ಆ್ಯಪ್ನಗರ

ರಾಘವೇಂದ್ರ ಸ್ವಾಮಿಗಳ ಪ್ರಸಾದ ಸಾಲಿಗ್ರಾಮವಾಗಿ ಪರಿವರ್ತನೆ

ಪ್ರಹ್ಲಾದ ಅವರು ಮಂತ್ರಾಲಯಕ್ಕೆ ತೆರಳಿ ಚೀಲದಲ್ಲಿ ದೊರೆತಿದ್ದು ಸಾಲಿಗ್ರಾಮ ಎಂದು ಖಚಿತಪಡಿಸಿಕೊಂಡಿದ್ದಾರೆ.

Vijaya Karnataka Web 29 Nov 2018, 11:36 am
ಬಾಗಲಕೋಟ : ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಿಂದ ತಂದಿದ್ದ ಪ್ರಸಾದ ಸಾಲಿಗ್ರಾಮವಾಗಿ ಪರಿವರ್ತನೆಯಾಗಿದೆ ಎಂಬ ಸುದ್ದಿ ಚರ್ಚೆಗೆ ಗ್ರಾಸವಾಗಿದೆ.
Vijaya Karnataka Web Mantralaya.


ಬಾಗಲಕೋಟೆಯ ಪ್ರಹ್ಲಾದ ಸೀಮಿಕೇರಿಯವರ ಮನೆಯಲ್ಲಿ ಮಂತ್ರಾಲಯದಿಂದ ತಂದಿದ್ದ ಪ್ರಸಾದ ಸಾಲಿಗ್ರಾಮವಾಗಿ ಬದಲಾಗಿವೆ ಎಂದು ಕುಟುಂಬ ವರ್ಗದವರು ಹೇಳಿದ್ದಾರೆ.

ನಾಲ್ಕು ತಿಂಗಳ ‌ಹಿಂದೆ ಮಂತ್ರಾಲಯಕ್ಕೆ ತೆರಳಿದ್ದ ಪ್ರಹ್ಲಾದ ಸೀಮಿಕೇರಿ, ಪರಿಮಳ ಪ್ರಸಾದ, ಕಲ್ಲು ಸಕ್ಕರೆ ಚೀಲ ತಂದಿದ್ದರು. ಇತ್ತೀಚೆಗೆ ಚೀಲ‌ ತೆರೆದು ನೋಡಿದಾಗ ಹತ್ತು ಸಾಲಿಗ್ರಾಮ ಕಂಡುಬಂದಿವೆ. ಇದು ರಾಯರ ಪವಾಡ ಎಂದುಕೊಂಡ ಪ್ರಹ್ಲಾದ ಅವರು ಮಂತ್ರಾಲಯಕ್ಕೆ ತೆರಳಿ ಚೀಲದಲ್ಲಿ ದೊರೆತಿದ್ದು ಸಾಲಿಗ್ರಾಮ ಎಂದು ಖಚಿತಪಡಿಸಿಕೊಂಡಿದ್ದಾರೆ.

ಮಂತ್ರಾಲಯದ ಪೀಠಾಧಿಪತಿ ವಿಭುದೇಂದ್ರ ತೀರ್ಥ ಶ್ರೀಗಳು ಸಾಲಿಗ್ರಾಮಗಳನ್ನು ಮನೆಯಲ್ಲಿಟ್ಟು ಪೂಜಿಸಲು ಸೂಚಿಸಿದ್ದಾರೆ ಎಂದು ಪ್ರಹ್ಲಾದ ಸೀಮಿಕೇರಿ ತಿಳಿಸಿದ್ದಾರೆ. ಆದರೆ ಪ್ರಸಾದ ಸಾಲಿಗ್ರಾಮವಾಗಿ ಬದಲಾಗಿದ್ದು ಹೇಗೆ ಎಂಬುದಕ್ಕೆ ಉತ್ತರ ದೊರೆತಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ