ಆ್ಯಪ್ನಗರ

ಹೆಸ್ಕಾಂ ನೌಕರರು ಎಸಿಬಿ ಬಲೆಗೆ

ಬಾಗಲಕೋಟೆ: ರೈತರ ಟ್ರಾನ್ಸ್‌ಫಾರ್ಮರ್‌ ಬದಲಿಸಿಕೊಡಲು ಲಂಚ ಪಡೆಯುತ್ತಿದ್ದ ಕೆರೂರನ ಹೆಸ್ಕಾಂ ಸಿಬ್ಬಂದಿ ಮೇಲೆ ಎಸಿಬಿ ಪೊಲೀಸರು ದಾಳಿ ನಡೆಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

Vijaya Karnataka 16 Oct 2019, 5:00 am
ಬಾಗಲಕೋಟೆ: ರೈತರ ಟ್ರಾನ್ಸ್‌ಫಾರ್ಮರ್‌ ಬದಲಿಸಿಕೊಡಲು ಲಂಚ ಪಡೆಯುತ್ತಿದ್ದ ಕೆರೂರನ ಹೆಸ್ಕಾಂ ಸಿಬ್ಬಂದಿ ಮೇಲೆ ಎಸಿಬಿ ಪೊಲೀಸರು ದಾಳಿ ನಡೆಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
Vijaya Karnataka Web hescom employees acb trap
ಹೆಸ್ಕಾಂ ನೌಕರರು ಎಸಿಬಿ ಬಲೆಗೆ


ಜಮೀನಿನಲ್ಲಿಸುಟ್ಟ ಟ್ರಾನ್ಸ್‌ಫಾರ್ಮರ್‌ ಬದಲಾಯಿಸಿ ಕೊಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರನ ಇಬ್ಬರು ಸಿಬ್ಬಂದಿ ಬಂಧನಕ್ಕೊಳಗಾಗಿದ್ದಾರೆ. ಸೆಕ್ಷನ್‌ ಆಫೀಸರ್‌ ಗೋಪಾಲ ಪೂಜಾರಿ, ಸ್ವೀಪರ್‌ ಹಣಮಂತ ಅಜ್ಜೋಡಿ ಬಂಧಿತರು. ಲಂಚ ಕೇಳಿದ್ದ ಸೂಪರ್‌ವೈಸರ್‌ ಕಿರಣ ಗುರಿಕಾರ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಶೋಧನೆ ನಡೆಸಲಾಗುತ್ತಿದೆ.

ಕಾಡರಕೊಪ್ಪ ಗ್ರಾಮದ ರೈತ ಗದಿಗೆಪ್ಪ ಅರಳಿಮಟ್ಟಿಯವರ ಜಮೀನಿನಲ್ಲಿಅಳವಡಿಸಲಾಗಿದ್ದ ಟಿಸಿ ಸುಟ್ಟಿತ್ತು. ಬೇರೆ ಟಿಸಿ ಅಳವಡಿಸಿಕೊಡುವಂತೆ ಗದಿಗೆಪ್ಪ ಅವರು ಕೇಳಿದಾಗ ಸಿಬ್ಬಂದಿ 15 ಸಾವಿರ ರೂ.ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಭಾನುವಾರ 10 ಸಾವಿರ ರೂ. ನೀಡಿದ್ದ ರೈತ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಮಂಗಳವಾರ ಕಚೇರಿ ಆವರಣದಲ್ಲಿಹಣಮಂತ ಮೂಲಕ ಲಂಚ ಪಡೆಯುತ್ತಿದ್ದಾಗ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಿಪಿಐಗಳಾದ ರಾಘವೇಂದ್ರ ಹಳ್ಳೂರ, ಚಂದ್ರಶೇಖರ ಮಠಪತಿ ನೇತೃತ್ವದಲ್ಲಿದಾಳಿ ನಡೆಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ