ಆ್ಯಪ್ನಗರ

ಬಾಗಲಕೋಟೆ: ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ಮೀಸಲು ನಿಗದಿಗೆ ದಿನಾಂಕ ಪ್ರಕಟ

ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲು ನಿಗದಿಪಡಿಸುವ ದಿನಾಂಕ ಮತ್ತು ಸಮಯವನ್ನು ಪ್ರಕಟಿಸಲಾಗಿದೆ. ಜಿಲ್ಲೆಯ 9 ತಾಲೂಕುಗಳಲ್ಲಿ ಜ.15 ರಿಂದ 21ರ ವರೆಗೆ ದಿನವನ್ನು ಗೊತ್ತುಪಡಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Vijaya Karnataka Web 13 Jan 2021, 8:28 pm
ಬಾಗಲಕೋಟೆ: ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲು ನಿಗದಿಪಡಿಸುವ ದಿನಾಂಕ ಮತ್ತು ಸಮಯವನ್ನು ಪ್ರಕಟಿಸಲಾಗಿದೆ. ಜಿಲ್ಲೆಯ 9 ತಾಲೂಕುಗಳಲ್ಲಿ ಜ.15 ರಿಂದ 21ರ ವರೆಗೆ ದಿನವನ್ನು ಗೊತ್ತುಪಡಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
Vijaya Karnataka Web gram panchayat


ನಿಗದಿಪಡಿಸಿದ ದಿನದಂದು ತಾಲೂಕು ವ್ಯಾಪ್ತಿಯ ಎಲ್ಲಗ್ರಾಪಂಗಳ ನೂತನ ಚುನಾಯಿತ ಸದಸ್ಯರು, ಅವಧಿ ಮುಕ್ತಾಯಗೊಳ್ಳದೆ ಇರುವ ಗ್ರಾಪಂ ಸದಸ್ಯರಿಗೆ ಲಿಖಿತವಾಗಿ ತಿಳಿಸಲು ಜತೆಗೆ ಕೋವಿಡ್‌ ನಿಯಮ ಪಾಲನೆ ಆಗುವಂತೆ ನೋಡಿಕೊಳ್ಳಲು ತಹಸೀಲ್ದಾರ್‌ಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಿನಲ್ಲಿ ಬಿಜೆಪಿಯಿಂದ ಹಸ್ತಕ್ಷೇಪ: ಪ್ರಜ್ವಲ್‌ ರೇವಣ್ಣ ಅಸಮಾಧಾನ

ಜ.15ರಂದು ಬೆಳಗ್ಗೆ 11ಕ್ಕೆ ಗುಳೇದಗುಡ್ಡದ ಭಂಡಾರಿ ಮತ್ತು ರಾಠಿ ಕಾಲೇಜ್‌ನ ಸಾಂಸ್ಕೃತಿಕ ಭವನ, ಮಧ್ಯಾಹ್ನ 3ಕ್ಕೆ ಬಾದಾಮಿಯ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಒಳಾಂಗಣ ಕ್ರೀಡಾಂಗಣ, 17 ರಂದು ಮಧ್ಯಾಹ್ನ 4ಕ್ಕೆ ಬಾಗಲಕೋಟೆ ವಿದ್ಯಾಗಿರಿಯಲ್ಲಿನ ಗೌರಿಶಂಕರ ಕಲ್ಯಾಣ ಮಂಟಪ, 18ರಂದು ಬೆಳಗ್ಗೆ 9ಕ್ಕೆ ರಬಕವಿ-ಬನಹಟ್ಟಿ ಬಿದರಿ ಕಲ್ಯಾಣ ಮಂಟಪ, ಮಧ್ಯಾಹ್ನ 1ಕ್ಕೆ ಜಮಖಂಡಿಯ ಹೇಮರಡ್ಡಿ ಕಲ್ಯಾಣ ಮಂಟಪ, 19ರಂದು ಬೆಳಗ್ಗೆ 9ಕ್ಕೆ ಹುನಗುಂದದ ಗುರುಭವನ, ಮಧ್ಯಾಹ್ನ 1ಕ್ಕೆ ಇಳಕಲ್‌ನ ಕಂಠಿ ಸರ್ಕಲ್‌ ಹತ್ತಿರದ ಅನುಭವ ಮಂಟಪ, 21ರಂದು ಮಧ್ಯಾಹ್ನ 12ಕ್ಕೆ ಬೀಳಗಿಯಲ್ಲಿನ ಸಮುದಾಯ ಭವನ, 4ಕ್ಕೆ ಮುಧೋಳದ ರನ್ನ ಭವನದಲ್ಲಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲು ನಿಗದಿಪಡಿಸುವ ಕುರಿತ ಸಭೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ