ಆ್ಯಪ್ನಗರ

ಮೈಸೂರು ತೋಟಗಾರಿಕೆ ಕಾಲೇಜ್‌ಗೆ ಸಮಗ್ರ ವೀರಾಗ್ರಣಿ

ಬಾಗಲಕೋಟೆ : ನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದಿಂದ ನಡೆದ ಅಂತರ್‌ ಮಹಾವಿದ್ಯಾಲಯಗಳ ಕ್ರೀಡಾಕೂಟದಲ್ಲಿಮೈಸೂರಿನ ತೋಟಗಾರಿಕೆ ಮಹಾವಿದ್ಯಾಲಯ ತಂಡ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದರೆ, ಸ್ಥಳೀಯ ತೋಟಗಾರಿಕೆ ಮಹಾವಿದ್ಯಾಲಯದ ತಂಡ ರನ್ನರ್‌ ಅಪ್‌ ಸ್ಥಾನ ಪಡೆದಿದೆ.

Vijaya Karnataka 21 Oct 2019, 5:00 am
ಬಾಗಲಕೋಟೆ : ನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದಿಂದ ನಡೆದ ಅಂತರ್‌ ಮಹಾವಿದ್ಯಾಲಯಗಳ ಕ್ರೀಡಾಕೂಟದಲ್ಲಿಮೈಸೂರಿನ ತೋಟಗಾರಿಕೆ ಮಹಾವಿದ್ಯಾಲಯ ತಂಡ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದರೆ, ಸ್ಥಳೀಯ ತೋಟಗಾರಿಕೆ ಮಹಾವಿದ್ಯಾಲಯದ ತಂಡ ರನ್ನರ್‌ ಅಪ್‌ ಸ್ಥಾನ ಪಡೆದಿದೆ.
Vijaya Karnataka Web comprehensive heroes to mysore horticulture college
ಮೈಸೂರು ತೋಟಗಾರಿಕೆ ಕಾಲೇಜ್‌ಗೆ ಸಮಗ್ರ ವೀರಾಗ್ರಣಿ


ತೋವಿವಿ ಕ್ರೀಡಾಂಗಣದಲ್ಲಿಅ.19 ಹಾಗೂ 20ರಂದು ತೋಟಗಾರಿಕೆ ಮಹಾವಿದ್ಯಾಲಯ ವ್ಯಾಪ್ತಿಯ 11ನೇ ಅಂತರ್‌ ಕಾಲೇಜ್‌ಗಳ ಕ್ರೀಡಾಕೂಟ ನಡೆಯಿತು. ಮೈಸೂರು, ಬೀದರ್‌, ಬೆಂಗಳೂರು, ಕೋಲಾರ, ಕೊಪ್ಪಳ, ಶಿರಸಿ ಸೇರಿದಂತೆ ಸ್ಥಳೀಯ ಕಾಲೇಜ್‌ನ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿಭಾಗವಹಿಸಿದ್ದರು.

ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿಎಸ್ಪಿ ಲೋಕೇಶ ಜಗಲಾಸರ್‌ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು. ಕ್ರೀಡೆಯಲ್ಲಿಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯ ಎಂದು ಕ್ರೀಡಾಪಟುಗಳಿಗೆ ಶುಭ ಕೋರಿದರು. ಕ್ರೀಡಾಕೂಟದಲ್ಲಿ15 ಸ್ಪರ್ಧೆಗಳು ನಡೆದವು. ತೋವಿವಿ ಕುಲಪತಿ ಡಾ.ಕೆ.ಎಂ.ಇಂದಿರೇಶ, ತೋಟಗಾರಿಕೆ ಮಹಾವಿದ್ಯಾಲಯದ ಡೀನ್‌ ಡಾ.ಎಚ್‌.ಬಿ.ಪಾಟೀಲ್‌, ಡಾ.ಎಸ್‌.ಐ.ಅಥಣಿ, ವಿಸ್ತರಣಾ ನಿರ್ದೇಶಕ ಡಾ.ವೈ.ಕೆ.ಕೋಟಿಕಲ್‌, ಡಾ.ಎಂ.ಎಸ್‌.ಕುಲಕರ್ಣಿ, ವಿ.ಎಂ.ಭಜಂತ್ರಿ, ಡಾ.ಆರ್‌.ಎಂ.ಹಿರೇಮಠ, ಡಾ.ನಾಗೇಶ ನಾಯ್ಕ ಇತರರು ಇದ್ದರು.

ನಾನಾ ಸ್ಪರ್ಧೆಗಳಲ್ಲಿಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಕ್ರೀಡಾಪಟುಗಳ ವಿವರ ಹೀಗಿದೆ.

ಪುರುಷರ ವಿಭಾಗ

100 ಮೀಟರ್‌ ಓಟ:ಯೋಗೇಶ (ಕೋಲಾರ), ಮಲ್ಲಿಕಾರ್ಜುನ ಮಿಣಜಗಿ (ಬಾಗಲಕೋಟೆ), ನಿತೀನ್‌.ಬಿ.ಕೆ. (ಕೊಪ್ಪಳ), 800 ಮೀಟರ್‌ ಓಟ:ಸಂದೇಶಕುಮಾರ ಕೆ., (ಕೋಲಾರ), ಲಕ್ಷ್ಮಿನಾಥ (ಮೈಸೂರ), ವೇಣುಗೋಪಾಲ ಎಚ್‌., (ಅರಭಾವಿ), 1,500 ಮೀಟರ್‌ ಓಟ:ಸಂದೇಶಕುಮಾರ (ಕೋಲಾರ), ಚರಣಕುಮಾರ (ಕೋಲಾರ), ಲಕ್ಷ್ಮಿನಾಥ (ಮೈಸೂರು), 200 ಮೀಟರ್‌ ಓಟ:ಸಂತೋಷ ಬಿ.ಟಿ., (ಶಿರಸಿ), ಯೋಗೇಶ (ಕೋಲಾರ), ಸಂತೋಷ ಹಡಗಲಿ (ಬಾಗಲಕೋಟೆ), 1,000 ಮೀಟರ್‌:ಯೋಗೇಶ (ಕೋಲಾರ), ಮಲ್ಲಿಕಾರ್ಜುನ ಮಿಣಜಗಿ (ಬಾಗಲಕೋಟೆ), ನಿತೀನ ಬಿ.ಕೆ.(ಕೊಪ್ಪಳ), 400 ಮೀಟರ್‌ ಓಟ:ಸುಮಂತ ಬಿ.ಟಿ. (ಶಿರಸಿ), ಮಂಜುನಾಥ ಎಂ.ಎಲ್‌.,(ಬಾಗಲಕೋಟೆ), ಸಂತೋಷ ಹಡಗಲಿ (ಬಾಗಲಕೋಟೆ), ಟ್ರಿಪಲ್‌ ಜಂಪ್‌ ಹಾಗೂ ಲಾಂಗ್‌ಜಂಪ್‌:ಸುಮಂತ ಬಿ.ಟಿ.,(ಶಿರಸಿ), ಎಚ್‌.ಎಸ್‌.ಹೇಮಂತಗೌಡ (ಮೈಸೂರು), ರಾಘವ ಬಿ., (ಕೋಲಾರ), ಹೈಜಂಪ್‌:ನಿತೀನಗೌಡ (ಬಾಗಲಕೋಟೆ), ರೇಣುಕಾಸ್ವಾಮಿ (ಶಿರಸಿ), 400*400 ಮೀಟರ್‌ ರಿಲೇ:ಬಾಗಲಕೋಟೆ ತಂಡ (ಪ್ರಥಮ), ಮೈಸೂರು ತಂಡ (ದ್ವಿತೀಯ), ಕೋಲಾರ ತಂಡ (ತೃತೀಯ), 400*100 ಮೀಟರ್‌ ರಿಲೇ:ಬಾಗಲಕೋಟೆ ತಂಡ (ಪ್ರಥಮ), ಶಿರಸಿ ತಂಡ (ದ್ವಿತೀಯ), ಮೈಸೂರು ತಂಡ (ತೃತೀಯ) ಸ್ಥಾನ ಪಡೆದವು.

ಮಹಿಳೆಯರ ವಿಭಾಗ

100 ಮೀಟರ್‌ ಓಟ:ಮಧುಮತಿ ಪಾಟೀಲ (ಅರಭಾವಿ), ಅಂಬು ಪ್ರಕಾಶ (ಮೈಸೂರು), ಶೀಲಾ ರೀಮಿ (ಮೈಸೂರು), 1,500 ಮೀಟರ್‌ ಓಟ:ಕಾವ್ಯಶ್ರೀ (ಅರಭಾವಿ), ಲಾವಣ್ಯ (ಕೋಲಾರ), ರಶ್ಮೀ (ಮೈಸೂರು), 800 ಮೀಟರ್‌ ಓಟ:ಕಾವ್ಯಶ್ರೀ (ಅರಭಾವಿ), ರಕ್ಷಿತಾ ಸಿ.ಎಲ್‌. (ಮೈಸೂರು), ಸುನಿತಾ ಹಾದಿಮನಿ (ಬಾಗಲಕೋಟೆ), 200 ಮೀಟರ್‌ ಓಟ:ಅನಿತಾ ಎಲ್‌.ಆರ್‌. (ಮೈಸೂರು), ಅಂಬು ಪ್ರಕಾಶ (ಮೈಸೂರು), ಮಧುಮತಿ (ಅರಭಾವಿ), 400 ಮೀಟರ್‌ ಓಟ:ಅನಿತಾ ಎಲ್‌.ಆರ್‌., (ಮೈಸೂರು), ರಕ್ಷಿತಾ ಸಿ.ಎಲ್‌., (ಮೈಸೂರು), ಸುನಿತಾ ಹಾದಿಮನಿ (ಬಾಗಲಕೋಟೆ), ಟ್ರಿಪಲ್‌ ಜಂಪ್‌:ಲಾವಣ್ಯ (ಕೋಲಾರ), ಸ್ನೇಹಾ (ಕೋಲಾರ), ನೇತ್ರಾವತಿ (ಕೊಪ್ಪಳ), ಲಾಂಗ್‌ಜಂಪ್‌:ಮಧುಮತಿ (ಅರಭಾವಿ), ಲಾವಣ್ಯ (ಕೋಲಾರ), ನೇತ್ರಾವತಿ (ಕೊಪ್ಪಳ), ಟೇಬಲ್‌ ಟೆನ್ನಿಸ್‌:ಅರಭಾವಿ ತಂಡ (ಪ್ರಥಮ), ಕೋಲಾರ ತಂಡ (ದ್ವಿತೀಯ), 400*400 ಮೀಟರ್‌ ರಿಲೇ:ಮೈಸೂರು ತಂಡ (ಪ್ರಥಮ), ಅರಭಾವಿ ತಂಡ (ದ್ವಿತೀಯ) ಹಾಗೂ ಬಾಗಲಕೋಟೆ ತಂಡ (ತೃತೀಯ) ಸ್ಥಾನ ಪಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ