ಆ್ಯಪ್ನಗರ

ಸಿಎಂ ಹೇಳಿಕೆಗೆ ಟ್ವಿಟರ್‌ನಲ್ಲಿ ಚಾಟಿ

ಬಾಗಲಕೋಟ: ಕಬ್ಬು ಬೆಳೆಗಾರರ ಹೋರಾಟಕ್ಕೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ ಟ್ವಿಟರ್‌ ಮೂಲಕ ನೀಡಿರುವ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿದೆ.

Vijaya Karnataka 20 Nov 2018, 5:00 am
ಬಾಗಲಕೋಟ: ಕಬ್ಬು ಬೆಳೆಗಾರರ ಹೋರಾಟಕ್ಕೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ ಟ್ವಿಟರ್‌ ಮೂಲಕ ನೀಡಿರುವ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿದೆ.
Vijaya Karnataka Web chat on twitter for cms statement
ಸಿಎಂ ಹೇಳಿಕೆಗೆ ಟ್ವಿಟರ್‌ನಲ್ಲಿ ಚಾಟಿ


ಬೆಂಗಳೂರಿನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ 'ಕಬ್ಬು ಬೆಳೆಗಾರರ ಹೋರಾಟ ನಡೆಸಿದ ಮಹಿಳೆ ನಾಲ್ಕು ವರ್ಷ ಎಲ್ಲಿ ಮಲಗಿದ್ದಳು' ಎಂಬ ಸಿಎಂ ಹೇಳಿಕೆಗೆ ತೀವ್ರ ವಿರೋಧ ಕೇಳಿಬಂದಿತ್ತು. ಸಿಎಂ ಹೇಳಿಕೆ ಖಂಡಿಸಿ ಬೆಳಗಾವಿ, ಬಾಗಲಕೋಟ ಜಿಲ್ಲೆಗಳ ರೈತರು ಪ್ರತಿಭಟಿಸಿದ್ದರು. ಸಿಎಂ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಟ್ವಿಟರ್‌ ಮೂಲಕ 22 ಅಂಶಗಳ ಪತ್ರಿಕಾ ಪ್ರಕಟಣೆಯ ಲಿಂಕ್‌ನ್ನು ಮುಖ್ಯಮಂತ್ರಿಗಳ ಅಧಿಕೃತ ಖಾತೆಯಲ್ಲಿ ಪ್ರಕಟಿಸಲಾಗಿದೆ.

'ಬೆಳಗಾವಿ ಹಾಗೂ ಬಾಗಲಕೋಟ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರ ಹೇಳಿಕೆ' ಎಂಬ ಟ್ವೀಟ್‌ಗೆ ನೆಟ್ಟಿಗರು ಮರು ಉತ್ತರ ನೀಡಿ ಟ್ವೀಟಿಸಿದ್ದಾರೆ. ಶಕುಂತಲಾ ರಾಜ್‌ ಎಂಬುವರು 'ನೀವು ಭೇದ ಭಾವ ಮಾಡ್ತಿದ್ದೀರಿ, ನೀವು ಸಮರ್ಥಿಸಿಕೊಂಡರೂ ಕೇಳುವಷ್ಟು ಶತಮೂರ್ಖರು ನಾವಲ್ಲ' ಎಂದಿದ್ದಾರೆ. ಕಬ್ಬಿನ ಬಿಲ್‌ ಪಾವತಿಸದ ಸಕ್ಕರೆ ಕಾರ್ಖಾನೆಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹಲವರು ಒತ್ತಾಯಿಸಿದ್ದಾರೆ. ರಾಜಶೇಖರ ತಳವಾರ 'ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳ ಮಾಲೀಕರು ಬೇರೆ ಪಕ್ಷದಲ್ಲಿದ್ದರೂ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಾರೆ. ಇವರದ್ದು ಮನೆಹಾಳರ ಗುಂಪು, ದಯೆ ಹಾಗೂ ದಾಕ್ಷಿಣ್ಯ ತೋರದೇ ಇವರನ್ನು ಮಟ್ಟ ಹಾಕಿ' ಎಂದು ಸಲಹೆ ನೀಡಿದ್ದಾರೆ. ಸಿಎಂ ಹೇಳಿಕೆಗೆ ಪ್ರತಿಯಾಗಿ ಸಮಸ್ಯೆಯನ್ನು ತಕ್ಷಣ ಪರಿಹರಿಸಲು ಕ್ರಮ ಕೈಗೊಳ್ಳಿ ಎಂಬ ಬೇಡಿಕೆ ಕೇಳಿಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ