ಆ್ಯಪ್ನಗರ

ಶಾಲೆ ಪ್ರಾರಂಭದಿಂದ ಶಿಕ್ಷ ಕ ನಾಪತ್ತೆ !

ತೇರದಾಳ: ಪ್ರಸಕ್ತ ಸಾಲಿನ ಮೇ 29ರಿಂದ ಪ್ರಾರಂಭಗೊಂಡಾಗಿನಿಂದ ಸರಕಾರಿ ಶಾಲೆ ಶಿಕ್ಷ ಕ ನಾಪತ್ತೆ ಆಗಿರುವ ಘಟನೆ ಸಮೀಪದ ಗೋಲಭಾವಿ ಗ್ರಾಮದ ತೋಟ ನಂ.1ರ ಸರಕಾರಿ ಎಲ್‌ಪಿಎಸ್‌ ಶಾಲೆಯಲ್ಲಿ ನಡೆದಿದೆ.

Vijaya Karnataka 22 Jun 2019, 5:00 am
ತೇರದಾಳ: ಪ್ರಸಕ್ತ ಸಾಲಿನ ಮೇ 29ರಿಂದ ಪ್ರಾರಂಭಗೊಂಡಾಗಿನಿಂದ ಸರಕಾರಿ ಶಾಲೆ ಶಿಕ್ಷ ಕ ನಾಪತ್ತೆ ಆಗಿರುವ ಘಟನೆ ಸಮೀಪದ ಗೋಲಭಾವಿ ಗ್ರಾಮದ ತೋಟ ನಂ.1ರ ಸರಕಾರಿ ಎಲ್‌ಪಿಎಸ್‌ ಶಾಲೆಯಲ್ಲಿ ನಡೆದಿದೆ.
Vijaya Karnataka Web golbhavi teacher missing from school starts
ಶಾಲೆ ಪ್ರಾರಂಭದಿಂದ ಶಿಕ್ಷ ಕ ನಾಪತ್ತೆ !


ಆರ್‌.ಜಿ.ನಡುವಿನಕೇರಿ ನಾಪತ್ತೆ(ಅನಧಿಕೃತ) ಆಗಿರುವ ಶಿಕ್ಷ ಕ.

ಘಟನೆ ವಿವರ:


ಮೇ 29ರಿಂದ ಶಾಲೆಗಳು ಪ್ರಾರಂಭಗೊಂಡಿವೆ. ಅದರಂತೆ ಗೋಲಭಾವಿ ವಲಯದ ಶಿಕ್ಷ ಣ ಇಲಾಖೆ ಸಿಆರ್‌ಪಿ ಆರ್‌.ಎ. ನ್ಯಾಮಗೌಡ ಅವರು ಗ್ರಾಮದ ತೋಟ ನಂ1ರ ಎಲ್‌ಪಿಎಸ್‌ ಶಾಲೆಗೆ ಪ್ರಾರಂಭೋತ್ಸವ ವೀಕ್ಷ ಣೆಗೆ ಭೇಟಿ ನೀಡಿದ್ದಾರೆ. ಆದರೆ ಅವರು ಶಾಲೆಗೆ ಹೋದಾಗ ಬೀಗ ಹಾಕಲಾಗಿತ್ತು. ಆಗ ಸಿಆರ್‌ಪಿ ನ್ಯಾಮಗೌಡ ಅವರು ಶಿಕ್ಷ ಕ ನಡುವಿನಕೇರಿ ಅವರ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಆದರೆ ಅದು ಸ್ವಿಚ್‌ ಆಫ್‌ ಆಗಿತ್ತು. ಇದರಿಂದ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಸ್‌ ಹೋಗಿದ್ದಾರೆ. ನಂತರ ಮಾರನೇ ದಿನ ಹೋಗಿ ನೋಡಿದರು ಅದೇ ಸ್ಥಿತಿ!. ಮಕ್ಕಳು ಶಾಲೆಗೆ ಬಂದು ವಾಪಸ್‌ ಹೋಗುವುದನ್ನು ಗಮನಿಸಿದ ಸಿಆರ್‌ಪಿ ಅವರು ಗ್ರಾಮದ ಎಚ್‌ಪಿಎಸ್‌ ಶಾಲೆಯ ಕೋನೆ ಎಂಬ ಶಿಕ್ಷ ಕರನ್ನು ತೋಟದ ಶಾಲೆಗೆ ನಿಯೋಜನೆಗೊಳಿಸಿ ಆದೇಶ ಹೊರಡಿಸಿದ್ದಾರೆ. ಆದರೆ ಕೋನೆ ಅವರು ತಮಗೆ ಆರೋಗ್ಯ ಸರಿ ಎಂಬ ದಾಖಲೆಗಳನ್ನು ಇಲಾಖೆಗೆ ಸಲ್ಲಿಸಿ ತೋಟದ ಶಾಲೆಗೆ ಹಾಜರ್‌ ಆಗಿಲ್ಲ.

ವಾರದಲ್ಲಿ ಇಬ್ಬರು ಅತಿಥಿ!

ನಾಪತ್ತೆ ಆಗಿರುವ ಶಿಕ್ಷ ಕ ಆರ್‌.ಜಿ. ನಡುವಿನಕೇರಿ ಇಂದಿನವರೆಗೆ ಪತ್ತೆ ಆಗಿಲ್ಲ. ಇತ್ತ ನಿಯೋಜನೆಗೊಳಿಸಿದ ಶಿಕ್ಷ ಕ ಕೂಡ ಅನಾರೋಗ್ಯದ ನೆಪದಿಂದ ಹಾಜರ್‌ಆಗಿಲ್ಲ. ಈಗ ಅದೇ ಎಚ್‌ಪಿಎಸ್‌ ಶಾಲೆಯಿಂದ ಬೇರೆ ಶಿಕ್ಷ ಕರನ್ನು ಮೌಖಿಕ ಸೂಚನೆ ಮೇರೆಗೆ ತೋಟದ ಶಾಲೆಗೆ ಕಳುಹಿಸಲಾಗುತ್ತಿದೆ. ಮೂರು ದಿನಕ್ಕೆ ಒಬ್ಬರು ಶಿಕ್ಷ ಕರು ಹೋಗುತ್ತಿದ್ದು, ವಾರದಲ್ಲಿ ಇಬ್ಬರು ಅತಿಥಿ ಶಿಕ್ಷ ಕರನ್ನು ಶಾಲೆಯ ಮಕ್ಕಳು ಕಾಣುತ್ತಿದ್ದಾರೆ. 1ರಿಂದ 5ನೇ ತರಗತಿವರೆಗೆ 50ಕ್ಕೂ ಅಧಿಕ ಮಕ್ಕಳಿದ್ದು, ಶಿಕ್ಷ ಕರು ಇಲ್ಲದ ಕಾರಣ ಮಕ್ಕಳು ಕೂಡ ಸರಿಯಾಗಿ ಶಾಲೆಗೆ ಬರುತ್ತಿಲ್ಲ. ಅದೇನೇ ಆಗಲಿ ಹೀಗೆ ವಾರದಲ್ಲಿ ಇಬ್ಬರು ಬೇರೆ ಬೇರೆ ಶಿಕ್ಷ ಕರನ್ನು ಕಳುಹಿಸುವ ಬದಲು ಶಾಶ್ವತ ಶಿಕ್ಷ ಕರನ್ನು ನೇಮಿಸುವ ಕೆಲಸ ಇಲಾಖೆ ಮಾಡುವ ಮೂಲಕ ಮಕ್ಕಳು ಶಾಲೆಗೆ ಬರುವಂತೆ ಮಾಡಬೇಕಿದೆ.

ನಮ್ಮ ಶಾಲೆಯ ಮುಖ್ಯಗುರುಗಳು ಸೂಚಿಸಿದ ಹಿನ್ನೆಲೆಯಲ್ಲಿ ಮೂರು ದಿನ ತೋಟದ ಶಾಲೆಗೆ ಬಂದಿದ್ದೇನೆ. ಹೆಚ್ಚಿನ ಮಾಹಿತಿ ತಮಗೆ ಇಲ್ಲ.
ಬಿ.ಎನ್‌.ವಾಜಂತ್ರಿ.

ಗೋಲಭಾವಿ ತೋಟ ನಂ.1ರ ಎಲ್‌ಪಿಎಸ್‌ ಶಾಲೆಯ ಶಿಕ್ಷ ಕ ಆರ್‌.ಜಿ.ನಡುವಿನಕೇರಿ ಅವರು ಶಾಲೆ ಪ್ರಾರಂಭಗೊಂಡಾಗಿನಿಂದ ಅನಧಿಕೃತವಾಗಿ ಗೈರು ಆಗಿದ್ದಾರೆ. ಅವರ ಮೊಬೈಲ್‌ ಕೂಡ ಬಂದ್‌ ಆಗಿದೆ. ಈ ಬಗ್ಗೆ ಬಿಇಒ ಅವರಿಗೆ ವರದಿ ಸಲ್ಲಿಸಲಾಗಿದೆ. ಶಿಕ್ಷ ಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಯಾರಾದರು ತೋಟದ ಶಾಲೆಗೆ ತೆಗೆದುಕೊಳ್ಳುತ್ತಾರೆ ಎಂಬುದನ್ನು ಗಮನಿಸಲಾಗುವುದು. ಯಾರು ತೆಗೆದುಕೊಳ್ಳದಿದ್ದರೆ ಅತಿಥಿ ಶಿಕ್ಷ ಕ ಹಾಗೂ ಒಬ್ಬರನ್ನು ನಿಯೋಜನೆ ಕೂಡ ಮಾಡಲಾಗುವುದು.

ಆರ್‌.ಎ. ನ್ಯಾಮಗೌಡ, ಗೋಲಭಾವಿ ವಲಯ ಸಿಆರ್‌ಪಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ