್ಡಿ, ಯುವಕನ ವಿರುದ್ಧ ಕೇಸ್‌


ಅಜ್ಮಿರ್‌ಗೆ ತೆರಳಿದ್ದ ನಾನಾ ಜಿಲ್ಲೆಗಳ 38 ಜನರನ್ನು ಬೆಳಗಾವಿಯ ನಿಪ್ಪಾಣಿ ಬಳಿ ಕ್ವಾರಂಟೈನ್‌ ಮಾಡಲಾಗಿತ್ತು. ಈ ಪೈಕಿ ಮೇ 10ರಂದು ಬಾಗಲಕೋಟೆ ಜಿಲ್ಲೆಯ ಬಾದಾಮಿ, ಬಾಗಲಕೋಟೆಯ 8 ಜನರಿಗೆ ಕೋವಿಡ್‌ ಸೋಂಕು ತಗುಲಿರುವುದು ಖಚಿತವಾಗಿತ್ತು. ಬಾಗಲಕೋಟೆ ನಿವಾಸಿಯಾಗಿರುವ 75 ವರ್ಷದ ವೃದ್ಧೆಯ ಕುಟುಂಬ ಮಾಹಿತಿ ಪಡೆದು ಅಧಿಕಾರಿಗಳು ಪ್ರಾಥಮಿಕ, ದ್ವಿತೀಯ ಸಂಪರ್ಕ ಮಾಹಿತಿ ಕಲೆ ಹಾಕಲು ಮುಂದಾದರು. ಆಗ ಸೋಂಕಿತೆಯನ್ನು ಆಕೆಯ ಪುತ್ರ ಮೇ 7ರಂದು ಭೇಟಿಯಾಗಿರುವ ಆತಂಕಕಾರಿ ಮಾಹಿತಿ ಹೊರಬಿತ್ತು. ನಿಪ್ಪಾಣಿ ತಾಲೂಕಿನ ಗವಾನಿ ಗ್ರಾಮದ ಬಳಿಯ ಮೊರಾರ್ಜಿ ದೇಸಾಯಿ ಶಾಲೆಯ ಕ್ವಾರಂಟೈನ್‌ ಕೇಂದ್ರಕ್ಕೆ ತೆರಳಿದ್ದ ಮಸ್ತಾನ್‌ ತಾಯಿಯನ್ನು ಭೇಟಿ ಮಾಡಿ ಬಂದಿದ್ದ. ನಂತರ ನಗರದ ಹಲವೆಡೆ ಸಂಚರಿಸಿದ್ದ. ಸೋಂಕಿತ ವ್ಯಕ್ತಿಗಳನ್ನು ಭೇಟಿ ಮಾಡಬಾರದು ಎಂಬ ನಿಯಮ ಉಲ್ಲಂಘಿಘಿಸಿದ್ದ.

ದೂರು ದಾಖಲು:
ಈ ಮಾಹಿತಿ ಖಚಿತವಾಗುತ್ತಿದ್ದಂತೆ ಪೊಲೀಸರು ಕ್ವಾರಂಟೈನ್‌ಗೆ ಮುಂದಾದಾಗ ಮಸ್ತಾನ್‌ ವಿರೋಧ ವ್ಯಕ್ತಪಡಿಸಿದ್ದ. ಈ ಹಿನ್ನೆಲೆಯಲ್ಲಿಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ, ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಮಸ್ತಾನ್‌ ವಿರುದ್ಧ ದೂರು ದಾಖಲಿಸಲಾಗಿದೆ.

ಕ್ವಾರಂಟೈನ್‌ ಕೈಗೊಳ್ಳಬೇಕಿರುವುದರಿಂದ ಮಸ್ತಾನ್‌ನನ್ನು ಬಂಧಿಸಲಾಗಿಲ್ಲ. ಈತ ಸೇರಿದಂತೆ ಕುಟುಂಬದ 13 ಸದಸ್ಯರನ್ನು ಕ್ವಾರಂಟೈನ್‌ ಮಾಡಲಾಗಿದ್ದು, ಮಂಗಳವಾರ ಗಂಟಲ ದ್ರವ ಮಾದರಿ ಸಂಗ್ರಹಿಸುವ ಸಾಧ್ಯತೆಯಿದೆ.

ಶುರುವಾಯ್ತು ಆತಂಕ
ಸೋಂಕಿತ ತಾಯಿಯನ್ನು ಪುತ್ರ ಭೇಟಿ ಮಾಡಿದ ಸುದ್ದಿ ಪಸರಿಸುತ್ತಿದ್ದಂತೆ ನಗರದಲ್ಲಿಆತಂಕ ಮೂಡಿದೆ. ಈತ ತಾಯಿಯನ್ನು ಭೇಟಿ ಮಾಡಿದ ನಂತರ ನಗರದಲ್ಲಿಹಲವು ಕಡೆಗಳಲ್ಲಿಸಂಚರಿಸಿದ್ದಾನೆ. ಜತೆಗೆ ಕುಟುಂಬ ಸದಸ್ಯರೊಂದಿಗೂ ಅಡ್ಡಾಡಿದ್ದಾನೆ. ಹೀಗಾಗಿ ಮತ್ತೆ ನಗರದಲ್ಲಿಸೋಂಕು ಕಾಣಿಸಿಕೊಳ್ಳಬಹುದು ಎಂಬ ಭೀತಿ ಸಾರ್ವಜನಿಕರನ್ನು ಕಾಡುತ್ತಿದೆ.

ಸೋಂಕಿತೆ ಭೇಟಿಗೆ ಪುತ್ರ ತೆರಳಿದ್ದ ಎಂಬ ಮಾಹಿತಿ ದೊರೆಯುತ್ತಿದ್ದಂತೆ ಭಾನುವಾರ ಸಂಜೆಯೇ ಮಸ್ತಾನ್‌ ಮನೆಗೆ ತೆರಳಿದ ಅಧಿಕಾರಿಗಳು ಕ್ವಾರಂಟೈನ್‌ಗೆ ಮುಂದಾಗಿದ್ದರು. ಆತನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಕೋವಿಡ್‌ ಭೀತಿ ಮತ್ತೆ ಆರಂಭಗೊಂಡಿದೆ.


ಪೊಲೀಸರು ಹಾಗೂ ವೈದ್ಯಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಕ್ವಾರಂಟೈನ್‌ನಲ್ಲಿರುವ ಸೋಂಕಿತೆಯನ್ನು ಭೇಟಿ ಮಾಡಿದ ಆರೋಪದ ಮೇಲೆ ಮಸ್ತಾನ್‌ ಬಂಧಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯಲಿದೆ.
-ಲೋಕೇಶ್‌ ಜಗಲಾಸರ್‌, ಎಸ್‌ಪಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ