ಆ್ಯಪ್ನಗರ

ನನ್ನ ಬದುಕು ನಾಶ ಮಾಡಿದವ ಸರ್ವನಾಶವಾಗಲಿ: ಹನುಮನ ಹುಂಡಿಗೆ ಪತ್ರ

ಪರೀಕ್ಷೆಯಲ್ಲಿ ಪಾಸ್‌ ಮಾಡಿಸು, ನನಗೊಂದು ನೌಕರಿ ಕೊಡಿಸು, ಮದುವೆ ಮಾಡಿಸು... ಹುಂಡಿ ತೆರೆದಾಗ ದೇವರಲ್ಲಿ ಭಕ್ತರು ಮೊರೆ ಇಡುವ ಇಂಥ ಪತ್ರಗಳು ಸಿಗುವುದು ಸಾಮಾನ್ಯ. ಆದರೆ ಈ ಬಾರಿ 'ನನ್ನ ಬದುಕನ್ನು ಹಾಳು ಮಾಡಿದ ಭೀಮ ಮತ್ತು ಅವನ ತಂಗಿ ಸರ್ವನಾಶವಾಗಬೇಕು' ಎಂಬ ಆಕ್ರೋಶದ ಪತ್ರವೊಂದು ಹುಂಡಿಯಲ್ಲಿ ಕಂಡುಬಂದಿದೆ.

ವಿಕ ಸುದ್ದಿಲೋಕ 10 Jun 2017, 12:39 pm

ಕಲಾದಗಿ: ಪರೀಕ್ಷೆಯಲ್ಲಿ ಪಾಸ್‌ ಮಾಡಿಸು, ನನಗೊಂದು ನೌಕರಿ ಕೊಡಿಸು, ಮದುವೆ ಮಾಡಿಸು... ಹುಂಡಿ ತೆರೆದಾಗ ದೇವರಲ್ಲಿ ಭಕ್ತರು ಮೊರೆ ಇಡುವ ಇಂಥ ಪತ್ರಗಳು ಸಿಗುವುದು ಸಾಮಾನ್ಯ. ಆದರೆ ಈ ಬಾರಿ 'ನನ್ನ ಬದುಕನ್ನು ಹಾಳು ಮಾಡಿದ ಭೀಮ ಮತ್ತು ಅವನ ತಂಗಿ ಸರ್ವನಾಶವಾಗಬೇಕು' ಎಂಬ ಆಕ್ರೋಶದ ಪತ್ರವೊಂದು ಹುಂಡಿಯಲ್ಲಿ ಕಂಡುಬಂದಿದೆ. ಮುಂದಿನ ಅಮಾವಾಸ್ಯೆಯೊಳಗೆ ಈ ಕೆಲಸವಾಗಬೇಕು ಎಂಬುದಾಗಿಯೂ ಬರೆದ ಈ ಪತ್ರದಲ್ಲಿ ಯಾರ ಹೆಸರೂ ಇಲ್ಲ.

Vijaya Karnataka Web hanuman temple endorsee
ನನ್ನ ಬದುಕು ನಾಶ ಮಾಡಿದವ ಸರ್ವನಾಶವಾಗಲಿ: ಹನುಮನ ಹುಂಡಿಗೆ ಪತ್ರ


ಇದು ತುಳಸಿಗೇರಿ ಹನುಮಪ್ಪನ ಹುಂಡಿಯಲ್ಲಿ ಸಿಕ್ಕಿದ ಪತ್ರದ ಸಾರಾಂಶ. ಹುಂಡಿ ನೋಡಿದಾಗ ಅರಬ್‌ ದೇಶಕ್ಕೂ ಈ ಹನುಮಪ್ಪನಿಗೂ ಅದೆಂಥ ಭಕ್ತಿಯ ನಂಟು ಎಂಬ ಪ್ರಶ್ನೆ ಕೂಡ ಕಾಡುತ್ತಿದೆ. ಭಾರತದಿಂದ ಅರಬ್‌ ದೇಶಕ್ಕೆ ಹೋಗಿ ನೆಲೆಸಿದವರಲ್ಲಿ ನಮ್ಮ ಹನುಮಪ್ಪನ ಭಕ್ತರೂ ಇರಬಹುದೇ, ಶ್ರೀಲಂಕಾದಲ್ಲೂ ತುಳಸಿಗೇರೆಪ್ಪನ ಭಕ್ತರು ಇದ್ದಾರೆಯೇ ಎಂಬ ಪ್ರಶ್ನೆಗಳು ತುಳಸಿಗೇರಿ ಗ್ರಾಮದ ಹನುಮಪ್ಪನ ಭಕ್ತರಲ್ಲಿ ಮೂಡಿವೆ!

ಹೌದು, ಈ ಭಾಗದ ಪ್ರಸಿದ್ಧ ಪವಮಾನ ಕ್ಷೇತ್ರ ಎನಿಸಿದ ತುಳಸಿಗೇರಿ ಹನುಮಪ್ಪನ ದೇವಸ್ಥಾನದಲ್ಲಿನ ಹುಂಡಿಗಳಲ್ಲಿ ಅರಬ್‌ ಹಾಗೂ ಶ್ರೀಲಂಕಾ ದೇಶದ ನಾಣ್ಯಗಳು ದೊರಕಿ ಅಚ್ಚರಿ ಮೂಡಿಸಿವೆ.

ದೇವಸ್ಥಾನದ ಆಡಳಿತಾಧಿಕಾರಿ, ಬಾಗಲಕೋಟ ತಹಸೀಲ್ದಾರ್‌ ವಿನಯಕುಮಾರ ಕುಲಕರ್ಣಿ ಅವರ ನೇತೃತ್ವದಲ್ಲಿ ದೇವಸ್ಥಾನದ ಅಂಗಳದಲ್ಲಿನ ನಾಲ್ಕನೇ ಹುಂಡಿ ತೆರೆದು ಹಣ ಎಣಿಸುತ್ತಿದ್ದಾಗ ಈ ಅಚ್ಚರಿ ಕಂಡು ಬಂದಿದೆ. ಹುಂಡಿಯಲ್ಲಿ ಅರಬ್‌ ದೇಶದ 50 ದಿರಮ್ಸ್‌ ಎಂದು ಬರೆದ ಒಂದು ನಾಣ್ಯ ಲಭ್ಯವಾಗಿದ್ದು, ಭಾರತೀಯರ ಪ್ರಕಾರ ದರ ಬೆಲೆ 875 ರೂ. ಇದರ ಜತೆಗೆ ಶ್ರೀಲಂಕಾ ದೇಶದ 1ರೂ. ನಾಣ್ಯವೂ ಹುಂಡಿಯಲ್ಲಿ ದೊರಕಿದೆ.

ಕಳೆದ ಡಿಸೆಂಬರ್‌ನಲ್ಲಿ ಹುಂಡಿ ತೆರೆದು ಹಣ ಎಣಿಸುತ್ತಿದ್ದಾಗಲೂ ಅರಬ್‌ ದೇಶದ 5ದಿರಮ್ಸ್‌ ನೋಟು ಲಭ್ಯವಾಗಿತ್ತು. ಈ ವರ್ಷ ನಾಣ್ಯ ಲಭ್ಯವಾಗಿದ್ದು, ಅಲ್ಲಿ ನೆಲೆಸಿರುವ ಭಾರತೀಯ ಭಕ್ತರು ತುಳಸಿಗೇರಿ ಹನುಮಪ್ಪನ ಭಕ್ತರಿದ್ದು, ಆಗಾಗ ಇಲ್ಲಿಗೆ ಬಂದು ಹೋಗುತ್ತಿರಬಹುದು ಎಂಬ ಅನುಮಾನ ಇಲ್ಲಿನ ಭಕ್ತರಲ್ಲಿ ಮೂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ