ಆ್ಯಪ್ನಗರ

ತ್ರಿಕೋನ ಸ್ಪರ್ಧೆಯಲ್ಲಿ ಮತಕ್ಕೆ ಪೈಪೋಟಿ

ಬಾದಾಮಿ : ಮಾಜಿ ಸಿಎಂ, ಸಿದ್ದರಾಮಯ್ಯ ಕ್ಷೇತ್ರವಾಗಿರುವ ಹಿನ್ನೆಲೆಯಲ್ಲಿ ಬಹಳಷ್ಟು ಕುತೂಹಲ ಮೂಡಿತ್ತು. ಬಾದಾಮಿಯಲ್ಲಿ ಕಾಂಗ್ರೆಸ್‌ ಬಿಜೆಪಿ ನಡುವೆ ನೇರ ಹಣಾಹಣಿ ನಡೆದರೆ ಗುಳೇದಗುಡ್ಡ ಹಾಗೂ ಕೆರೂರ ಪಟ್ಟಣಗಳಲ್ಲಿ ತ್ರಿಕೋನ ಸ್ಪರ್ಧೆ ನಡೆಯಿದಿದೆ. ಟಿಕೆಟ್‌ ವಂಚಿತರು ಪಕ್ಷೇತರರಾಗಿ ಸ್ಪರ್ಧಿಸುವ ಮೂಲಕ ಮೂರು ಪಕ್ಷ ಗಳಲ್ಲಿ ಪೈಪೋಟಿ ನಡೆಯಿತು.

Vijaya Karnataka 1 Sep 2018, 5:00 am
ಬಾದಾಮಿ : ಮಾಜಿ ಸಿಎಂ, ಸಿದ್ದರಾಮಯ್ಯ ಕ್ಷೇತ್ರವಾಗಿರುವ ಹಿನ್ನೆಲೆಯಲ್ಲಿ ಬಹಳಷ್ಟು ಕುತೂಹಲ ಮೂಡಿತ್ತು. ಬಾದಾಮಿಯಲ್ಲಿ ಕಾಂಗ್ರೆಸ್‌ ಬಿಜೆಪಿ ನಡುವೆ ನೇರ ಹಣಾಹಣಿ ನಡೆದರೆ ಗುಳೇದಗುಡ್ಡ ಹಾಗೂ ಕೆರೂರ ಪಟ್ಟಣಗಳಲ್ಲಿ ತ್ರಿಕೋನ ಸ್ಪರ್ಧೆ ನಡೆಯಿದಿದೆ. ಟಿಕೆಟ್‌ ವಂಚಿತರು ಪಕ್ಷೇತರರಾಗಿ ಸ್ಪರ್ಧಿಸುವ ಮೂಲಕ ಮೂರು ಪಕ್ಷ ಗಳಲ್ಲಿ ಪೈಪೋಟಿ ನಡೆಯಿತು.
Vijaya Karnataka Web compete for the vote in a triangular contest
ತ್ರಿಕೋನ ಸ್ಪರ್ಧೆಯಲ್ಲಿ ಮತಕ್ಕೆ ಪೈಪೋಟಿ


ಬೆಳಗ್ಗೆ 8ಕ್ಕೆ ಸಂಸದ ಪಿ.ಸಿ.ಗದ್ದಿಗೌಡರ ಹಾಗೂ 10ಕ್ಕೆ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, 11ಕ್ಕೆ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಮತ ಹಾಕಿ ಕಾಂಗ್ರೆಸ್‌ ಬಿಜೆಪಿ ಅಭ್ಯರ್ಥಿಗಳನ್ನು ಹುರಿದುಂಬಿಸಿದರು. ಸ್ಥಳೀಯ ಹಿರಿಯರಾದ ಎ.ಸಿ.ಪಟ್ಟಣದ, ಮುಖಂಡ ಮಹಾಂತೇಶ ಮಮದಾಪೂರ, ತಾಲೂಕ ಅಧ್ಯಕ್ಷ ಶಾಂತಗೌಡ ಪಾಟೀಲ, ಕುಬೇರಗೌಡ ಪಾಟೀಲ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಣ್ಣ ಯಲಿಗಾರ, ಜೆಡಿಎಸ್‌ ಅಧ್ಯಕ್ಷ ಎಂ.ಎಸ್‌.ಹಿರೇಹಾಳ ಸೇರಿದಂತೆ ಇತರರು ಎಲ್ಲ ವಾರ್ಡ್‌ಗಳಿಗೆ ಭೇಟಿ ಕೊಟ್ಟು ಕಾರ್ಯಕರ್ತರ ಚಟುವಟಿಕೆ ಇಮ್ಮಡಿಯಾಗುವಂತೆ ಮಾಡಿದರು. ವಯೋವೃದ್ಧರಿಗಾಗಿ ಟಂಟಂ ವಾಹನ ವ್ಯವಸ್ಥೆಯ ಜತೆಗೆ ವಿಕಲಚೇತನ ಹಾಗೂ ಅನಾರೋಗ್ಯ ಮತದಾರರಿಗೆ ಮತಗಟ್ಟೆಯಲ್ಲಿ ಇರಿಸಲಾಗಿದ್ದ ದ್ವಿಚಕ್ರ ಖುರ್ಚಿಯ ಸಹಾಯದೊಂದಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಯಿತು




ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ 15ಕ್ಕೂ ಅಧಿಕ ಅಭ್ಯರ್ಥಿಗಳು ಆಯ್ಕೆಗೊಂಡು ಪುರಸಭೆ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಡೆದ ಮತದಾರರ ಹುಮ್ಮಸ್ಸಿನ ಮತದಾನ ಗಮನಿಸಿದಾಗ ನಮಗೆ ಬೆಂಬಲ ಹೆಚ್ಚಾಗಲಿದೆ.

- ಶಾಂತಗೌಡ ಪಾಟೀಲ, ಬಿಜೆಪಿ ಅಧ್ಯಕ್ಷ

ಮಾಜಿ ಸಿಎಂ ಆಗಿರುವ ಶಾಸಕ ಸಿದ್ದರಾಮಯ್ಯ ಅವರ ಅಭಿವೃದ್ಧಿಯ ದೂರದೃಷ್ಟಿಯನ್ನು ನಗರದ ಜನತೆ ಅರಿತುಕೊಂಡಿದ್ದಾರೆ. ಶಾಸಕ ಸಿದ್ದರಾಮಯ್ಯ ಅವರಿಗೆ ಸಂಪೂರ್ಣ ಬೆಂಬಲ ನೀಡಲು ಸ್ಥಳೀಯ ಪುರಸಭೆಯ ಆಡಳಿತವನ್ನು ಕಾಂಗ್ರೆಸ್‌ ಪಕ್ಷ ಕ್ಕೆ ನೀಡಲಿದ್ದಾರೆ.

- ಮಲ್ಲಣ್ಣ ಯಲಿಗಾರ, ಕಾಂಗ್ರೆಸ್‌ ಅಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ