ಆ್ಯಪ್ನಗರ

ಬಾಗಲಕೋಟೆ: ಅಪಾಯದ ಮಟ್ಟ ತಲುಪಿದ ಕೃಷ್ಣೆ ನದಿ, ಕೈಯಲ್ಲಿ ಹಾಲಿನ ಕ್ಯಾನ್ ಹಿಡಿದು ಈಜಿದ ರೈತರು

ಹರಿಯುವ ಕೃಷ್ಣೆಯ ಮಧ್ಯೆ ಈಜುತ್ತಲೇ ಹಾಲು ಮಾರಾಟಕ್ಕೆ ರೈತರು ತೆರಳಿದ್ದಾರೆ. ನಡುಗಡ್ಡೆಯಿಂದ ತುಬಚಿ ಗ್ರಾಮಕ್ಕೆ ಹಾಲು ಮಾರಾಟಕ್ಕೆ ರೈತರು ಮುಂದಾಗಿದ್ದಾರೆ.

Vijaya Karnataka Web 24 Jul 2021, 12:44 pm
ಬಾಗಲಕೋಟೆ: ಮುಳುಗಡೆ ನಾಡು ಎಂದೇ ಹೆಸರಾಗಿರುವ ಬಾಗಲಕೋಟೆಯಲ್ಲಿ ಮಳೆಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
Vijaya Karnataka Web ಬಾಗಲಕೋಟೆ
ಬಾಗಲಕೋಟೆ


ವರುಣನ ಆರ್ಭಟದಿಂದಾಗಿ ಕೃಷ್ಣೆ ನದಿ ತುಂಬು ತುಳುಕುತ್ತಿದ್ದು, ರೈತರು ಹಾಗೂ ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತುಬಚಿ- ಮುತ್ತೂರು ನಡುಗಡ್ಡೆ ಸಂಪೂರ್ಣ ಜಲಾವೃತಗೊಂಡಿದೆ.

ಪರಿಸ್ಥಿತಿ ಹೀಗಿದ್ದರೂ ರೈತರು ಹಾಲು ಮಾರಲು ಮುಂದಾಗಿರುವುದು ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.

ಹರಿಯುವ ಕೃಷ್ಣೆಯ ಮಧ್ಯೆ ಈಜುತ್ತಲೇ ಹಾಲು ಮಾರಾಟಕ್ಕೆ ರೈತರು ತೆರಳಿದ್ದಾರೆ. ನಡುಗಡ್ಡೆಯಿಂದ ತುಬಚಿ ಗ್ರಾಮಕ್ಕೆ ಹಾಲು ಮಾರಾಟಕ್ಕೆ ರೈತರು ಮುಂದಾಗಿದ್ದಾರೆ.

ಕೃಷ್ಣಾ ನದಿಗೆ ಹರಿದು ಈಗಾಗಲೇ 2 ಲಕ್ಷ 17 ಸಾವಿರ ಕ್ಯುಸೆಕ್‌ ನೀರು ಹರಿದು ಬಂದಿದೆ. ಪ್ರತಿವರ್ಷ ಪ್ರವಾಹ ಭೀತಿ ಎದುರಾದರೂ ನಡುಗಡ್ಡೆಯಲ್ಲೇ 100ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿವೆ.

ನಡುಗಡ್ಡೆಯ ರೈತ ಕುಟುಂಬಗಳು ಹಾಲು ಮಾರಾಟದಿಂದಲೇ ಬದುಕು ಸಾಗಿಸುತ್ತಿದ್ದಾರೆ.

ನಡುಗಡ್ಡೆಯಿಂದ ತುಬಚಿ ಗ್ರಾಮಕ್ಕೆ ಎತ್ತರವಾಗಿ ಸೇತುವೆ ನಿರ್ಮಿಸುವಂತೆ ರೈತ ಕುಟುಂಬಗಳು ಮನವಿ ಮಾಡುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ