ಆ್ಯಪ್ನಗರ

ಹಣ ದೊರೆತ ವ್ಯಕ್ತಿ ಬಗ್ಗೆ ತನಿಖೆಯಾಗಲಿ

ಬಾಗಲಕೋಟ: 'ಸಚಿವ ಪುಟ್ಟರಂಗಶೆಟ್ಟಿಯವರ ಕಚೇರಿಯಲ್ಲಿ ಹಣ ವಶಪಡಿಸಿಕೊಂಡ ಘಟನೆಗೆ ಸಂಬಂಧಿಸಿದಂತೆ ಹಣ ಹೊಂದಿದ ವ್ಯಕ್ತಿಯ ವಿರುದ್ಧ ತನಿಖೆ ನಡೆಸಬೇಕು'ಎಂದು ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ ಹೇಳಿದರು.

Vijaya Karnataka 6 Jan 2019, 5:00 am
ಬಾಗಲಕೋಟ: 'ಸಚಿವ ಪುಟ್ಟರಂಗಶೆಟ್ಟಿಯವರ ಕಚೇರಿಯಲ್ಲಿ ಹಣ ವಶಪಡಿಸಿಕೊಂಡ ಘಟನೆಗೆ ಸಂಬಂಧಿಸಿದಂತೆ ಹಣ ಹೊಂದಿದ ವ್ಯಕ್ತಿಯ ವಿರುದ್ಧ ತನಿಖೆ ನಡೆಸಬೇಕು'ಎಂದು ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ ಹೇಳಿದರು.
Vijaya Karnataka Web lets investigate the person who got the money
ಹಣ ದೊರೆತ ವ್ಯಕ್ತಿ ಬಗ್ಗೆ ತನಿಖೆಯಾಗಲಿ


ಬಾದಾಮಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಹಣ ಹೊಂದಿದ್ದ ವ್ಯಕ್ತಿ ಸಚಿವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ ಆತನನ್ನು ವಜಾಗೊಳಿಸಬೇಕು. ಆ ವ್ಯಕ್ತಿಯ ಬಗ್ಗೆ ತನಿಖೆ ನಡೆಸಬೇಕು, ಆತನ ಬಳಿ ದುಡ್ಡು ಹೇಗೆ ಬಂದಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು. ಈ ಕುರಿತು ಮೊಕದ್ದಮೆ ಕೂಡ ದಾಖಲಿಸಬೇಕು' ಎಂದರು.

'ಸಚಿವ ಎಂ.ಬಿ.ಪಾಟೀಲ ಅವರ ಫೋನ್‌ ಕದ್ದಾಲಿಕೆ ವಿಷಯದ ಬಗ್ಗೆ ನನಗೆ ಗೊತ್ತಿಲ್ಲ, ಅವರನ್ನೇ ಕೇಳಿ' ಎಂದ ಅವರು ಕಾವೇರಿ ನಿವಾಸ ಹಂಚಿಕೆ ವಿವಾದದ ಬಗ್ಗೆ ಪ್ರತಿಕ್ರಿಯಿಸಿ 'ಜಾರ್ಜ್‌ ಅವರಿಗೆ ಮಂಜೂರಾಗಿದ್ದ ಮನೆಯನ್ನು ಅನುಮತಿ ಪಡೆದು ನಾನು ವಾಸವಾಗಿದ್ದೇನೆ. ಜಾರ್ಜ್‌ ಅವರಿಗೆ ಮತ್ತೊಂದು ಬಂಗಲೆ ಕೊಟ್ಟಿಲ್ಲ, ಒಂದೇ ಮನೆ ಕೊಟ್ಟಿದ್ದಾರೆ' ಎಂದು ಸ್ಪಷ್ಪಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ