ಆ್ಯಪ್ನಗರ

ಶ್ರೀಲಂಕಾಕ್ಕೆ ಕಮತಗಿ ಕ್ರೀಡಾಪಟುಗಳು

ಬಾಗಲಕೋಟೆ: ಜಿಲ್ಲೆಯ ಕಮತಗಿ ಪಟ್ಟಣದ ಕ್ರೀಡಾಪಟುಗಳಿಬ್ಬರು ಮಹಾರಾಷ್ಟ್ರದ ನಂದೇಡದಲ್ಲಿನಡೆದ 3ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿಭಾಗವಹಿಸಿ ಸಾಧನೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿಭಾಗವಹಿಸುವ ಅರ್ಹತೆ ಪಡೆದಿದ್ದಾರೆ.

Vijaya Karnataka 15 Oct 2019, 5:00 am
ಬಾಗಲಕೋಟೆ: ಜಿಲ್ಲೆಯ ಕಮತಗಿ ಪಟ್ಟಣದ ಕ್ರೀಡಾಪಟುಗಳಿಬ್ಬರು ಮಹಾರಾಷ್ಟ್ರದ ನಂದೇಡದಲ್ಲಿನಡೆದ 3ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿಭಾಗವಹಿಸಿ ಸಾಧನೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿಭಾಗವಹಿಸುವ ಅರ್ಹತೆ ಪಡೆದಿದ್ದಾರೆ.
Vijaya Karnataka Web kamatagi athletes for srilanka
ಶ್ರೀಲಂಕಾಕ್ಕೆ ಕಮತಗಿ ಕ್ರೀಡಾಪಟುಗಳು


3ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿಕಮತಗಿ ಪಟ್ಟಣದ ವಿಠ್ಠಲ ಮಡಿವಾಳರ 54 ಕೆಜಿ ತೂಕದ ಕುಸ್ತಿ ಸ್ಪರ್ಧೆಯಲ್ಲಿಪ್ರಥಮ ಸ್ಥಾನ ಗಳಿಸಿದರೆ, ಮೋಹನ ಪಾತ್ರೋಟ 800 ಮೀಟರ್‌ ಓಟದ ಸ್ಪರ್ಧೆಯಲ್ಲಿಪ್ರಥಮ ಸ್ಥಾನ ಗಳಿಸಿ ರಾಜ್ಯದ ಕೀರ್ತಿ ಹೆಚ್ಚಿಸಿದ್ದಲ್ಲದೆ ಅ.26ರಿಂದ ಶ್ರೀಲಂಕಾದಲ್ಲಿನಡೆಯಲಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿಭಾಗವಹಿಸಲಿದ್ದಾರೆ. ಕಮತಗಿಯ ಇಬ್ಬರೂ ಕ್ರೀಡಾಪಟುಗಳು ಬಡತನದ ಬೇಗೆಯಲ್ಲಿಬೆಳೆದವರು. ವಿಠ್ಠಲ ಮಡಿವಾಳರ ಕ್ರೀಡಾಪಟು 3ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ತೆರಳಲು ತನ್ನ ದ್ವಿಚಕ್ರ ವಾಹನ ಮಾರಿ ಅದರಿಂದ ಬಂದ ಹಣದಲ್ಲಿಕ್ರೀಡಾಕೂಟದಲ್ಲಿಭಾಗವಹಿಸಿದ್ದನೆನ್ನುವುದು ವಿಶೇಷ. ಸದ್ಯ ಶ್ರೀಲಂಕಾಕ್ಕೆ ತೆರಳಲು ಈ ಇಬ್ಬರೂ ಕ್ರೀಡಾಪಟುಗಳು ಆರ್ಥಿಕ ಸಹಾಯಹಸ್ತ ಚಾಚಿದ್ದಾರೆ. ಕೈ ಜೋಡಿಸಿ ಅವರ ಕ್ರೀಡಾ ಪ್ರತಿಭೆಗೆ ಪ್ರೋತ್ಸಾಹಿಸಬೇಕೆಂದು ಕ್ರೀಡಾಭಿಮಾನಿಗಳು ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ