ಆ್ಯಪ್ನಗರ

ಬಾಗಲಕೋಟೆ: ಗಣೇಶನಿಗೆ ಮುಸ್ಲಿಮರು ಮಾಡಿದ ಅನ್ನದ ನೈವೇದ್ಯ, ಮಂಗಳಾರತಿ

ಬಾಗಲಕೋಟೆಯ ಜಮಖಂಡಿಯಲ್ಲಿ ಗಣೇಶ ಉತ್ಸವನ್ನು ಹಿಂದೂ ಮುಸ್ಲಿಮರು ಜಂಟಿಯಾಗಿ ಆಚರಿಸಿದ್ದಾರೆ. ಮುಸ್ಲಿಮರು ತಯಾರಿಸಿದ ಅನ್ನದ ಪ್ರಸಾದವನ್ನೇ ನೈವೇದ್ಯಕ್ಕೆ ಇಡಲಾಗಿದೆ. ಭಾವ್ಯಕ್ಯತೆ ಮೆರೆಯಲಾಗಿದೆ.

Vijaya Karnataka Web 7 Sep 2019, 6:14 pm
ಬಾಗಲಕೋಟೆ: ಬಾಗಲಕೋಟೆಯಲ್ಲಿ ನಡೆಯುವ ಗಣೇಶನ ಪೂಜೆ ಸಂದರ್ಭದಲ್ಲಿ ಮುಸ್ಲಿಮರು ತಯಾರಿಸಿದ ಅನ್ನವೇ ನೈವೇದ್ಯ ಮಾಡಲಾಗುತ್ತದೆ. ಕೇಸರಿ ಶಾಲು ಹೊದ್ದ ಮುಸ್ಲಿಮರೇ ಮಂಗಳಾರತಿ ಮಾಡುತ್ತಾರೆ.
Vijaya Karnataka Web ಗಣೇಶ ಉತ್ಸವ
ಗಣೇಶ ಉತ್ಸವ


ಇದು ಬಾಗಲಕೋಟೆ ಜಮಖಂಡಿಯಲ್ಲಿನ ಹಿಂದೂ ಮುಸ್ಲಿಮ್‌ ಭಾವೈಕ್ಯದ ಸಂಗಮ. ಗಣಪತಿ ಬಪ್ಪ ಮೋರಾಯ ಎಂದು ಘೋಷಣೆಗಳು ಕೂಗಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು ಮುಸ್ಲಿಮರು.

ಜಮಖಂಡಿ ನಗರದ ಪೋಲೋ ಮೈದಾನದಲ್ಲಿ ಪ್ರತಿಷ್ಠಾಸಿದ ಮಹಾಗಣಪತಿ ಉತ್ಸವದಲ್ಲಿ ಮುಸ್ಲಿಮ್ ಬಾಂಧವರು ಭಾವೈಕ್ಯತೆ ಮೆರೆದರು.

ಮಹಾ ಗಣೇಶೋತ್ಸವ ಸಂದರ್ಭದಲ್ಲಿ ಮುಸ್ಲಿಮರು ಅನ್ನ ಪ್ರಸಾದ ನೇವೈದ್ಯ ಮಾಡಿದ್ದಾರೆ. 11 ಸಾವಿರ ಹಿಂದೂಗಳಿಗೆ 4 ಕ್ವಿಂಟಾಲ್‌ ಅಕ್ಕಿಯಿಂದ ಕೇಸರಿ ಬಾತ್‌ ತಯಾರಿಸಿ ಪ್ರಸಾದ ವಿನಿಮಯ ಮಾಡಿದ್ದಾರೆ.

ಗಣೇಶನ ಪೂಜೆ ಸಂದರ್ಭ ಬಂದ ದೇಣಿಗೆಯನ್ನು ನೆರೆಪೀಡಿತ ಸಂತ್ರಸ್ತರಿಗೆ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ