ಆ್ಯಪ್ನಗರ

ವಾರಿಯರ್ಸ್ ಗೆ ಜೀವ ಬೆದರಿಕೆ

ಬೆಂಗಳೂರು ಪಾದರಾಯನಪುರದಲ್ಲಿಕೊರೊನಾ ವಾರಿಯರ್ಸ್‌ ವಿರುದ್ಧ ನಡೆದ ಹಲ್ಲೆಮಾಸುವ ಮುನ್ನವೇ ಜಮಖಂಡಿಯಲ್ಲೂಅರಿವು ಮೂಡಿಸಲು ಬಂದ ಆಶಾ ಕಾರ್ಯಕರ್ತೆಯರ ಮೇಲೆ ಮಂಗಳವಾರ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಒಡ್ಡಿದ ಬಗ್ಗೆ ಶಹರ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

Vijaya Karnataka Web 23 Apr 2020, 5:00 am
ಜಮಖಂಡಿ ( ಬಾಗಲಕೋಟೆ): ಬೆಂಗಳೂರು ಪಾದರಾಯನಪುರದಲ್ಲಿಕೊರೊನಾ ವಾರಿಯರ್ಸ್‌ ವಿರುದ್ಧ ನಡೆದ ಹಲ್ಲೆಮಾಸುವ ಮುನ್ನವೇ ಜಮಖಂಡಿಯಲ್ಲೂಅರಿವು ಮೂಡಿಸಲು ಬಂದ ಆಶಾ ಕಾರ್ಯಕರ್ತೆಯರ ಮೇಲೆ ಮಂಗಳವಾರ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಒಡ್ಡಿದ ಬಗ್ಗೆ ಶಹರ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
Vijaya Karnataka Web life threatening for the warriors
ವಾರಿಯರ್ಸ್ ಗೆ ಜೀವ ಬೆದರಿಕೆ


ಇಲ್ಲಿನ ನಿಷೇಧಿತ ಪ್ರದೇಶವಾದ ರಾಮೇಶ್ವರ ಕಾಲೊನಿಯಲ್ಲಿಕೋವಿಡ್‌-19 ಆಪತ್ತು ನಿರ್ವಹಣೆ ಜಾಗೃತಿ ಮತ್ತು ಅರಿವು ಮೂಡಿಸಲು ಆಶಾ ಕಾರ್ಯಕರ್ತೆಯರು ಮನೆಗಳಿಗೆ ತೆರಳಿ ವೈರಸ್‌ ಬಗ್ಗೆ ತಿಳಿವಳಿಕೆ ಮೂಡಿಸುತ್ತಿದ್ದು, ಯಾರೂ ಮನೆ ಬಿಟ್ಟು ಹೊರಗಡೆ ಬಾರದೇ ಸಾಮಾಜಿಕ ಅಂತರ ಕಾಪಾಡುವಂತೆ ಮನವರಿಕೆ ಮಾಡಲು ಮುಂದಾಗಿದ್ದಾರೆ.

ಇದೇ ವೇಳೆ ಅಲ್ಲಿನ ಮನೆಯಲ್ಲಿನ ಜನರ ಆರೋಗ್ಯದ ಬಗ್ಗೆ ವಿಚಾರಿಸಿ, ಮಾಹಿತಿ ಸಂಗ್ರಹಿಸುತ್ತಿದ್ದ ಆಶಾ ಕಾರ್ಯಕರ್ತೆ ಸವಿತಾ ಹೊಳೆಪ್ಪಗೋಳ, ಕಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತೆ ಮಹಾದೇವಿ ಪಾಟೀಲ ಮೇಲೆ ಅಲ್ಲಿನ ನಿವಾಸಿಗಳಾದ ಅಬ್ದುಲ್‌ ರಜಾಕ ಲಾಲಸಾಬ ಗೋಮರ್ಶೆ ಹಾಗೂ ಚಾಂದಸಾಬ ಲಾಲಾಸಾಬ ಗೋಮರ್ಶೆ ಅವಾಚ್ಚ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಆಶಾ ಕಾರ್ಯಕರ್ತೆಯರ ಬಳಿಯಿದ್ದ ಕಾಗದ ಪತ್ರಗಳನ್ನು ಹರಿದು ಹಾಕಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಜಮಖಂಡಿ ಶಹರ ಠಾಣೆಯ ಎಸೈ ಗೋವಿಂದಗೌಡ ಪಾಟೀಲ ತಿಳಿಸಿದ್ದಾರೆ. ಅರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ