ಆ್ಯಪ್ನಗರ

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಅಬಾಧಿತ

ಮಾ.10 ರಂದು ಲೋಕಸಭೆ ಚುನಾವಣೆಗಾಗಿ ನೀತಿ ಸಂಹಿತೆ ಜಾರಿಗೊಂಡಿದ್ದರಿಂದ ಜಿಪಂ ಅಧ್ಯಕ್ಷ ಸ್ಥಾನ ಚುನಾವಣೆ ನಡೆಸಬಹುದೇ ಎಂದು ಅಭಿಪ್ರಾಯ ಕೇಳಿ ಪ್ರಾದೇಶಿಕ ಆಯುಕ್ತರು ಆಯೋಗಕ್ಕೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಉತ್ತರಿಸಿರುವ ಆಯೋಗದ ಉಪ ಚುನಾವಣಾಧಿಕಾರಿ ಎಚ್‌.ಜ್ಞಾನೇಶ ಶಾಸನಬದ್ಧವಾಗಿರುವ ಸಭೆ ನಡೆಸಿ ಚುನಾವಣೆ ನಡೆಸಲು ಯಾವುದೇ ತೊಂದರೆಯಿಲ್ಲ ಎಂದಿದೆ.

Vijaya Karnataka 12 Mar 2019, 9:52 pm
ಬಾಗಲಕೋಟ: ನೀತಿ ಸಂಹಿತೆಯಿಂದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದ ಚುನಾವಣೆ ಮುಂದೂಬಹುದು ಎಂಬ ಶಂಕೆ ದೂರವಾಗಿದ್ದು, ಚುನಾವಣೆ ನಡೆಸಬಹುದು ಎಂದು ರಾಜ್ಯ ಚುನಾವಣೆ ಆಯೋಗ ಮಾರ್ಗದರ್ಶನ ನೀಡಿದೆ.
Vijaya Karnataka Web evm


ಮಾ.10 ರಂದು ಲೋಕಸಭೆ ಚುನಾವಣೆಗಾಗಿ ನೀತಿ ಸಂಹಿತೆ ಜಾರಿಗೊಂಡಿದ್ದರಿಂದ ಜಿಪಂ ಅಧ್ಯಕ್ಷ ಸ್ಥಾನ ಚುನಾವಣೆ ನಡೆಸಬಹುದೇ ಎಂದು ಅಭಿಪ್ರಾಯ ಕೇಳಿ ಪ್ರಾದೇಶಿಕ ಆಯುಕ್ತರು ಆಯೋಗಕ್ಕೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಉತ್ತರಿಸಿರುವ ಆಯೋಗದ ಉಪ ಚುನಾವಣಾಧಿಕಾರಿ ಎಚ್‌.ಜ್ಞಾನೇಶ 'ಶಾಸನಬದ್ಧವಾಗಿರುವ ಸಭೆ ನಡೆಸಿ ಚುನಾವಣೆ ನಡೆಸಲು ಯಾವುದೇ ತೊಂದರೆಯಿಲ್ಲ. ಕೊಲ್ಕತ್ತಾ ಹೈಕೋರ್ಟ್‌ನಲ್ಲಿ ಕುಲ್ಟಿ ಪುರಸಭೆ ಚುನಾವಣೆ ನಡೆಸುವ ಪ್ರಕ್ರಿಯೆಗೆ ದಾಖಲಾದ ರಿಟ್‌ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿ ಈ ಬಗ್ಗೆ ಚುನಾವಣೆ ಆಯೋಗ ನಿರ್ಧಾರ ಕೈಗೊಳ್ಳಬೇಕೆಂದು ತಿಳಿಸಿತ್ತು.

ಅದರಂತೆ ಆಯೋಗ ಶಾಸನಬದ್ಧವಾದ ಸಭೆ ಮೂಲಕ ಚುನಾವಣೆ ನಡೆಸಲು ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಈ ಸಂದರ್ಭದಲ್ಲಿ ಯಾವುದೇ ಆಡಳಿತಾತ್ಮಕ ಘೋಷಣೆ, ಭರವಸೆ ನೀಡಲು ಬರುವುದಿಲ್ಲ. ದೈನಂದಿನ ಆಡಳಿತ ನಡೆಸಲು ತೊಂದರೆಯಿಲ್ಲ ಎಂದು ಅಭಿಪ್ರಾಯಪಟ್ಟಿದೆ' ಎಂದು ತಿಳಿಸಿದ್ದಾರೆ. ಇದರೊಂದಿಗೆ ಮಾ.14 ರಂದು ಅಧ್ಯಕ್ಷ ಸ್ಥಾನದ ಚುನಾವಣೆ ನಡೆಸಲು ಯಾವುದೇ ಅಡೆತಡೆಯಿಲ್ಲ ಎಂಬುದು ಸ್ಪಷ್ಟವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ