ಆ್ಯಪ್ನಗರ

ಗದ್ದಿಗೌಡರು ತಮ್ಮ ಗದ್ದಿಗೆಗೆ ಗೌಡರು!

ಇಳಕಲ್‌: ಹಾಲಿ ಸಂಸದ ಪಿ.ಸಿ.ಗದ್ದಿಗೌಡರು ತಮ್ಮ ಗದ್ದಿಗೆಗೇ ಗೌಡರು ಎಂದು ಕಾಂಗ್ರೆಸ್‌ ಅಭ್ಯರ್ಥಿ ವೀಣಾ ಕಾಶಪ್ಪನವರ್‌ ಹೇಳಿದರು.

Vijaya Karnataka 30 Mar 2019, 5:00 am
ಇಳಕಲ್‌: ಹಾಲಿ ಸಂಸದ ಪಿ.ಸಿ.ಗದ್ದಿಗೌಡರು ತಮ್ಮ ಗದ್ದಿಗೆಗೇ ಗೌಡರು ಎಂದು ಕಾಂಗ್ರೆಸ್‌ ಅಭ್ಯರ್ಥಿ ವೀಣಾ ಕಾಶಪ್ಪನವರ್‌ ಹೇಳಿದರು.
Vijaya Karnataka Web mp gaddigourder only local gouder
ಗದ್ದಿಗೌಡರು ತಮ್ಮ ಗದ್ದಿಗೆಗೆ ಗೌಡರು!


ನಗರದ ಕಾಂಗ್ರೆಸ್‌ ಪಕ್ಷ ದ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕ್ಷೇತ್ರದಲ್ಲಿ ಮೂರು ಬಾರಿ ಆಯ್ಕೆಯಾಗಿರುವ ಗದ್ದಿಗೌಡರು ಅಭಿವೃದ್ಧಿ ಮಾಡಿದ್ದೇನು ಎಂಬುದನ್ನು ತೋರಿಸಲಿ. ಅವರ ಅವಧಿಯಲ್ಲಿ ಜಿಲ್ಲೆಯ/ಕ್ಷೇತ್ರದ ಕನಸು ನನಸಾಗಲಿಲ್ಲ, ಬರೀ ಕನಸಾಗಿಯೇ ಉಳಿದಿದೆ. ರೈಲ್ವೆ ಯೋಜನೆ ಪೂರ್ಣಗೊಳ್ಳಲಿಲ್ಲ, ವಿಮಾನ ತರಲಿಲ್ಲ, ಅವರು ಮಾಡಿದ್ದಾದರೂ ಏನೆಂದು ಬಹಿರಂಗವಾಗಿಯೇ ತೋರಿಸಲಿ ಎಂದು ಸವಾಲೆಸೆದರು.

ಅತಿ ವಿಶಾಲವಾದ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗುವ ಭಾಗ್ಯ ನಿಮ್ಮೆಲ್ಲರ ಆಶೀರ್ವಾದದಿಂದ ಲಭಿಸಿದೆ. ಅದರ ಆಯ್ಕೆಯೂ ನಿಮ್ಮ ತಲೆ ಮೇಲೆಯೇ ಇದೆ. ನನ್ನ ನಿಮ್ಮ ಮನೆಯ ಮಗಳೆಂದು ಆಶೀರ್ವದಿಸಿ ಎಂದು ಮನವಿ ಮಾಡಿದರು.

ಪ್ರಾಮಾಣಿಕವಾಗಿ ಪ್ರಯತ್ನಿಸಿ:

ಕ್ಷೇತ್ರದ ಅಭಿವೃದ್ಧಿಗಾಗಿ ಚಿಂತನೆ ಮಾಡುವ, ಕ್ರಿಯಾಶೀಲರಾಗಿ ಶ್ರಮಿಸುವ ಸಾಮರ್ಥ್ಯ‌ವುಳ್ಳ ಅಭ್ಯರ್ಥಿ ವೀಣಾ ಕಾಶಪ್ಪನವರನ್ನು ಒಗಟ್ಟಿನಿಂದ ಆಯ್ಕೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತರೂ ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‌ ಕೋರಿದರು.

ಬಾಗಲಕೋಟ ಲೋಕಸಭೆ ಮತಕ್ಷೇತ್ರ 8 ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ. ಬಹುವಿಶಾಲ ಮತಕ್ಷೇತ್ರ. ಎಲ್ಲ ಕ್ಷೇತ್ರಗಳನ್ನು ಸತ್ತಾಡುವಷ್ಟರಲ್ಲಿ ನಮ್ಮ ಮನೆಗೆ ಬರಲಿಲ್ಲ, ನಮ್ಮೂರಿಗೆ ಬರಲಿಲ್ಲ ಎಂದು ಯಾರೂ ಭಾವಿಸಬೇಡಿ. ಅತಿ ಹೆಚ್ಚಿನ ಮತದಾನ ಮಾಡಿ ಕ್ಷೇತ್ರದ ಹೆಸರು ತರುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದರು.

ಸಿದ್ದರಾಮಯ್ಯನವರ ಪ್ರತಿಷ್ಠಿತ ಜಿಲ್ಲೆ


35 ವರ್ಷಗಳ ತರುವಾಯ ಬಾಗಲಕೋಟ ಲೋಕಸಭೆ ಚುನಾವಣೆಯ ಟಿಕೆಟ್‌ ಹುನಗುಂದ ತಾಲೂಕಿಗೆ ಅದರಲ್ಲೂ ನೂತನ ಇಳಕಲ್‌ ತಾಲೂಕಿಗೆ ಲಭಿಸಿದೆ ಎಂಬುದೇ ಅಭಿಮಾನ ಪಡುವ ವಿಷಯ. ಇದು ಈ ಬಾರಿ ಬಾಗಲಕೋಟ ಮತಕ್ಷೇತ್ರ ಇಡೀ ರಾಜ್ಯದ ಗಮನವನ್ನೇ ಸೆಳೆದಿದೆ. ಜತೆಗೆ ಮಾಜಿ ಸಿಎಂ ಸಿದ್ದರಾಮಯ್ಯನವರ ಪ್ರತಿಷ್ಠಿತ ಕ್ಷೇತ್ರವೂ ಇದಾಗಿದೆ. ಇದಕ್ಕೆ ಬೇಕಿದೆ ನಿಮ್ಮೆಲ್ಲರ ಕೃಪಾಶೀರ್ವಾದದ ಬಲ ಎಂದು ಕಾಶಪ್ಪನವರ್‌ ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗಂಗಾಧರ ದೊಡ್ಡಮನಿ, ನ್ಯಾಯವಾದಿ ಎಂ.ಎಲ್‌.ಶಾಂತಗೇರಿ, ಜಿಪಂ ಸದಸ್ಯರಾದ ಚೆಂದವ್ವ ಓಲೇಕಾರ್‌, ಕಸ್ತೂರಿಬಾಯಿ ಜಾಧವ, ತಾಪಂ ಅಧ್ಯಕ್ಷ ಮಹಾಂತೇಶ ಕಡಿವಾಲ, ಮುಖಂಡರಾದ ಡಾ.ಸುಭಾಷ್‌ ಕಾಖಂಡಕಿ, ಶರಣಪ್ಪ ಆಮದಿಹಾಳ, ರಹಿಮಾನಸಾಬ್‌ ದೊಡ್ಡಮನಿ ಮತ್ತಿತರರು ಮಾತನಾಡಿ, ಪ್ರಧಾನಿ ಮೋದಿ ಒಬ್ಬ ಹಿಟ್ಲರ್‌ ಎಂದು ಛೇಡಿಸಿದರು.

ಆಡಿದಂತೆ, ನುಡಿದಂತೆ ನಡೆವ ಪಕ್ಷ ಅದು ಏಕೈಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ ಪ್ರತಿಯೊಂದು ಖಾತೆಗೆ 72 ಸಾವಿರ ರೂ. ಹಾಕುತ್ತೇವೆಂದು ರಾಹುಲ್‌ ಗಾಂಧಿ ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ, ಅದು ಅಸಾಧ್ಯ ಎಂಬ ಆರೋಪ ಸರಿಯಾದುದಲ್ಲ, ಆಯ್ಕೆಯಾದರೆ ಪಕ್ಷ ಅದನ್ನು ಖಂಡಿತ ಮಾಡಬಲ್ಲುದು, ಎಲ್ಲವನ್ನೂ ಸರಿಯಾಗಿ ವಿಚಾರಿಸಿಯೇ ನಿರ್ಧಾರ ಕೈಗೊಂಡಿರುತ್ತಾರೆ. ಅದನ್ನು ಖಂಡಿತ ಮಾಡುತ್ತಾರೆಂಬ ಭರವಸೆ ನೀಡಿದರು.

ಜಿಪಂ ಅಧ್ಯಕ್ಷೆಯಾಗಿ ದಕ್ಷ ತೆಯಿಂದ ಕಾರ್ಯನಿರ್ವಹಿಸಿ ಜಿಪಂ ಅಧ್ಯಕ್ಷ ಸ್ಥಾನದ ಘನತೆ ಗೌರವವನ್ನು ಕಾಪಾಡಿದ ಕೀರ್ತಿ ಇಂದಿನ ಲೋಕಸಭೆ ಅಭ್ಯರ್ಥಿ ವೀಣಾ ವಿಜಯಾನಂದ ಕಾಶಪ್ಪನವರಿಗೇ ಸಲ್ಲುತ್ತದೆ ಎಂದರು.

ಸಭೆಯಲ್ಲಿ ಕಾರ್ಯಕರ್ತರು, ಪದಾಧಿಕಾರಿಗಳು, ಮಹಿಳಾ ಸದಸ್ಯರೂ ಹಾಗೂ ಚುನಾಯಿತ ಪ್ರತಿನಿಧಿಗಳು, ಅಭಿಮಾನಿಗಳು ಪಾಲ್ಗೊಂಡಿದ್ದರು.

ದೇಶದ ಪ್ರಧಾನಿ ನರೇಂದ್ರ ಮೋದಿ ವಿಚಾರ ನನಗೆ ಬೇಡ. ಮೊದಲು ಜಿಲ್ಲೆಯ ಇಲ್ಲವೇ ಬಾಗಲಕೋಟ ಲೋಕಸಭೆ ಕ್ಷೇತ್ರದ ವಿಚಾರ ನನ್ನದು. ಕ್ಷೇತ್ರದ ಅಭಿವೃದ್ಧಿ ವಿಚಾರ ಮಾತ್ರ ನನ್ನದಾಗಿದೆ.
ವೀಣಾ ಕಾಶಪ್ಪನವರ, ಕಾಂಗ್ರೆಸ್‌ ಅಭ್ಯರ್ಥಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ