ಆ್ಯಪ್ನಗರ

ಜಿಲ್ಲಾಡಳಿತ ಭವನ ಸ್ವಚ್ಛತೆಗೆ ಕ್ರಮ

ಬಾಗಲಕೋಟೆ: ಜಿಲ್ಲಾಡಳಿತ ಭವನದಲ್ಲಿಹಲವಾರು ವರ್ಷಗಳಿಂದ ನಿರ್ವಹಣೆ ಸ್ವಚ್ಛತೆ ಇಲ್ಲದ ಶೌಚಾಲಯಗಳಿಗೆ, ಕಾರಿಡಾರ್‌, ಸ್ಪೋರೂಮ್‌ ರೇಕಾರ್ಡ್‌ ರೂಮ್‌ಗಳಿಗೆ ಹೊಸ ಕಾಯಕಲ್ಪ ನೀಡಬೇಕು ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ಸೂಚಿಸಿದ್ದಾರೆ.

Vijaya Karnataka 27 Oct 2019, 5:00 am
ಬಾಗಲಕೋಟೆ: ಜಿಲ್ಲಾಡಳಿತ ಭವನದಲ್ಲಿಹಲವಾರು ವರ್ಷಗಳಿಂದ ನಿರ್ವಹಣೆ ಸ್ವಚ್ಛತೆ ಇಲ್ಲದ ಶೌಚಾಲಯಗಳಿಗೆ, ಕಾರಿಡಾರ್‌, ಸ್ಪೋರೂಮ್‌ ರೇಕಾರ್ಡ್‌ ರೂಮ್‌ಗಳಿಗೆ ಹೊಸ ಕಾಯಕಲ್ಪ ನೀಡಬೇಕು ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ಸೂಚಿಸಿದ್ದಾರೆ.
Vijaya Karnataka Web measures to clean up the sheriffs house
ಜಿಲ್ಲಾಡಳಿತ ಭವನ ಸ್ವಚ್ಛತೆಗೆ ಕ್ರಮ

ಜಿಲ್ಲಾಡಳಿತ ಭವನಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ ಹಾಗೂ ಸ್ಥಳೀಯ ಸಿಬ್ಬಂದಿಗಳ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಿ ಸ್ವಚ್ಛತೆ ಕಾಪಾಡುವಂತೆ ಸೂಚಿಸಿದರು. ರೆಕಾರ್ಡ್‌ ರೂಮ್‌ನಲ್ಲಿಎಲ್ಲೆಂದರಲ್ಲಿಬಿಸಾಕಿದ್ದ ಕಡತಗಳನ್ನು ಗಮನಿಸಿದ ಡಿಸಿ ಮಾಹಿತಿಗಳನ್ನು ಸರಿಯಾಗಿ ಜೋಡಿಸುವಂತೆ ಸೂಚಿಸಿದರು.

ಜಿಲ್ಲಾಡಳಿತ ಭವನದ ಖಜಾನೆ, ಜಿಲ್ಲಾಡಳಿತ ಸಿಬ್ಬಂದಿ ಕೋಣೆ, ಚುನಾವಣಾ ಕೋಣೆ, ಜಿಲ್ಲಾಡಳಿತ ಮೇಲ್ಛಾವಣಿ ಸೇರಿದಂತೆ ನಾನಾ ಕಡೆ ಸುತ್ತಾಡಿದರು. ಜಿಲ್ಲಾಡಳಿತ ಭವನದ ನಿರ್ವಹಣೆಗೆ ಹೆಚ್ಚಿನ ಅನುದಾನದ ಅವಶ್ಯಕತೆಯಿರುವುದರಿಂದ ತಕ್ಷಣವೇ ನಿರ್ಮಿತ ಕೇಂದ್ರ ಹಾಗೂ ಡಿಯುಡಿಸಿ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ