ಆ್ಯಪ್ನಗರ

ಇಳಕಲ್‌ ಬಸ್‌ ನಿಲ್ದಾಣ ಏಕಾಏಕಿ ಸೇರಿದ ಜನ

ಇಳಕಲ್‌: ಕೊರೊನಾ ಭೀತಿ ಮಧ್ಯೆ ಸರಕಾರ ಲಾಕ್‌ಡೌನ್‌ ಸಡಿಲಿಕೆ ಮಾಡಿ ಮೇ 19ರಿಂದ ಬಸ್‌ ಸಂಚಾರ ಆರಂಭಿಸಿದರೂ ಬಸ್‌ ನಿಲ್ದಾಣದಲ್ಲಿಬಸ್‌ ನಿಂತರೂ ಪ್ರಯಾಣಿಕರು ಬರಲಿಲ್ಲ, ಆದರೆ ಗುರುವಾರ ಬೆಳಗ್ಗೆ ಏಕಾಏಕಿ ಬಸ್‌ ನಿಲ್ದಾಣ ತುಂಬಿ ಹೋಗಿತ್ತು.

Vijaya Karnataka 22 May 2020, 5:00 am
ಇಳಕಲ್‌: ಕೊರೊನಾ ಭೀತಿ ಮಧ್ಯೆ ಸರಕಾರ ಲಾಕ್‌ಡೌನ್‌ ಸಡಿಲಿಕೆ ಮಾಡಿ ಮೇ 19ರಿಂದ ಬಸ್‌ ಸಂಚಾರ ಆರಂಭಿಸಿದರೂ ಬಸ್‌ ನಿಲ್ದಾಣದಲ್ಲಿಬಸ್‌ ನಿಂತರೂ ಪ್ರಯಾಣಿಕರು ಬರಲಿಲ್ಲ, ಆದರೆ ಗುರುವಾರ ಬೆಳಗ್ಗೆ ಏಕಾಏಕಿ ಬಸ್‌ ನಿಲ್ದಾಣ ತುಂಬಿ ಹೋಗಿತ್ತು.
Vijaya Karnataka Web ilakkal bus station out break
ಇಳಕಲ್‌ ಬಸ್‌ ನಿಲ್ದಾಣ ಏಕಾಏಕಿ ಸೇರಿದ ಜನ


ಇಳಕಲ್‌ ಘಟಕ ವ್ಯವಸ್ಥಾಪಕ ಬಿ.ಎಲ್‌.ಗೆಣ್ಣೂರ ಅವರು ಸ್ವತ: ಬಂದು ಬಸ್‌ ನಿಲ್ದಾಣದಲ್ಲಿಪ್ರಯಾಣಿಕರನ್ನು ವಿಚಾರಿಸಿ, ಒಂದೊಂದು ಬಸ್‌ಗೆ ಅಗತ್ಯವಾದ ಸರಕಾರದ ನಿಯಮದನ್ವಯ 30 ಪ್ರಯಾಣಿಕರನ್ನು ಹೊಂದಿಸಿ ಗುರುವಾರ ಸುಮಾರು 10 ಬಸ್‌ಗಳನ್ನು ಓಡಿಸಿದರು.

ಡ್ಯೂಟಿ ಕೊಡಿ ಎಂದು ನೌಕರರು ಕಚೇರಿಗೆ ಬರುತ್ತಾರೆ, ಆದರೆ ಪ್ರಯಾಣಿಕರು ಇಲ್ಲದ ಪರಿಣಾಮ ಬಸ್‌ ಓಡಿಸಲಾಗುತ್ತಿಲ್ಲ, ಎಷ್ಟೇ ಪ್ರಯಾಣಿಕರು ಬಂದರೂ ಒಂದು ಬಸ್‌ಗೆ 20ಪ್ರಯಾಣಿಕರಂತೆ ಎಷ್ಟು ಬಸ್‌ ಕೇಳಿದರೂ ಬಿಡುತ್ತೇವೆ. ಸಿಕ್ಕಾಪಟ್ಟೆ ಬಸ್‌ ಖಾಲಿ ನಿಂತಿವೆ, ಪ್ರಯಾಣಿಕರು ಬೇಕಾಬಿಟ್ಟಿ ನಿಲ್ಲದೇ ನುಗ್ಗಿ ಒಳಬರದೇ ಸರಕಾರದ ನಿಯಮ ಪಾಲಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು. ಆದರೆ ಬೆಳಗ್ಗೆ 7ರಿಂದ ಸಂಜೆ 7ರೊಳಗೆ ಬಸ್‌ ಪುನಃ ನಮ್ಮ ಘಟಕ ಸೇರ್ಪಡೆಯಾಗಬೇಕು. ಅಂತರ್‌ ಜಿಲ್ಲಾಬಸ್‌ ಸಹ ಬಿಡಲು ಸಿದ್ಧರಿದ್ದೇವೆ. ಎಷ್ಟೇ ಪ್ರಯಾಣಿಕರು ಬಂದರೂ ಕೋವಿಡ್‌ ನಿಯಮದಂತೆ ಅವರ ಆರೋಗ್ಯ (ಜ್ವರ) ತಪಾಸಣೆ ನಡೆಸಿಯೇ ಬಸ್‌ ನಿಲ್ದಾಣಲ್ಲಿಪ್ರವೇಶ ಕೊಡುವ ವ್ಯವಸ್ಥೆಯನ್ನು ಸಹ ಶಿಸ್ತುಬದ್ಧವಾಗಿ ಏರ್ಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ