ಆ್ಯಪ್ನಗರ

ಭಿನ್ನಮತ ಬಗ್ಗೆ ಮೌನ ಮುರಿದ ಸಿದ್ದರಾಮಯ್ಯ

ಸಚಿವ ಸ್ಥಾನ ಹಂಚಿಕೆ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಭಿನ್ನಮತ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಕೊನೆಗೂ ಮೌನ ಮುರಿದಿದ್ದಾರೆ.

Vijaya Karnataka Web 10 Jun 2018, 6:21 pm
ಬಾದಾಮಿ: ಸಚಿವ ಸ್ಥಾನ ಹಂಚಿಕೆ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಭಿನ್ನಮತ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಕೊನೆಗೂ ಮೌನ ಮುರಿದಿದ್ದಾರೆ.
Vijaya Karnataka Web siddu


ಬಾಗಲಕೋಟೆ ಜಿಲ್ಲೆಯ ನೀಲಗುಂದದಲ್ಲಿ ಮಾತನಾಡಿದ ಮಾಜಿ ಸಿಎಂ, ಭಿನ್ನಮತ ಬಗ್ಗೆ ಹೈಕಮಾಂಡ್ ಜೊತೆಯೂ ಮಾತನಾಡಿದ್ದೇನೆ. ಭಿನ್ನಮತ ಶಾಸಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ದಿನಕ್ಕೆ ಮೂರು ಬಾರಿ ಪೋನ್ ಮೂಲಕ ಮಾತನಾಡಿದ್ದೇನೆ. ಈಗೆಲ್ಲಾ ಅವರು ಸಮಾಧಾನ ಆಗಿದ್ದಾರೆ. ಯಾವುದೇ ಅತೃಪ್ತಿ ಇಲ್ಲ. ಈಗಿನ ಮಂತ್ರಿಗಳಿಗೆ ಎರಡು ವರ್ಷ ಸಚಿವ ಸ್ಥಾನ ಅವಧಿ ನೀಡಿ ಮಾತನಾಡಿದ್ದೇವೆ. ಮುಂದಿನ ಅವಧಿಗೆ ಉಳಿದವರಿಗೆ ಮಂತ್ರಿ ಸ್ಥಾನ ನೀಡಿ ಸಮಾಧಾನಪಡಿಸುತ್ತೇವೆ ಎಂದು ಹೇಳಿದ್ದಾರೆ.

ದಿಲ್ಲಿಯಿಂದ ನನಗೆ ಯಾವುದೇ ಬುಲಾವ್ ಬಂದಿಲ್ಲ, ಹೀಗಾಗಿ ನಾನು ಹೋಗಿಲ್ಲ. ಪೋನ ಮೂಲಕವೇ ಹೈಕಮಾಂಡ್ ಜೊತೆ ಸಂಪರ್ಕದಲ್ಲಿದ್ದೇನೆ ಎಂದಿರುವ ಸಿದ್ದರಾಮಯ್ಯ, ಎಂ. ಬಿ.ಪಾಟೀಲ್ ಗೆ ಡಿಸಿಎಂ ಹುದ್ದೆ ನೀಡುವ ಕುರಿತು, ಇನ್ನು ಯಾವುದೇ ಡಿಸಿಎಂ ಸ್ಥಾನ ಸೃಷ್ಢಿಯಾಗೋದಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಅಂತಿಮ ನಿಧಾ೯ರ ತೆಗೆದುಕೊಳ್ಳಲಿದ್ದಾರೆ. ರಾಹುಲ್ ಗಾಂಧಿ ಕರೆದು ಕೇಳಿದ ಮೇಲೆ ನನ್ನ ವಿಚಾರ ತಿಳಿಸುತ್ತೇನೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ