ಆ್ಯಪ್ನಗರ

ವಿಕಲಚೇತನೆಯ ವಿದೇಶಿ ಆನ್‌ಲೈನ್‌ ಪಾಠ !

ತೇರದಾಳ(ಬಾಗಲಕೋಟೆ): ದೇಶದಲ್ಲಿಪದವಿ ಹೊಂದಿದ ಅದೆಷ್ಟೋ ಯುವಕರು ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ. ಆದರೆ, ಸಾಧಿಸುವ ಛಲ ಹಾಗೂ ಪ್ರತಿಭೆ ಇದ್ದರೆ ನಾವೇ ಉದ್ಯೋಗ ಸೃಷ್ಟಿಸಿಕೊಳ್ಳಬಹುದು ಎಂಬುದನ್ನು ಸಾಧಿಸಿ ತೋರಿಸಿದ ತೇರದಾಳದ ವಿಶೇಷಚೇತನ ಯುವತಿಯೊಬ್ಬಳು ಅಮೇರಿಕಾದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲೇ ಪಾಠ ಮಾಡುವ ಮೂಲಕ ಜಿಲ್ಲೆಯ ಹೆಮ್ಮೆ ಹೆಚ್ಚಿಸಿದ್ದಾಳೆ.

Vijaya Karnataka 13 Dec 2019, 5:00 am
ಅರುಣ್‌ ತೇರದಾಳ, ತೇರದಾಳ(ಬಾಗಲಕೋಟೆ)
Vijaya Karnataka Web foreign online lessons for the disabled
ವಿಕಲಚೇತನೆಯ ವಿದೇಶಿ ಆನ್‌ಲೈನ್‌ ಪಾಠ !


ದೇಶದಲ್ಲಿಪದವಿ ಹೊಂದಿದ ಅದೆಷ್ಟೋ ಯುವಕರು ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ. ಆದರೆ, ಸಾಧಿಸುವ ಛಲ ಹಾಗೂ ಪ್ರತಿಭೆ ಇದ್ದರೆ ನಾವೇ ಉದ್ಯೋಗ ಸೃಷ್ಟಿಸಿಕೊಳ್ಳಬಹುದು ಎಂಬುದನ್ನು ಸಾಧಿಸಿ ತೋರಿಸಿದ ತೇರದಾಳದ ವಿಶೇಷಚೇತನ ಯುವತಿಯೊಬ್ಬಳು ಅಮೇರಿಕಾದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲೇ ಪಾಠ ಮಾಡುವ ಮೂಲಕ ಜಿಲ್ಲೆಯ ಹೆಮ್ಮೆ ಹೆಚ್ಚಿಸಿದ್ದಾಳೆ.

ತೇರದಾಳ ನಗರದ ಎಂಎ ಪದವಿಧರೆ ವಿಶೇಷಚೇತನ ಯುವತಿ ಜ್ಯೋತಿ ಮಲ್ಲಪ್ಪ ಬೀಳಗಿ ಆನ್‌ಲೈನ್‌ನಲ್ಲಿಪಾಠ ಮಾಡುವ ಮೂಲಕ ನಾಡಿನ ಹಿರಿಮೆ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ.

ಡಿಇಡಿ, ಬಿಈಡ್‌ ಮುಗಿಸಿ ಎಂಎ ಪದವಿ ಪೂರ್ಣಗೊಳಿಸಿರುವ ಜ್ಯೋತಿ ಬೀಳಗಿ ಅವರಿಗೆ ಸರಕಾರಿ ಸೇವೆ ಸಲ್ಲಿಸಬೇಕೆಂಬ ಆಸೆ. ಹಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದರೂ ಯಾವುದೇ ಸೇವೆ ಒದಗಿ ಬಂದಿಲ್ಲ. ಹೀಗಾಗಿ ಸರಕಾರಿ ಶಾಲೆಯಲ್ಲಿಅತಿಥಿ ಶಿಕ್ಷಕಿಯಾಗಿ ಹಾಗೂ ರಬಕವಿ ಪಟ್ಟಣದ ಪದ್ಮಾವತಿ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿಕೆಲ ಕಾಲ ಸೇವೆ ಸಲ್ಲಿಸಿದ್ದಾರೆ. ಒಂದು ದಿನ ಅಂರ್ತಜಾಲದ ವಬ್‌ಸೈಟ್‌ವೊಂದರಲ್ಲಿಸೇವೆಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಆಗ ಅವರಿಗೆ ಕಣ್ಣಿಗೆ ಬಿದ್ದಿದ್ದು, ಹೈದರಾಬಾದ್‌ನ ಸ್ಟಿಚಿಂಗ್‌ ಸ್ಟೊ್ರೕಂ. ಈ ಕಂಪನಿಯ ಮೂಲಕ ಆನ್‌ಲೈನ್‌ ಮುಖಾಂತರ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಅವಕಾಶ ಜ್ಯೋತಿ ಗಿಟ್ಟಿಸಿಕೊಂಡಿದ್ದಾರೆ.

ಅಮೇರಿಕಾ, ಸೌದಿ ಅರೆಬೀಯಾ ವಿದ್ಯಾರ್ಥಿಗಳಿಗೆ ಪಾಠ: ಹೈದರಾಬಾದ್‌ನ ಸ್ಟಿಚಿಂಗ್‌ ಸ್ಟೊ್ರೕಂ ಸಂಸ್ಥೆಗೆ ಸಬ್‌ಸ್ಕೆ್ರೖಬ್‌ ಆದ ವಿದ್ಯಾರ್ಥಿಗಳಿಗೆ ಜ್ಯೋತಿ ಬೀಳಗಿ ಬಯೋಲಾಜಿ ಹಾಗೂ ಕೆಮೆಸ್ಟ್ರಿ ವಿಷಯಗಳನ್ನು ಲ್ಯಾಪ್‌ಟಾಪ್‌ ಮೂಲಕ ಆನ್‌ಲೈನ್‌ನಲ್ಲಿಪಾಠ ಮಾಡುತ್ತಾರೆ. ಅದು ಕೂಡ ಬರವಣಿಗೆ ಮೂಲಕ. ವಿಡಿಯೋ ಕಾಲ್‌ ಮಾಡಲು ಕೂಡ ಅವಕಾಶ ಇಲ್ಲ. ಜ್ಯೋತಿ ಅವರ ಅವತ್ತಿನ ಪಾಠ ಆ ವಿದ್ಯಾರ್ಥಿಗಳಿಗೆ ಇಷ್ಟವಾಗಿದ್ದರೆ ಫೀಡ್‌ಬ್ಯಾಕ್‌ ಕೂಡ ನೀಡುತ್ತಾರೆ.

ದಿನಾಲೂ 4 ಗಂಟೆ ಪಾಠ: ಪ್ರತಿದಿನ ಜ್ಯೋತಿ ಅವರು ನಸುಕಿನ ಜಾವ 4.30ರಿಂದ (ಭಾರತೀಯ ಕಾಲಮಾನ) ಬೆಳಗ್ಗೆ 8.30ರವರೆಗೆ ನಾಲ್ಕು ಗಂಟೆಗಳ ಕಾಲ ಲ್ಯಾಪ್‌ಟಾಪ್‌ನಲ್ಲಿಆನ್‌ಲೈನ್‌ ಮೂಲಕ ಪಾಠ ಮಾಡುತ್ತಾರೆ. ಪ್ರತಿದಿನ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ಪಾಠ ಕೇಳುತ್ತಾರೆ. ಅವತ್ತಿನ ಪಾಠ ಇಷ್ಟವಾದರೆ ಮರುದಿನ ಅದೇ ವಿದ್ಯಾರ್ಥಿಗಳು ಮತ್ತೆ ಜ್ಯೋತಿ ಅವರ ಅಪಾಯಿಂಟ್‌ಮೆಂಟ್‌ ಪಡೆಯುತ್ತಾರೆ.

30 ಸಾವಿರಕ್ಕೂ ಅಧಿಕ ವೇತನ: ಆನ್‌ಲೈನ್‌ನಲ್ಲಿಅಂತರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಜ್ಯೋತಿ ಬೀಳಗಿ ಅವರು 2018ರ ಅಕ್ಟೋಬರ್‌ ತಿಂಗಳಲ್ಲಿಈ ಸೇವೆಗೆ ಸೇರ್ಪಡೆ ಆಗಿದ್ದಾರೆ. ಒಬ್ಬ ವಿದ್ಯಾರ್ಥಿಗೆ ಒಂದು ಗಂಟೆಗೆ 175 ರೂಪಾಯಿ ಸಂಸ್ಥೆ ನೀಡುತ್ತದೆ. ಪ್ರತಿ ತಿಂಗಳು ಜ್ಯೋತಿ ಮೂವತ್ತು ಸಾವಿರ ರೂಪಾಯಿ ವೇತನ ಮನೆಯಲ್ಲಿಯೇ ಕುಳಿತು ಸಂಪಾದಿಸುತ್ತಿದ್ದಾರೆ.

ರಾಜ್ಯದಲ್ಲಿಯೇ ಪ್ರಥಮ:

ಆನ್‌ಲೈನ್‌ ಮೂಲಕ ಅಂತಾರಾಷ್ಟ್ರದ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವವರು ರಾಜ್ಯದಲ್ಲಿಜ್ಯೋತಿ ಬೀಳಗಿ ಒಬ್ಬರೇ. ನಂತರದ ದಿನಗಳಲ್ಲಿತಮ್ಮ ಅತ್ತಿಗೆ ಬೆಂಗಳೂರಿನ ನಿವೇದಿತಾ ಬೀಳಗಿ ಹಾಗೂ ವಿಜಯಪುರದ ರೇವಣಸಿದ್ದ ಹಿರೇಮಠ ಅವರಿಗೂ ಕೂಡ ಈ ಬಗ್ಗೆ ತಿಳಿಸಿದ್ದಾರೆ. ಈಗ ಅವರು ಕೂಡ ಹೊರ ರಾಷ್ಟ್ರದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿಪಾಠ ಮಾಡಲು ಪ್ರಾರಂಭಿಸಿದ್ದಾರೆ.

ನನಗೆ ಕಾಲು ಮತ್ತು ಬೆನ್ನು ಅಲ್ಪವಾಗಿದೆ. ವೈದ್ಯರಿಂದ ಸಾಕಷ್ಟು ಚಿಕಿತ್ಸೆ ಪಡೆದರೂ ಯಾವುದೇ ಪ್ರಯೋಜವಾಗಿಲ್ಲ. ನಾನು ಪದವಿ ಹೊಂದಿದ್ದರು ಸರಕಾರಿ ಸೇವೆಗೆ ಸೇರಲು ಆಗದಿರುವುದು ನನಗೆ ನೋವು ಮೂಡಿಸಿತ್ತು. ಅಂರ್ತಜಾಲದಲ್ಲಿನೌಕರಿ ಹುಡುಕಿದಾಗ ಹೈದರಾಬಾದ್‌ನ ಕಂಪನಿಯೊಂದರಿಂದ ವಿದೇಶಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಅವಕಾಶ ಸಿಕ್ಕಿತು. ನಿಜಕ್ಕೂ ನನಗೆ ತುಂಬಾ ಖುಷಿ ಆಗಿದೆ.

-ಜ್ಯೋತಿ ಮಲ್ಲಪ್ಪ ಬೀಳಗಿ. ತೇರದಾಳ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ