ಆ್ಯಪ್ನಗರ

ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ : ಮರು ಸರ್ವೆಗೆ ಭರವಸೆ

ಆಕ್ರೋಶ ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ: ಮರು ಸರ್ವೆಗೆ ಭರವಸೆ ಗುಳೇದಗುಡ್ಡ: ನೆರೆ ಸಂತ್ರಸ್ತರಿಗೆ ಅಸರ್ಮಪಕವಾಗಿ ಪರಿಹಾರ ಕಿಟ್‌ ವಿತರಣೆ ಮಾಡಿದ್ದು, ಪರಿಹಾರ ...

Vijaya Karnataka 27 Aug 2019, 5:00 am
ಗುಳೇದಗುಡ್ಡ: ನೆರೆ ಸಂತ್ರಸ್ತರಿಗೆ ಅಸರ್ಮಪಕವಾಗಿ ಪರಿಹಾರ ಕಿಟ್‌ ವಿತರಣೆ ಮಾಡಿದ್ದು, ಪರಿಹಾರ ನೀಡುವಲ್ಲಿತಾರತಮ್ಯವಾಗಿದೆ ಎಂದು ಲಾಯದಗುಂದಿ ಗ್ರಾಪಂ ಹಾಗೂ ಕಂದಾಯ ಇಲಾಖೆ ಅಧಿಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಗ್ರಾಪಂ ಎದುರು ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
Vijaya Karnataka Web guledagudda town fire on tire protest
ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ : ಮರು ಸರ್ವೆಗೆ ಭರವಸೆ


ಸರಿಯಾಗಿ ಸರ್ವೆ ಮಾಡಿಲ್ಲ. ಗ್ರಾಮದಲ್ಲಿ300ಕ್ಕೂ ಹೆಚ್ಚು ಮನೆ ಹಾನಿಯಾಗಿವೆ. ಆದರೆ ಬರೀ 206ಮನೆಗಳಿಗೆ ಕಿಟ್‌ ಹಾಗೂ ಪರಿಹಾರ ನೀಡಲಾಗಿದೆ. ಉಳಿದವರು ಏನು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಕ್ಕೆ ತಹಸೀಲ್ದಾರರು ಬಂದು ಎಲ್ಲರಿಗೂ ಪರಿಹಾರ ಕೊಡಬೇಕು ಎಂದು ಗ್ರಾಪಂ ಮುಂದೆ ಕುಳಿತು ಪಟ್ಟು ಹಿಡಿದರು. ತಹಸೀಲ್ದಾರ್‌ ನಿಂಗಣ್ಣ ಬಿರಾದಾರ ಗ್ರಾಮಕ್ಕೆ ಭೇಟಿ ಕೊಟ್ಟು, ಆಗಿರುವ ತಪ್ಪು ಸರಿಪಡಿಸಲು ಮರು ಸರ್ವೆ ಮಾಡಿಸಿ, ಉಳಿದ ಸಂತ್ರಸ್ತರಿಗೂ ಸೌಲಭ್ಯ ನೀಡುವಂತೆ ಮಾಡುತ್ತೇನೆಂದು ಭರವಸೆ ನೀಡಿದರು. ಎರಡು ಇಲಾಖೆ ಅಧಿಧಿಕಾರಿಗಳ ಮಧ್ಯೆ ಪರಸ್ಪರ ಮಾತಿನ ಚಕಮಕಿ ನಡೆಯಿತು.

ಬಸವರಾಜ ಗೋನಾಳ, ಮಲ್ಲಪ್ಪ ಗೌಡರ, ಯಲ್ಲಪ್ಪ ಬಂಡಿವಡ್ಡರ,ಚನ್ನಪ್ಪ ಹಕಾರಿ, ಬರಹಾಣಾಪೂರ ಪ್ರತಿಭಟನೆಯಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ