ಆ್ಯಪ್ನಗರ

ಕೃಷ್ಭೆ ಉಬ್ಬರ ಜೋರು: ಕುಡಚಿ ಸೇತುವೆ ಮುಳುಗಡೆ

ತೇರದಾಳ: ಮಹಾರಾಷ್ಟ್ರ ರಾಜ್ಯದ ಹಲವು ಭಾಗಗಳಲ್ಲಿ ವರುಣನ ಅರ್ಭಟ ದಿನೇ ದಿನೆ ಹೆಚ್ಚಾಗುತ್ತಿದ್ದು, ಇದರ ಪರಿಣಾಮ ನೆರೆಯ ಬೆಳಗಾವಿ ಜಿಲ್ಲೆಯ ಕುಡಚಿ ಸೇತುವೆ ಬುಧವಾರ ನೀರಿನಲ್ಲಿ ಮುಳುಗಿದೆ. ಇದರಿಂದ ಕುಡಚಿ ಮಾರ್ಗವಾಗಿ ಮಹಾರಾಷ್ಟ್ರದ ಮಿರಜ್‌, ಸಾಂಗಲಿ ಕೋಲ್ಲಾಪುರ, ಪುಣೆ, ಮುಂಬಯಿಗೆ ಹೋಗುವ ಬಸ್‌ ಸಂಚಾರ ಸೇರಿದಂತೆ ವಾಹನಗಳ ಸಂಚಾರ ಸ್ಥಗಿತಗೊಂಡಿದೆ.

Vijaya Karnataka 1 Aug 2019, 5:00 am
ತೇರದಾಳ: ಮಹಾರಾಷ್ಟ್ರ ರಾಜ್ಯದ ಹಲವು ಭಾಗಗಳಲ್ಲಿ ವರುಣನ ಅರ್ಭಟ ದಿನೇ ದಿನೆ ಹೆಚ್ಚಾಗುತ್ತಿದ್ದು, ಇದರ ಪರಿಣಾಮ ನೆರೆಯ ಬೆಳಗಾವಿ ಜಿಲ್ಲೆಯ ಕುಡಚಿ ಸೇತುವೆ ಬುಧವಾರ ನೀರಿನಲ್ಲಿ ಮುಳುಗಿದೆ. ಇದರಿಂದ ಕುಡಚಿ ಮಾರ್ಗವಾಗಿ ಮಹಾರಾಷ್ಟ್ರದ ಮಿರಜ್‌, ಸಾಂಗಲಿ ಕೋಲ್ಲಾಪುರ, ಪುಣೆ, ಮುಂಬಯಿಗೆ ಹೋಗುವ ಬಸ್‌ ಸಂಚಾರ ಸೇರಿದಂತೆ ವಾಹನಗಳ ಸಂಚಾರ ಸ್ಥಗಿತಗೊಂಡಿದೆ.
Vijaya Karnataka Web kudachi bridge the kudachi bridge sinks
ಕೃಷ್ಭೆ ಉಬ್ಬರ ಜೋರು: ಕುಡಚಿ ಸೇತುವೆ ಮುಳುಗಡೆ


ಕೆಲ ಬಸ್‌ಗಳು ಕುಡಚಿ ವರೆಗೆ ಮಾತ್ರ ಹೋಗುತ್ತಿದ್ದು, ಅಲ್ಲಿಂದ ರೇಲ್ವೇ ಮುಖಾಂತರ ಮಹಾರಾಷ್ಟ್ರದ ಕಡೆಗೆ ಹೋಗುತ್ತಿದ್ದಾರೆ. ಇನ್ನು ಬಹುತೇಕ ಬಸ್‌ಗಳು ಅಥಣಿ ಮಾರ್ಗವಾಗಿ ಮಿರಜ್‌ ಸಾಂಗಲಿಗಳಿಗೆ ಹೋಗುತ್ತಿವೆ. ಇನ್ನುಳಿದ ವಾಹನಗಳು ಕೂಡ ಅಥಣಿ ಮಾರ್ಗದಿಂದಲೇ ಹೋಗಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.

ಮಹಾರಾಷ್ಟ್ರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರಿಂದ ಕೃಷ್ಣಾ ನದಿಗೆ ನೀರು ಅಪಾರ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಮಂಗಳವಾರ ರಾತ್ರಿ ಸಮೀದಪದ ತಮದಡ್ಡಿ ಗ್ರಾಮದಲ್ಲಿನ ಕೃಷ್ಣಾ ನದಿಯಲ್ಲಿ ಸುಮಾರು 5 ಅಡಿಯಷ್ಟು ನೀರು ಹೆಚ್ಚಳವಾಗಿದ್ದು, ಇದರಿಂದ ನದಿ ದಡದಲ್ಲಿನ ರೈತರ ಮೋಟಾರ್‌ಗಳು ನೀರಿನಲ್ಲಿ ಮುಳುಗಿವೆ. ಮುಳಗಿರುವ ಮೋಟಾರ್‌ಗಳನ್ನು ಹೊರ ತರಲು ರೈತರು ಹೆಣಗಾಡುತ್ತಿದ್ದಾರೆ.

ಬೇಸಿಗೆ ಸಂದರ್ಭದಲ್ಲಿ ಕೃಷ್ಣಾ ನದಿಯಲ್ಲಿನ ನೀರು ಬತ್ತಿ ಬರಿದಾದಾಗ ಕುಡಿಯಲು ನೀರು ಬಿಡಿ ಎಂದು ಗೊಗೆರೆದರು ಮಹಾರಾಷ್ಟ್ರ ಸರಕಾರ ಒಂದು ಹನಿ ಕೂಡ ನೀರು ಬಿಡಲಿಲ್ಲ. ಈಗ ಅಲ್ಲಿ ವರುಣನ ಅರ್ಭಟ ಜೋರಾಗುತ್ತಿದ್ದಂತೆ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡುತ್ತಿದ್ದು, ಇದರಿಂದ ಈ ಭಾಗದ ನದಿ ತೀರದ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇದೆಂಥಾ ಪರಸ್ಥಿತಿ ಎಂಬ ಮಾತುಗಳು ಸಹಜವಾಗಿ ಸಾರ್ವಜನಿಕರಲ್ಲಿ ಕೇಳಿ ಬರುತ್ತಿವೆ. ಇನ್ನು ಎರಡು ದಿನದಿಂದ ಸೂರ್ಯನ ಮುಖ ಕೂಡ ನೋಡದ ಜನತೆಗೆ ಬುಧವಾರ ಮೋಡ ಸರಿದು ಸೂರ್ಯನ ಕಿರಣಗಳ ದರ್ಶನವಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ