ಆ್ಯಪ್ನಗರ

ಆಹಾರ ಕದ್ದ ಸಿಕ್ಕು ಬಿದ್ದ

ಬೀಳಗಿ : ಅಂಗನವಾಡಿ ಮಕ್ಕಳಿಗೆ ಸಿಗಬೇಕಾದ ಆಹಾರ ಧಾನ್ಯವನ್ನು ಅಕ್ರಮವಾಗಿ ರಜೆ ದಿನವಾದ ಭಾನುವಾರ ಹಾಡುಹಗಲೇ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ ವೇಳೆ ನಗರದ ಬಸ್‌ ನಿಲ್ದಾಣದಲ್ಲಿ ಸಾರ್ವಜನಿಕರ ಕೈಗೆ ಸಿಕ್ಕುಬಿದ್ದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

Vijaya Karnataka 20 Jun 2018, 5:00 am
ಬೀಳಗಿ : ಅಂಗನವಾಡಿ ಮಕ್ಕಳಿಗೆ ಸಿಗಬೇಕಾದ ಆಹಾರ ಧಾನ್ಯವನ್ನು ಅಕ್ರಮವಾಗಿ ರಜೆ ದಿನವಾದ ಭಾನುವಾರ ಹಾಡುಹಗಲೇ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ ವೇಳೆ ನಗರದ ಬಸ್‌ ನಿಲ್ದಾಣದಲ್ಲಿ ಸಾರ್ವಜನಿಕರ ಕೈಗೆ ಸಿಕ್ಕುಬಿದ್ದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
Vijaya Karnataka Web food stolen
ಆಹಾರ ಕದ್ದ ಸಿಕ್ಕು ಬಿದ್ದ


ತಾಲೂಕಿನ ಬಸವ ಹಂಚಿನಾಳ ಗ್ರಾಮದ ಅಂಗನವಾಡಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆಯ ಪುತ್ರ ಪಟ್ಟಣದ ತಾಪಂ ಆವರಣದಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗೋದಾಮಿನಿಂದ ತನ್ನ ಬೈಕ್‌ ಮೂಲಕ ಒಂದೊಂದೇ ಆಹಾರ ಧಾನ್ಯದ ಮೂಟೆಗಳನ್ನು ನಗರದ ಬಸ್‌ ನಿಲ್ದಾಣಕ್ಕೆ ತಂದಿಳಿಸಿದ್ದಾನೆ.

ಸಿಡಿಪಿಒ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಎಂ.ಜಿ.ಹಾದಿಮನಿ ಗೋದಾಮಿನಿಂದ ರಜೆ ದಿನವಾದರೂ ಆಹಾರ ಧಾನ್ಯ ಮೂಟೆಗಳನ್ನು ಸಾಗಿಸಲು ಸಹಕರಿಸಿದ್ದಾರೆಂದು ಗೊತ್ತಾಗಿದೆ. ಬಸ್‌ ನಿಲ್ದಾಣದಲ್ಲಿ 50 ಕೆಜಿ ಅಕ್ಕಿ, 50 ಕೆಜಿ ರವಾ, 20 ಕೆಜಿ ತೊಗರಿ ಬ್ಯಾಳಿ, 20 ಕೆಜಿ ಸಕ್ಕರೆ, 4ಒಳ್ಳೆಣ್ಣೆ ಪಾಕೀಟ ಮತ್ತು 20 ಕೆಜಿ ಶೇಂಗಾ ಒಂದೆಡೆ ಸೇರಿಸಿಟ್ಟ ಆಹಾರ ಧಾನ್ಯವನ್ನು ಬೇರೆಡೆ ಸಾಗಣೆ ಮಾಡಬೇಕೆಂದು ಯತ್ನಿಸುತ್ತಿದ್ದಾಗ ಸ್ಥಳೀಯ ಪ್ರಜ್ಞಾವಂತ ನಾಗರಿಕರು ಈ ಅಕ್ರಮ ಬಯಲಿಗೆಳೆದು, ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆಹಾರ ಧಾನ್ಯ ಸಾಗಣೆಗೆ ಯತ್ನಸಿದ ಆ ವ್ಯಕ್ತಿ ಆಹಾರ ಧಾನ್ಯ ಬಿಟ್ಟು ಪರಾರಿಯಾಗಿದ್ದಾನೆ

ಸಾರ್ವಜನಿಕರ ಕರೆಯ ಮೇರೆಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಲು ವಶಪಡಿಸಿಕೊಳ್ಳುವ ಮೂಲಕ ಸಂಬಂಧಿಸಿದ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದೇನೆ. ಅಂಗನವಾಡಿ ಆಹಾರ ಧಾನ್ಯ ಸಾಗಣೆಗೆ ಕ್ರಮಬದ್ಧ ಮಾರ್ಗಗಳಿವೆ. ಅದುಬಿಟ್ಟು ರಜೆಯ ದಿನವಾದ ಭಾನುವಾರ ಆಹಾರ ಧಾನ್ಯ ಸಾಗಿಸುತ್ತಿರುವುದು ತಪ್ಪು. ಅಲ್ಲದೆ, ಬಸ್‌ ನಿಲ್ದಾಣದ ವಿಶ್ರಾಂತಿ ಗೃಹದಲ್ಲಿ ಅಂಗನವಾಡಿ ಅಕ್ಕಿ ಪಾಕೀಟ ಬೇರೆ ಚೀಲಗಳಿಗೆ ಬದಲಾಯಿಸಿರುವುದು ಕಂಡು ಬಂದಿದೆ. ಈ ಕುರಿತು ವರದಿ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿರುವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ