ಆ್ಯಪ್ನಗರ

ಬಸ್‌ ರಿವರ್ಸ್‌: ಮಗು ಸಾವು

ಶಾಲಾ ವಾಹನದಡಿಗೆ ಬಿದ್ದು ನಾಲ್ಕು ವರ್ಷದ ಹೆಣ್ಣುಮಗುವೊಂದು ಮೃತಪಟ್ಟ ಘಟನೆ ಹುನಗುಂದ ತಾಲೂಕಿನ ಹಾವರಗಿಯಲ್ಲಿ ನಡೆದಿದೆ.

Vijaya Karnataka Web 5 Jan 2018, 11:23 am
ಬಾಗಲಕೋಟ: ಶಾಲಾ ವಾಹನದಡಿಗೆ ಬಿದ್ದು ನಾಲ್ಕು ವರ್ಷದ ಹೆಣ್ಣುಮಗುವೊಂದು ಮೃತಪಟ್ಟ ಘಟನೆ ಹುನಗುಂದ ತಾಲೂಕಿನ ಹಾವರಗಿಯಲ್ಲಿ ನಡೆದಿದೆ.
Vijaya Karnataka Web child death in hunagunda
ಬಸ್‌ ರಿವರ್ಸ್‌: ಮಗು ಸಾವು


ಅಂಜಲಿ ಗೌಡರ (೪) ಮೃತ ಬಾಲಕಿ. ಮಲ್ಲಿಕಾರ್ಜುನ ಶಾಲೆಯ ವಿದ್ಯಾರ್ಥಿನಿಯಾಗಿದ್ದ ಮಗು ಶಾಲೆಯ ಬಸ್‌ನಿಂದ ಕೆಳಗಿಳಿದು ತೆರಳುತ್ತಿದ್ದಾಗ ಘಟನೆ ನಡೆದಿದೆ.

ವಿದ್ಯಾರ್ಥಿನಿ ಬಸ್ ಹಿಂಭಾಗದಲ್ಲಿರುವುದನ್ನು ಗಮನಿಸದ ಚಾಲಕ ರಿವರ್ಸ್‌ ತೆಗೆದುಕೊಂಡಾಗ ಬಾಲಕಿಯ ತಲೆಗೆ ಬಡಿದಿದೆ. ತೀವ್ರವಾಗಿ ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗದೆ ಮೃತಪಟ್ಟಿದ್ದಾಳೆ. ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ಚಾಲಕ ಸಂಗಯ್ಯ ವಿರುದ್ಧ ದೂರು ದಾಖಲಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ