ಆ್ಯಪ್ನಗರ

ಬಡ್ಡಿ ರಹಿತ ಕೃಷಿ ಸಾಲ ಹೆಚ್ಚಳಕ್ಕೆ ಆಗ್ರಹ

ಕೊರೊನಾ ಮರ್ಮಾಘಾತಕ್ಕೆ ರೈತರು ಕಂಗಾಲಾಗಿದ್ದು, ಬಿತ್ತನೆ ಬೀಜ ಕೂಡ ಖರೀದಿಸಲು ಹಣವಿಲ್ಲದೇ ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದಾರೆ. ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕ್‌ ಬಡ್ಡಿ ರಹಿತ ಕೃಷಿ ಸಾಲದ ಪ್ರಮಾಣ ಹೆಚ್ಚಳ ಮಾಡಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಬಿಡಿಸಿಸಿ ಬ್ಯಾಂಕ್‌ನ ಮಾಜಿ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ ಒತ್ತಾಯಿಸಿದ್ದಾರೆ.

Vijaya Karnataka Web 18 May 2020, 5:00 am
ಬಾದಾಮಿ: ಕೊರೊನಾ ಮರ್ಮಾಘಾತಕ್ಕೆ ರೈತರು ಕಂಗಾಲಾಗಿದ್ದು, ಬಿತ್ತನೆ ಬೀಜ ಕೂಡ ಖರೀದಿಸಲು ಹಣವಿಲ್ಲದೇ ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದಾರೆ. ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕ್‌ ಬಡ್ಡಿ ರಹಿತ ಕೃಷಿ ಸಾಲದ ಪ್ರಮಾಣ ಹೆಚ್ಚಳ ಮಾಡಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಬಿಡಿಸಿಸಿ ಬ್ಯಾಂಕ್‌ನ ಮಾಜಿ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ ಒತ್ತಾಯಿಸಿದ್ದಾರೆ.
Vijaya Karnataka Web demand for interest free agricultural credit increases
ಬಡ್ಡಿ ರಹಿತ ಕೃಷಿ ಸಾಲ ಹೆಚ್ಚಳಕ್ಕೆ ಆಗ್ರಹ


ಆರು ತಿಂಗಳ ಹಿಂದೆ ಬಂದ ನೆರೆಯಿಂದ ರೈತರ ಬದುಕನ್ನೇ ಕೊಚ್ಚಿಕೊಂಡು ಹೋಗಿದೆ. ಈಗ ಕೊರೊನಾದಿಂದ ಅವರ ಬದುಕು ಮತ್ತಷ್ಟು ದುಸ್ತರವಾಗಿದೆ. ರೈತರು ಬೆಳೆದ ತೋಟಗಾರಿಕೆ, ವಾಣಿಜ್ಯ, ತರಕಾರಿ ಸೇರಿದಂತೆ ಇನ್ನಿತರ ಬೆಳೆಗಳು ಕೈಗೆ ಬಾರದೇ ಅಪಾರ ಪ್ರಮಾಣ ಹಾನಿಯಾಗಿದೆ. ಆದ್ದರಿಂದ ಬ್ಯಾಂಕ್‌ ಬಡ್ಡಿ ರಹಿತ ಕೃಷಿ ಸಾಲದ ಪ್ರಮಾಣ ಹೆಚ್ಚಿಸಿ ಅವರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ