ಆ್ಯಪ್ನಗರ

ಪಕ್ಷಾಂತರಿಗಳಿಗೆ ಶಿಕ್ಷೆಯಾಗಬೇಕು: ಮತ್ತಿಕಟ್ಟಿ

ಮುಧೋಳ: ವಿಧಾನಸಭೆಯ ಹಿಂದಿನ ಸ್ಪೀಕರ್‌ ರಮೇಶಕುಮಾರ್‌ ಅವರು 17 ಶಾಸಕರನ್ನು ಅನರ್ಹಗೊಳಿಸಿರುವುದು ಸಂವಿಧಾನ ಬದ್ಧವಾಗಿಲ್ಲ. ಆದರೆ ಪಕ್ಷಾಂತರಿಗಳಿಗೆ ಶಿಕ್ಷೆಯಾಗಬೇಕು. ಸರಕಾರ ಅಸ್ಥಿರಗೊಳಿಸುವವರಿಗೆ ಪಾಠಕಲಿಸಬೇಕು ಎಂದು ಕರ್ನಾಟಕ ವಿಧಾನಸಭೆಯ ಮಾಜಿ ಸ್ಪೀಕರ ವೀರಣ್ಣ ಮತ್ತಿಕಟ್ಟಿ ಹೇಳಿದರು.

Vijaya Karnataka 3 Nov 2019, 5:00 am
ಮುಧೋಳ: ವಿಧಾನಸಭೆಯ ಹಿಂದಿನ ಸ್ಪೀಕರ್‌ ರಮೇಶಕುಮಾರ್‌ ಅವರು 17 ಶಾಸಕರನ್ನು ಅನರ್ಹಗೊಳಿಸಿರುವುದು ಸಂವಿಧಾನ ಬದ್ಧವಾಗಿಲ್ಲ. ಆದರೆ ಪಕ್ಷಾಂತರಿಗಳಿಗೆ ಶಿಕ್ಷೆಯಾಗಬೇಕು. ಸರಕಾರ ಅಸ್ಥಿರಗೊಳಿಸುವವರಿಗೆ ಪಾಠಕಲಿಸಬೇಕು ಎಂದು ಕರ್ನಾಟಕ ವಿಧಾನಸಭೆಯ ಮಾಜಿ ಸ್ಪೀಕರ ವೀರಣ್ಣ ಮತ್ತಿಕಟ್ಟಿ ಹೇಳಿದರು.
Vijaya Karnataka Web defenders must be punished and more
ಪಕ್ಷಾಂತರಿಗಳಿಗೆ ಶಿಕ್ಷೆಯಾಗಬೇಕು: ಮತ್ತಿಕಟ್ಟಿ

ನಿರಾಣಿ ಸಮೂಹದ ಎಂ.ಆರ್‌.ಎನ್‌ ಕಾರ್ಖಾನೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. 17 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಖುದ್ದು ಅಧ್ಯಕ್ಷರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದ್ದರು. ರಾಜೀನಾಮೆ ಸಲ್ಲಿಸುವ ಕ್ರಮದಲ್ಲಿಯಾವುದೇ ದೋಷ ಆಗಿಲ್ಲ. ರಾಜೀನಾಮೆ ಸಲ್ಲಿಸಿದ್ದ ಮೇಲೆ ಅನರ್ಹತೆ ಮಾಡುವ ಪ್ರಶ್ನೆ ಉಂಟಾಗುವುದಿಲ್ಲ. ಈ ವಿಷಯ ನ್ಯಾಯಾಲಾಯದ ಮುಂದೆ ಇದೆ. ನ್ಯಾಯಾಲಯ ಸೂಕ್ತ ನಿರ್ಧಾರ ಪ್ರಕಟಿಸಲಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ನಿರಾಣಿ ಸಾಹಸಿ ಉದ್ಯಮಿ: ಶಾಸಕ ಮುರುಗೇಶ ನಿರಾಣಿ ಸಾಹಸಿ ಉದ್ಯಮಿಯಾಗಿದ್ದಾರೆ. ನಾನು ಕಾಂಗ್ರೇಸ್ಸಿಗನಾಗಿ ಅವರ ಕಾರ್ಯಕ್ರಮಕ್ಕೆ ಬಂದಿಲ್ಲ. ಅವರು ಪಕ್ಷಾತೀತವಾಗಿ ಉದ್ದಿಮೆ ಹಾಗೂ ಸಾಮಾಜಿಕ ಕೆಲಸ ಮಾಡುತ್ತಿದ್ದಾರೆ. ಸ್ನೇಹಿತನಾಗಿ ಅವರ ಎಲ್ಲಖಾಸಗಿ ಕಾರ್ಯಕ್ರಮದಲ್ಲಿಭಾಗವಹಿಸುತ್ತೇನೆ. ನನ್ನ ಸಹೋದರರು ಕೂಡ ಭಾಗವಹಿಸುತ್ತಾರೆ ಎಂದು ಮತ್ತಿಕಟ್ಟಿ ಹೇಳಿದರು. ನಿರಾಣಿ ಅವರು ನೀರಾವರಿ ಅಭಿವೃದ್ಧಿಗೆ ಮಾಡಿದ ಕೆಲಸಗಳು ಮೆಚ್ಚುಗೆ ಗಳಿಸಿವೆ. ಒಳ್ಳೆಯ ಕೆಲಸಕ್ಕೆ ರಾಜಕೀಯ ರೂಪ ಕೊಡುವುದು ಬೇಡ ಎಂದೂ ಮತ್ತಿಕಟ್ಟಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ