ಆ್ಯಪ್ನಗರ

ಸಚಿವರ ಆದೇಶ ವಾಪಸ್‌, ವರ್ಗಾವಣೆಗೆ ಗ್ರೀನ್‌ ಸಿಗ್ನಲ್‌

ಬಾಗಲಕೋಟ: ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗಾವಣೆ ಆದೇಶ ತಡೆ ಹಿಡಿಯಲು ಸೂಚಿಸಿದ್ದ ತೋಟಗಾರಿಕೆ ಸಚಿವರು ತಮ್ಮ ಆದೇಶ ವಾಪಸ್‌ ಪಡೆದಿದ್ದು, ಸಿಬ್ಬಂದಿಗೆ ಕವಿದಿದ್ದ ಆತಂಕ ನಿವಾರಣೆಯಾಗಿದೆ.

Vijaya Karnataka 12 Jun 2019, 5:00 am
ಬಾಗಲಕೋಟ: ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗಾವಣೆ ಆದೇಶ ತಡೆ ಹಿಡಿಯಲು ಸೂಚಿಸಿದ್ದ ತೋಟಗಾರಿಕೆ ಸಚಿವರು ತಮ್ಮ ಆದೇಶ ವಾಪಸ್‌ ಪಡೆದಿದ್ದು, ಸಿಬ್ಬಂದಿಗೆ ಕವಿದಿದ್ದ ಆತಂಕ ನಿವಾರಣೆಯಾಗಿದೆ.
Vijaya Karnataka Web ministers order returns green signal for transfer
ಸಚಿವರ ಆದೇಶ ವಾಪಸ್‌, ವರ್ಗಾವಣೆಗೆ ಗ್ರೀನ್‌ ಸಿಗ್ನಲ್‌


ತೋಟಗಾರಿಕೆ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಡಾ.ಕೆ.ಎಂ.ಇಂದಿರೇಶ್‌ ಜೂ.6 ರಂದು 42 ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದರು. ಜೂ.7ರಂದು ವಿವಿಯ ಸಮ ಕುಲಾಧಿಪತಿ, ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಈ ಆದೇಶ ತಡೆ ಹಿಡಿಯುವಂತೆ ಸೂಚಿಸಿದ್ದರು. ಸಚಿವರ ಆದೇಶ ಹೊಸ ವಿವಾದಕ್ಕೆ ಕಾರಣವಾಗುವುದರೊಂದಿಗೆ ವರ್ಗಾವಣೆಗೊಂಡ ಸಿಬ್ಬಂದಿಯಲ್ಲಿ ಆತಂಕಕ್ಕೆ ಕಾರಣವಾಗಿತ್ತು. ವಿವಿಯ ವರ್ಗಾವಣೆ ವಿಷಯದಲ್ಲಿ ಅಧಿಕಾರವಿಲ್ಲದಿದ್ದರೂ ಹಸ್ತಕ್ಷೇಪ ಮಾಡಿದ ಸಚಿವರ ಕ್ರಮದ ಬಗ್ಗೆ ಶಿಕ್ಷಣ ಕ್ಷೇತ್ರದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿವಿಯ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ, ಶಿಕ್ಷಕೇತರ ಸಂಘಗಳ ಸದಸ್ಯರು ಸಚಿವರ ಕ್ರಮ ಖಂಡಿಸಿ ಪ್ರತಿಭಟನೆಗೆ ಸಜ್ಜಾಗಿದ್ದರು.

ಈ ಮಧ್ಯೆ ಮಂಗಳವಾರ ಸಚಿವ ಮನಗೂಳಿಯವರನ್ನು ಭೇಟಿ ಮಾಡಿದ ವಿವಿ ಕುಲಪತಿ ಇಂದಿರೇಶ 'ಆಡಳಿತಾತ್ಮಕವಾಗಿ ವರ್ಗಾವಣೆ ನಿರ್ಧಾರ ಕೈಗೊಳ್ಳಲಾಗಿದೆ'ಎಂದು ವಿವರಿಸಿ ಆದೇಶ ವಾಪಸ್‌ ಪಡೆಯಲು ವಿನಂತಿಸಿದರು. 'ಕೆಲವರು ಸಲಹೆ ನೀಡಿದ್ದರಿಂದ ನಾನು ವರ್ಗಾವಣೆ ಆದೇಶ ತಡೆ ಹಿಡಿಯುವಂತೆ ಸೂಚಿಸಿದ್ದೆ. ನನ್ನ ಆದೇಶ ವಾಪಸ್‌ ಪಡೆಯುತ್ತೇನೆ, ನೀವು ವರ್ಗಾವಣೆ ಕೈಗೊಳ್ಳಿ' ಎಂದು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಸಚಿವರು ಆದೇಶ ವಾಪಸ್‌ ಪಡೆದ ಹಿನ್ನೆಲೆಯಲ್ಲಿ ವಿವಿಯಲ್ಲಿ ಕೈಗೊಂಡ ವರ್ಗಾವಣೆ ಆದೇಶವನ್ನು ಇದೀಗ ಯಥಾ ಪ್ರಕಾರ ಜಾರಿಗೊಳಿಸಲಾಗುತ್ತದೆ.

ತೋಟಗಾರಿಕೆ ಸಚಿವರ ಆದೇಶದಂತೆ ವಿಶ್ವವಿದ್ಯಾಲಯದಿಂದ ಕೈಗೊಳ್ಳಲಾಗಿದ್ದ ವರ್ಗಾವಣೆ ಆದೇಶ ತಡೆ ಹಿಡಿಯಲಾಗಿತ್ತು. ಕುಲಪತಿಗಳು ಸಚಿವರೊಂದಿಗೆ ಚರ್ಚಿಸಿದ ನಂತರ ಆದೇಶ ವಾಪಸ್‌ ಪಡೆಯಲು ಸಚಿವರು ಸಮ್ಮತಿಸಿದ್ದಾರೆ. ಇದೀಗ ವರ್ಗಾವಣೆ ಆದೇಶವನ್ನು ಜಾರಿಗೊಳಿಸಲಾಗುತ್ತದೆ ಎಂದು ತೋವಿವಿ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ