ಆ್ಯಪ್ನಗರ

ಮಾನವೀಯತೆ ಮೆರೆದ ಮಾಜಿ ಸಚಿವ

ಅಪಘಾತವೊಂದರಲ್ಲಿಗಾಯಗೊಂಡವರ ಆರೋಗ್ಯ ವಿಚಾರಿಸಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾಜಿ ಸಚಿವ ಆರ್‌.ಬಿ.ತಿಮ್ಮಾಪೂರ ಮಾನವೀಯತೆ ಮೆರೆದಿದ್ದಾರೆ.

Vijaya Karnataka Web 16 Jun 2020, 5:00 am
ಬಾಗಲಕೋಟೆ : ಅಪಘಾತವೊಂದರಲ್ಲಿಗಾಯಗೊಂಡವರ ಆರೋಗ್ಯ ವಿಚಾರಿಸಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾಜಿ ಸಚಿವ ಆರ್‌.ಬಿ.ತಿಮ್ಮಾಪೂರ ಮಾನವೀಯತೆ ಮೆರೆದಿದ್ದಾರೆ.
Vijaya Karnataka Web TIMMAPUR-BGK-15-1_41


ತಾಲೂಕಿನ ಸಂಗಮ ಕ್ರಾಸ್‌ ಬಳಿ ನಡೆದ ಅಪಘಾತದಲ್ಲಿವಿಜಯಪುರ ಜಿಲ್ಲೆಯ ಬಾಗೇವಾಡಿ ತಾಲೂಕಿನ ಅರಳದಿನ್ನಿ ಗ್ರಾಮದ ಬಸಯ್ಯ ಹಿರೇಮಠ ಹಾಗೂ ಮತ್ತೊಬ್ಬರು ಸಣ್ಣ ಪುಟ್ಟ ಗಾಯದೊಂದಿಗೆ ರಸ್ತೆ ಪಕ್ಕದಲ್ಲಿನರಳಾಡುತ್ತಿದ್ದರು.

ಇದೇ ಮಾರ್ಗದ ಮೂಲಕ ಬೆನಕಟ್ಟಿ ಗ್ರಾಮದಲ್ಲಿಕಾರ್ಯಕರ್ತರೊಬ್ಬರ ವಿವಾಹ ಕಾರ್ಯಕ್ರಮದ ನಂತರ ತೆರಳುತ್ತಿದ್ದ ಮಾಜಿ ಸಚಿವ ಆರ್‌.ಬಿ.ತಿಮ್ಮಾಪೂರ ಅವರನ್ನು ಗಮನಿಸಿ ತಮ್ಮ ಕಾರ್‌ನ್ನು ನಿಲ್ಲಿಸಿದ್ದಾರೆ. ನಂತರ ಅವರ ಬಳಿಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ. ಕೂಡಲೇ 108 ಆಂಬುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ