ಆ್ಯಪ್ನಗರ

ಗೋವಿಂದ ಕಾರಜೋಳ ಆಪ್ತ ಸಹಾಯಕನಿಗೆ ಕ್ವಾರಂಟೈನ್, ಕೊರೊನಾ ಭೀತಿ

ಕಳೆದ ಐದಾರು ದಿನಗಳಿಂದ ಕ್ವಾರಂಟೈನ್ನಲ್ಲಿರುವ ಡಿಸಿಎಂ ಆಪ್ತ ಸಹಾಯಕರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. ಅದರ ವರದಿಗಾಗಿ ಕಾಯಲಾಗುತ್ತಿದೆ. ಆಪ್ತ ಸಹಾಯಕ ಕಾರ್ಯನಿರ್ವಹಿಸುತ್ತಿದ್ದ ತಾಲೂಕು ಪಂ‌ಚಾಯಿತಿ ಕಚೇರಿಯನ್ನು ಸಹ ಸೀಲ್ ಡೌನ್ ಮಾಡಲಾಗಿದೆ.

Vijaya Karnataka Web 4 Jul 2020, 12:35 pm
ಬಾಗಲಕೋಟೆ: ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳಗೆ ಕೊರೊನಾ ಭೀತಿ ಎದುರಾಗಿದೆ. ಸ್ವಕ್ಷೇತ್ರ ಮುಧೋಳದ ಆಪ್ತ ಸಹಾಯಕ ಇರುವ ಕ್ವಾರ್ಟರ್ಸ್‌ನಲ್ಲಿ ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ.
Vijaya Karnataka Web ಗೋವಿಂದ ಕಾರಜೋಳ
ಗೋವಿಂದ ಕಾರಜೋಳ


ಗೋವಿಂದ ಕಾರಜೋಳ ಆಪ್ತ ಸಹಾಯಕ ಡಿಸಿಎಂ ಜತೆ ಕೆಲವು ದಿನಗಳ ಕಾಲ ಕಾರ್ಯ ನಿರ್ವಹಿಸಿದ್ದರು. ಈಗ ಇಬ್ಬರಿಗೂ ಕೊರೊನಾ ಭೀತಿ ಎದುರಾಗಿದೆ.

ಮುಧೋಳ ಪಟ್ಟಣದ ಬಿಡಿಓ ಕ್ವಾಟರ್ಸ್‌ನಲ್ಲಿದ್ದ ವ್ಯಕ್ತಿಯೊಬ್ಬನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಅದೇ ಕ್ವಾಟರ್ಸ್‌ನಲ್ಲಿ ಗೋವಿಂದ ಕಾರಜೋಳ ಆಪ್ತ ಸಹಾಯಕ ತಂಗಿದ್ದರು. ಹೀಗಾಗಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ಕಳೆದ ಐದಾರು ದಿನಗಳಿಂದ ಕ್ವಾರಂಟೈನ್ನಲ್ಲಿರುವ ಡಿಸಿಎಂ ಆಪ್ತ ಸಹಾಯಕರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. ಅದರ ವರದಿಗಾಗಿ ಕಾಯಲಾಗುತ್ತಿದೆ.

ಆಪ್ತ ಸಹಾಯಕ ಕಾರ್ಯನಿರ್ವಹಿಸುತ್ತಿದ್ದ ತಾಲೂಕು ಪಂ‌ಚಾಯಿತಿ ಕಚೇರಿಯನ್ನು ಸಹ ಸೀಲ್ ಡೌನ್ ಮಾಡಲಾಗಿದೆ.

ಮುಧೋಳದಲ್ಲಿ ತೀವ್ರ ಕಟ್ಟೆಚ್ಚರ ಮುಂದುವರಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ