ಆ್ಯಪ್ನಗರ

ಮರಿಗೆ ದಿನವಿಡಿ ರಕ್ಷಣೆ ನೀಡಿ ಮಮತೆ ಮೆರೆದ ತಾಯಿ ಕುದುರೆ

ಮರಿ ಕುದುರೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಸೊಂಟಕ್ಕೆ ತೀವ್ರ ಏಟು ಬಿದ್ದ ಪರಿಣಾಮ ಮರಿ ಸ್ಥಳದಲ್ಲಿಯೇ ಮಲಗಿಕೊಂಡಿದೆ. ಇದನ್ನು ನೋಡಿದ ತಾಯಿ ಕುದುರೆ ದಿನವಿಡಿ ಸ್ಥಳದಲ್ಲಿಯೇ ನಿಂತು ವೇದನೆ ಅನುಭವಿಸಿದೆ.

Vijaya Karnataka Web 22 Jul 2019, 7:38 am
ಬಾಗಲಕೋಟ: ತಾಯಿ ಪ್ರೀತಿ ಎಂಬುದು ಮನುಷ್ಯರಷ್ಟೇ ಪ್ರಾಣಿಗಳಲ್ಲೂ ಇರುತ್ತದೆ ಎಂಬುದನ್ನು ಕುದುರೆ ಯೊಂದು ತನ್ನ ಮರಿಯ ಮೇಲೆ ಪ್ರೀತಿ ತೋರಿಸಿ ನಿರೂಪಿಸಿದೆ.
Vijaya Karnataka Web hourse


ನಗರದ ಮಹಾರುದ್ರಪ್ಪನ ಹಳ್ಳದ ಸೇತುವೆ ಮೇಲೆ ಗಾಯಗೊಂಡ ತನ್ನ ಮರಿಗೆ ದಿನವಿಡಿ ರಕ್ಷಣೆ ನೀಡಿ ತಾಯಿ ಕುದುರೆ ಮಮತೆ ಮೆರೆದಿದೆ.

ಮಹಾರುದ್ರಪ್ಪನ ಹಳ್ಳದ ಸೇತುವೆ ಮೇಲೆ ಸಂಚರಿಸುತ್ತಿದ್ದ ತಾಯಿ ಹಾಗೂ ಮರಿ ಕುದುರೆ ಪೈಕಿ ಮರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಸೊಂಟಕ್ಕೆ ತೀವ್ರ ಏಟು ಬಿದ್ದ ಪರಿಣಾಮ ಮರಿ ಸ್ಥಳದಲ್ಲಿಯೇ ಮಲಗಿಕೊಂಡಿದೆ. ಇದನ್ನು ನೋಡಿದ ತಾಯಿ ಕುದುರೆ ದಿನವಿಡಿ ಸ್ಥಳದಲ್ಲಿಯೇ ನಿಂತಿದೆ. ದಾರಿಹೋಕರು ಮರಿಗೆ ನೀರು ಕುಡಿಸಿ ತೆರಳಿದ್ದಾರೆ.


ಇದೇ ಮಾರ್ಗದಲ್ಲಿ ಸಾಗುತ್ತಿದ್ದ ನಿರ್ಮಿತಿ ಕೇಂದ್ರದ ಅಧಿಕಾರಿ ಶಂಕರಲಿಂಗ ಗೋಗಿ ಕುದುರೆಯ ಮೂಕ ವೇದನೆ ಕಂಡು ತಕ್ಷಣ ಸ್ಥಳದಲ್ಲಿ ಮರಿಗೆ ನೀರು ಕುಡಿಸಿ ಆರೈಕೆ ಮಾಡಿದ್ದಾರೆ. ನಂತರ ಪಶು ಸಂಗೋಪನೆ ಇಲಾಖೆ ವೈದ್ಯರಿಗೆ ಮಾಹಿತಿ ನೀಡಿದ್ದು ವೈದ್ಯರು ಮರಿಗೆ ಚಿಕಿತ್ಸೆ ನೀಡಿದ್ದಾರೆ. ಮೂಕ ಪ್ರಾಣಿ ಯ ರೋದನೆ ಹಾಗೂ ಮಮತೆ ಜನತೆಯ ಮನ ತಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ