ಆ್ಯಪ್ನಗರ

ಭಾರತ ಕೇಂದ್ರಿತ ಶಿಕ್ಷ ಣದತ್ತ ಸಾಗೋಣ: ಚರಂತಿಮಠ

ಬಾಗಲಕೋಟೆ: ಪ್ರಸ್ತುತ ಶಿಕ್ಷ ಣ ನೀತಿಯಿಂದ ಶಿಕ್ಷ ಣದಲ್ಲಿ ಬದಲಾವಣೆಯಾಗುವುದರೊಂದಿಗೆ ಇಂದು ಶಿಕ್ಷ ಣ ವ್ಯವಸ್ಥೆಯು ಭಾರತ ಕೇಂದ್ರಿತ ಶಿಕ್ಷ ಣದತ್ತ ಸಾಗಬೇಕಾಗಿದೆ ಎಂದು ಬವಿವ ಸಂಘದ ಕಾಯ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ತಿಳಿಸಿದರು.

Vijaya Karnataka 29 Jul 2019, 5:00 am
ಬಾಗಲಕೋಟೆ: ಪ್ರಸ್ತುತ ಶಿಕ್ಷ ಣ ನೀತಿಯಿಂದ ಶಿಕ್ಷ ಣದಲ್ಲಿ ಬದಲಾವಣೆಯಾಗುವುದರೊಂದಿಗೆ ಇಂದು ಶಿಕ್ಷ ಣ ವ್ಯವಸ್ಥೆಯು ಭಾರತ ಕೇಂದ್ರಿತ ಶಿಕ್ಷ ಣದತ್ತ ಸಾಗಬೇಕಾಗಿದೆ ಎಂದು ಬವಿವ ಸಂಘದ ಕಾಯ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ತಿಳಿಸಿದರು.
Vijaya Karnataka Web india centered education system charantimath
ಭಾರತ ಕೇಂದ್ರಿತ ಶಿಕ್ಷ ಣದತ್ತ ಸಾಗೋಣ: ಚರಂತಿಮಠ


ಜಿಲ್ಲಾ ಶಿಕ್ಷ ಣ ಮತ್ತು ತರಬೇತಿ ಸಂಸ್ಥೆ ಇಳಕಲ್‌ ಹಾಗೂ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಶಿಕ್ಷ ಣ ನೀತಿ-2019 (ಕರಡು) ವಿಚಾರ ಸಂಕಿರಣದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾದ ಶಾಲಾ ಆಡಳಿತ ಮಂಡಳಿ ಕಾಯ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಶಿಕ್ಷ ಕರಿಗೆ ಆಳವಾದ ಜ್ಞಾನ ಬರಬೇಕಾದರೆ ಶಿಕ್ಷ ಣ ಸರ್ವ ವ್ಯಾಪಕವಾಗಿರಬೇಕು ಎಂದು ಹೇಳಿದರು. ಸಂಘದ ಆಡಳಿತಾಧಿಕಾರಿ ಪ್ರೊ. ಎನ್‌.ಜಿ.ಕರೂರ, ವಿವಿಧ ಶಿಕ್ಷ ಣ ಆಯೋಗಗಳ ಬಗ್ಗೆ, ಶಿಕ್ಷ ಣ ನೀತಿಗಳ ಬಗ್ಗೆ ಆಗಿರುವ ಬದಲಾವಣೆ ಕುರಿತು ತಮ್ಮ ವಿಚಾರ ವ್ಯಕ್ತಪಡಿಸಿದರು. ಪ್ರಸ್ತುತ ಹೊಸ ಶಿಕ್ಷ ಣ ನೀತಿ ಒಳಗೊಂಡಿರುವ ಕೆಲ ಅಂಶಗಳನ್ನು ತಿಳಿಸಿದರು.

3ವಿಷಯಗಳ ಕುರಿತು ವಿಚಾರ ಸಂಕಿರಣ ಹಮ್ಮಿಕೊಂಡಿದ್ದು ಶಾಲಾ ಶಿಕ್ಷ ಣದಲ್ಲಾಗುವ ಬದಲಾವಣೆಗಳ ಬಗ್ಗೆ ಡಿಎಸ್‌ಇಆರ್‌ಟಿ ಸಹಾಯಕ ನಿರ್ದೇಶಕ ಡಾ.ಎಚ್‌.ಟಿ.ಚಂದ್ರಶೇಖರ ಉಪನ್ಯಾಸ ನೀಡಿದರು. ಕಾಲೇಜು ಶಿಕ್ಷ ಣ ಕುರಿತು ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ತಾಂತ್ರಿಕ ಶಿಕ್ಷ ಣ ಕುರಿತು ಬಸವೇಶ್ವರ ಪಾಲಿಟೆಕ್ನಿಕ್‌ ಪ್ರಾಚಾರ್ಯ ಜಿ.ಬಿ.ದಾನಶೆಟ್ಟಿ ಉಪನ್ಯಾಸ ನೀಡಿದರು.

ಡೈಟ್‌ ಪ್ರಾಚಾರ್ಯ ಎಸ್‌.ಪಿ.ಬೆಟಗೇರಿ, ಬವಿವ ಸಂಘದ ವಿಸ್ತರಣಾಧಿಕಾರಿ ಬಿ.ಆರ್‌.ಬೋಳಿಶೆಟ್ಟಿ, ಜಿ.ಕೆ.ತಳವಾರ, ಎಂ.ಬಿ.ಉಗರಗೋಳ, ಡಿಡಿಪಿಐ ಬಿ.ಎಚ್‌.ಗೋನಾಳ, ಬಿಇಒ ದೊಡ್ಡಬಸಪ್ಪ ನೀರಲಕೇರಿ, ಎನ್‌.ವೈ.ಕುಂದರಗಿ, ಎಚ್‌.ಜಿ.ಮಿರ್ಜಿ, ಬಿ.ಆರ್‌.ಓಣಿ, ಪ್ರಾಚಾರ್ಯ ಡಾ.ವಿ.ಎ.ಬೆನಕನಾಳ, ಡಾ.ಪಿ.ಎಸ್‌.ಆಲೂರ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ