ಆ್ಯಪ್ನಗರ

ನೆರೆ ವೀಕ್ಷಣೆ ವೇಳೆ ಕಾರು ಇಳಿದು ಪೊಲೀಸ್ ಜೀಪು ಏರಿದ ಸಿದ್ದರಾಮಯ್ಯ !

ಉತ್ತರ ಕರ್ನಾಟದಲ್ಲಿ ಪ್ರವಾಹದಿಂದ ಜನರು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಬಾಗಲಕೋಟೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರವಾಸ ಕೈಗೊಂಡಿದ್ದು ಈ ವೇಳೆ ಗುಡ್ಡದ ರಸ್ತೆಯಲ್ಲಿ ತಮ್ಮ ಕಾರಿನಲ್ಲಿ ಸಂಚರಿಸಲು ಸಾಧ್ಯವಾಗದೆ ಪೊಲೀಸ್ ಜೀಪನ್ನು ಏರಿದ ಪ್ರಸಂಗ ನಡೆಯಿತು.

Vijaya Karnataka Web 23 Oct 2019, 2:31 pm
ಬಾಗಲಕೋಟೆ: ಬಾಗಲಕೋಟೆ ಪ್ರವಾಹ ಪೀಡಿತ ಪ್ರದೇಶಗಳಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಹ ಪೀಡಿತ ಜನರ ಸಂಕಷ್ಟವನ್ನು ಆಲಿಸಲು ಕ್ಷೇತ್ರದ ಹಲವೆಡೆ ಸಂಚಾರ ಮಾಡುತ್ತಿರುವ ಸಿದ್ದರಾಮಯ್ಯ ಪ್ರವಾಹ ವೀಕ್ಷಣೆ ಪ್ರವಾಸದ ವೇಳೆ ಗುಡ್ಡಗಾಡು ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದೆ ತಮ್ಮ ಕಾರಿಂದ ಇಳಿದು ಪೊಲೀಸ್ ಜೀಪು ಏರಿದ ಪ್ರಸಂಗವೂ ನಡೆಯಿತು.
Vijaya Karnataka Web siddaramaiah


ಬಾಗಲಕೋಟೆಯ ಹೆಬ್ಬಳ್ಳಿ ಗ್ರಾಮದಲ್ಲಿ ಸಂತ್ರಸ್ತರ ಸಮಸ್ಯೆ ಆಲಿಸಿ ಬಳಿಕ ಮುಮರೆಡ್ಡಿಕೊಪ್ಪಕ್ಕೆ ಸಿದ್ದರಾಮಯ್ಯ ತೆರಳುತ್ತಿದ್ದರು. ಈ ವೇಳೆ ಗುಡ್ಡಗಾಡು ರಸ್ತೆಯಲ್ಲಿ ಕಾರಲ್ಲಿ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಕಾರಿಂದ ಇಳಿದ ಅವರು ಪೊಲೀಸ್ ಜೀಪನ್ನು ಏರಿ ಪ್ರಯಾಣ ಮುಂದುವರಿಸಿದರು. ಉತ್ತರ ಕರ್ನಾಟದ ಹಲವೆಡೆ ಪ್ರವಾಹದಿಂದ ಜನರು ಸಂಕಷ್ಟವನ್ನು ಅನುಭವಿಸುತ್ತಿದ್ದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಾದಾಮಿಯಲ್ಲಿ ಸಿದ್ದರಾಮಯ್ಯ ಕಾರು ಅಡ್ಡಗಟ್ಟಿ ಘೇರಾವ್

ನೆರೆಯಿಂದ ಸಂತ್ರಸ್ತರಾದ ಜನರು ಬಾದಾಮಿಯಲ್ಲಿ ಸಿದ್ದರಾಮಯ್ಯ ಕಾರು ಅಡ್ಡಗಟ್ಟಿ ಘೇರಾವ್ ಹಾಕಿದ ಘಟನೆ ನಡೆಯಿತು. ಚೊಳಚಗುಡ್ಡ ಗ್ರಾಮದಿಂದ ಬಾದಾಮಿಗೆ ತೆರಳುವಾಗ ಎಪಿಎಂಸಿ ಬಳಿ ಕಾರು ಅಡ್ಡಗಟ್ಟಿದ ಸಂತ್ರಸ್ಥರು ತಮ್ಮ ಗೋಳು ತೋಡಿಕೊಂಡರು.

ಮಳೆಗಾಲದಲ್ಲಿ ಬಂದ ಪ್ರವಾಹದಿಂದಾಗಿ ಕಷ್ಟ ನಷ್ಟವನ್ನು ಅನುಭವಿಸದರೂ ಇದುವರೆಗೂ ಸರಿಯಾಗಿ ಪರಿಹಾರ ಧನ ಸಿಕ್ಕಿಲ್ಲ,ಸರ್ವೆ ಕಾರ್ಯವಾಗಿಲ್ಲ,ಹಕ್ಕುಪತ್ರ ನೀಡುತ್ತಿಲ್ಲವೆಂದು ಸಮಸ್ಯೆ ತೋಡಿಕೊಂಡ ಸಂತ್ರಸ್ತರು ಪರಿಹಾರ ಒದಗಿಸಿಕೊಡುವಂತೆ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಸ್ಥಳದಲ್ಲಿ ತಹಶೀಲ್ದಾರ್‌ಗೆ ಸಿದ್ದರಾಮಯ್ಯ ಕೂಡಲೇ ನೆಲವಿಗಿ ಗ್ರಾಮಕ್ಕೆ ತೆರಳಿ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ