ಆ್ಯಪ್ನಗರ

ಜೀವಾವಧಿ ಶಿಕ್ಷೆ, ದಂಡ

ಜಮಖಂಡಿ : ತಾಲೂಕಿನ ಚಿಕ್ಕಲಕಿ ಕ್ರಾಸ್‌ ಪರಿವಾರ ಹೊಟೇಲ್‌ ಮಾಲೀಕನನ್ನು ಕೊಲೆಗೈದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎ.ಕೆ. ನವೀನಕುಮಾರ ಆದೇಶ ಹೊರಡಿಸಿದ್ದಾರೆ.

Vijaya Karnataka 10 May 2019, 8:32 pm
ಜಮಖಂಡಿ : ತಾಲೂಕಿನ ಚಿಕ್ಕಲಕಿ ಕ್ರಾಸ್‌ ಪರಿವಾರ ಹೊಟೇಲ್‌ ಮಾಲೀಕನನ್ನು ಕೊಲೆಗೈದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎ.ಕೆ. ನವೀನಕುಮಾರ ಆದೇಶ ಹೊರಡಿಸಿದ್ದಾರೆ.
Vijaya Karnataka Web life imprisonment penalty
ಜೀವಾವಧಿ ಶಿಕ್ಷೆ, ದಂಡ


ಬಿದರಿ ಗ್ರಾಪಂ ಹಾಲಿ ಅಧ್ಯಕ್ಷೆ ಪುತ್ರರಾದ ಸುಧೀರ ಬಾಹುಸಾಹೇಬ ಶಿಂದೆ, ಗಣಪತಿ ಬಾಹುಸಾಹೇಬ ಶಿಂದೆ ಅವರಿಗೆ ಜೀವಾವಧಿ ಶಿಕ್ಷೆ, ತಲಾ50 ಸಾವಿರ ದಂಡ, ಮೃತರ ಪತ್ನಿಗೆ 90ಸಾವಿರ ಪರಿಹಾರ ನೀಡಬೇಕು ಎಂದು ತಿಳಿಸಿದ್ದಾರೆ.

ಘಟನೆ ವಿವರ- ಚಿಕ್ಕಲಕಿ ಕ್ರಾಸ್‌ನಲ್ಲಿ ಚಂದ್ರಶೇಖರ ಶೆಟ್ಟಿ ಅಪರಾಧಿಗಳ ಹೊಟೇಲ್‌ ಎದುರು 'ಪರಿವಾರ' ಹೆಸರಿನಲ್ಲಿ ಹೊಟೇಲ್‌ ಆರಂಭಿಸಿದ್ದರು. ಇದರಿಂದ ಇವರ ಹೊಟೇಲ್‌ಗೆ ಗ್ರಾಹಕರು ಬಾರದೆ ನಷ್ಟ ಉಂಟಾಗುತ್ತಿತ್ತು. ಇಷ್ಟಕ್ಕೆ ಸುಮ್ಮನಾಗದ ಶಿಂಧೆ ಸಹೋದರರು ಸ್ನೇಹಿತ ಮಹಾಂತೇಶ ತಾವರೆ ಮತ್ತು ಬಾಲಾಪರಾಧಿಯೊಬ್ಬನ ಜತೆ ಸೇರಿ 2017ಎ.16 ರಂದು ಕೊಲೆ ಮಾಡಿ ಗೋಠೆ-ಕಲಬೀಳಗಿ ರಸ್ತೆಗೆ ಹೊಂದಿಕೊಂಡ ಜಮೀನೊಂದರಲ್ಲಿ ಮೃತದೇಹ ಹೂತು ಹಾಕಿದ್ದರು. 2017ಎ.18 ರಂದು ಮೃತನ ಪತ್ನಿ ಸುಜಾತಾ ಅವರು ಸಾವಳಗಿ ಪೊಲೀಸ್‌ ಠಾಣೆಯಲ್ಲಿ ತನ್ನ ಪತಿ ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ್ದರು.

ತನಿಖೆ ನಡೆಸುತ್ತಿರುವ ಪಿಎಸ್‌ಐ ಸುನೀಲಕುಮಾರ ನಂದೇಶ್ವರ ಆರೋಪಿತರ ಮೇಲೆ ದೋಷಾರೋಪ ಪಟ್ಟಿ ಸಲ್ಲಸಿ. ಕೊಲೆ ಪ್ರಕರಣದಲ್ಲಿ ಸಹಾಯ ಮಾಡಿದ್ದ ಎನ್ನಲಾದ ಅಪರಾಧಿಗಳ ಸ್ನೇಹಿತ ಮಾಹಾಂತೇಶ ತಾವರೆ ಪಾತ್ರದ ಬಗ್ಗೆ ಸಾಕ್ಷ ್ಯಗಳು ಸಿಗದ ಹಿನ್ನೆಲೆಯಲ್ಲಿ ಆತನನ್ನು ಬಿಡುಗಡೆ ಮಾಡಲಾಗಿದೆ. ಬಾಲಾಪರಾಧಿ ವಿರುದ್ಧ ಬಾಗಲಕೋಟ ಬಾಲ ನ್ಯಾಯ ಮಂಡಳಿ ಮುಂದೆ ಪ್ರಕರಣ ನಡೆಯುತ್ತಿದೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ವಿ.ಜಿ.ಹೆಬಸೂರ ವಾದ ಮಂಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ