ಆ್ಯಪ್ನಗರ

ಸೈನ್ಯ ಸೇರಲು ಹಿಂದೇಟು ಬೇಡ

ಲೋಕಾಪುರ : ನಾವು ದೇಶಕ್ಕಾಗಿ ಪ್ರಾಣ ಕೊಟ್ಟಿದ್ದೇವೆ, ದೇಹದ ಹಲವು ಅಂಗಗಳನ್ನು ಪಣಕಿಟ್ಟಿದ್ದೇವೆ. ಜನರೆಲ್ಲ ಆನಂದ, ಸೌಖ್ಯದಿಂದ ಇರಲೆಂದು ಹಾರೈಸಿ ನಾವು ದೇಶ ಕಾದಿದ್ದೇವೆ. ಆದರೂ ನಮ್ಮನ್ನು ಸರಕಾರ ಮತ್ತು ಜನತೆ ಅಭಿಮಾನದಿಂದ ನೋಡುತ್ತಿಲ್ಲ ಎಂದು ಮಾಜಿ ಯೋಧ ಗೋಪಾಲ ಸಣ್ಣರಾಯಪ್ಪನವರ ಹೇಳಿದರು.

Vijaya Karnataka 29 Jul 2019, 5:00 am
ಲೋಕಾಪುರ : ನಾವು ದೇಶಕ್ಕಾಗಿ ಪ್ರಾಣ ಕೊಟ್ಟಿದ್ದೇವೆ, ದೇಹದ ಹಲವು ಅಂಗಗಳನ್ನು ಪಣಕಿಟ್ಟಿದ್ದೇವೆ. ಜನರೆಲ್ಲ ಆನಂದ, ಸೌಖ್ಯದಿಂದ ಇರಲೆಂದು ಹಾರೈಸಿ ನಾವು ದೇಶ ಕಾದಿದ್ದೇವೆ. ಆದರೂ ನಮ್ಮನ್ನು ಸರಕಾರ ಮತ್ತು ಜನತೆ ಅಭಿಮಾನದಿಂದ ನೋಡುತ್ತಿಲ್ಲ ಎಂದು ಮಾಜಿ ಯೋಧ ಗೋಪಾಲ ಸಣ್ಣರಾಯಪ್ಪನವರ ಹೇಳಿದರು.
Vijaya Karnataka Web do not hesitate to join the army
ಸೈನ್ಯ ಸೇರಲು ಹಿಂದೇಟು ಬೇಡ

ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಗುರುದತ್ತ ಕ್ಯಾರಿಯರ್‌ ಆಕಾಡಮಿ ಆರ್ಮಿ ಕೋಚಿಂಗ್‌ ಸೆಂಟರ್‌ ವತಿಯಿಂದ ಕಾರ್ಗಿಲ್‌ ವಿಜಯೋತ್ಸವ ನಿಮಿತ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯುವಕರು ಸೈನ್ಯ ಸೇರಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನು ತಪ್ಪಿಸಬೇಕು ಎಲ್ಲರಲ್ಲೂ ಜಾಗೃತಿ ಮೂಡಿಸಬೇಕು ಎಂದರು. ಪಿಎಸ್‌ಐ ಈರಪ್ಪ ರಿತ್ತಿ ಮಾತನಾಡಿ ಯೋಧರೆಂದರೆ ದೇಶಭಕ್ತಿಯ ಜೀವಂತ ಮೂರ್ತಿಗಳು ನಿಮ್ಮನ್ನು ನೋಡಿದರೆ ದೇಶವನ್ನು ನೋಡಿದಂತಾಗುತ್ತದೆ. ನಾವು ನಮಗಾಗಿ ಅಲ್ಲ ದೇಶಕ್ಕಾಗಿ ಎನ್ನುವ ತತ್ವಕ್ಕೆ ನೀವೇ ಜೀವಂತ ಮಾದರಿ ಎಂದರು.

ಸಹ ಶಿಕ್ಷ ಕ ಸುನೀಲ ವಸ್ತ್ರದ, ವೆಂಕಟೇಶ ತುಳಸಿಗೇರಿ ಮಾತನಾಡಿದರು. ಗುರುದತ್ತ ಆಕಾಡಮಿ ವತಿಯಿಂದ ಕಾರ್ಗಿಲ್‌ ವಿಜಯೋತ್ಸವದಲ್ಲಿ ವೀರ ಮರಣ ಹೊಂದಿದ ಯೋಧರಿಗೆ ಮೊಂಬತ್ತಿ ಬೆಳಗಿದರು. ಲಕ್ಕಪ್ಪ ಯಡಹಳ್ಳಿ, ವಿನಾಯಕ ಉಪ್ಪಾರ, ಶಂಕರ ಸೊಲ್ಲಾಪುರ, ಆಕಾಡೆಮಿ ವಿದ್ಯಾರ್ಥಿಗಳು ಸ್ಥಳೀಯರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ