ಆ್ಯಪ್ನಗರ

ಬೆಳೆದು ತೋರಿಸುವ ಛಲ ಇರಲಿ

ಮುಧೋಳ: ಪ್ರತಿಯೊಬ್ಬ ವಿದ್ಯಾರ್ಥಿಯ ಶಿಕ್ಷ ಣಕ್ಕೆ ಮೂಲ ಉದ್ದೇಶ ಇಟ್ಟುಕೊಂಡು ಗುರಿಯನ್ನು ಸಾಧಿಸಬೇಕು. ಜಗತ್ತಿನಲ್ಲಿ ಮನುಷ್ಯನ ಸೋಲಿಸುವ ಶಕ್ತಿ ಸೃಷ್ಟಿಯಾಗಿಲ್ಲ. ಅದಕ್ಕೆ ಪೂರಕವಾಗಿ ನಾವೆಲ್ಲರೂ ಸ್ಪರ್ಧಾತ್ಮಕ ಜಗತ್ತಿನ ವೇಗಕ್ಕೆ ತಕ್ಕಂತೆ ಬೆಳೆದು ತೋರಿಸುವ ವ್ಯಕ್ತಿಯಾಗಬೇಕು ಎಂದು ಡಿಸಿಪಿ ರವಿ ಚನ್ನಣ್ಣವರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

Vijaya Karnataka 25 Jan 2019, 5:00 am
ಮುಧೋಳ: ಪ್ರತಿಯೊಬ್ಬ ವಿದ್ಯಾರ್ಥಿಯ ಶಿಕ್ಷ ಣಕ್ಕೆ ಮೂಲ ಉದ್ದೇಶ ಇಟ್ಟುಕೊಂಡು ಗುರಿಯನ್ನು ಸಾಧಿಸಬೇಕು. ಜಗತ್ತಿನಲ್ಲಿ ಮನುಷ್ಯನ ಸೋಲಿಸುವ ಶಕ್ತಿ ಸೃಷ್ಟಿಯಾಗಿಲ್ಲ. ಅದಕ್ಕೆ ಪೂರಕವಾಗಿ ನಾವೆಲ್ಲರೂ ಸ್ಪರ್ಧಾತ್ಮಕ ಜಗತ್ತಿನ ವೇಗಕ್ಕೆ ತಕ್ಕಂತೆ ಬೆಳೆದು ತೋರಿಸುವ ವ್ಯಕ್ತಿಯಾಗಬೇಕು ಎಂದು ಡಿಸಿಪಿ ರವಿ ಚನ್ನಣ್ಣವರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
Vijaya Karnataka Web mudhol programme attend the dcp channavar
ಬೆಳೆದು ತೋರಿಸುವ ಛಲ ಇರಲಿ


ತಾಲೂಕಿನ ಯಡಹಳ್ಳಿಯ ಶಿವಲಿಂಗಪ್ಪ ಹೊರಟ್ಟಿ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಹೊಸ ಹೊಸ ತಂತ್ರಜ್ಞಾನ ಕಾಲಗಟ್ಟದಲ್ಲಿ ಬಹಳ ಜಾಗೃತಿಯಿಂದ ಬೆಳೆಯಬೇಕಾಗಿದೆ. ಸರಕಾರಿ ಹುದ್ದೆಯೇ ಅಂತಿಮವಲ್ಲ. ನಮ್ಮ ಗುರಿ ಯಾವುದೇ ಇರಲಿ ಸಾಧನೆ ಶಿಖರದತ್ತ ಹೆಜ್ಜೆ ಇಡಬೇಕಾಗಿದೆ. ನಾನು ಪಡೆಯುವ ಶಿಕ್ಷ ಣ ನನ್ನ ಬದುಕಿಗೆ ಎಷ್ಟೊಂದು ಪೂರಕವಾಗಿರುತ್ತದೆ ಎಂಬುದು ವಿದ್ಯಾರ್ಥಿಗಳು ಗಮನಿಸಬೇಕಾಗಿದೆ. ಯುವಕರಲ್ಲಿ ನಾನಾ ಆಸೆ ಆಕಾಂಕ್ಷಿಗಳಿರುವುದು ಸಾಮಾನ್ಯ. ಇಂಟರನೆಟ್‌ ಜಗತ್ತಿನಲ್ಲಿ ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಚನ್ನಣ್ಣವರ ಕಿವಿಮಾತು ಹೇಳಿದರು.

ಬೆಳಗಾವಿ ಪೊಲೀಸ್‌ ಆಯುಕ್ತ ಡಾ.ಡಿ.ಸಿ.ರಾಜಪ್ಪ ಮಾತನಾಡಿ, ಪ್ರತಿಯೊಬ್ಬರಿಗೂ ಸಮಯದ ಮಹತ್ವ ಗೊತ್ತಾಗಬೇಕು. ಕಳೆದ ಸಮಯ ಮತ್ತೊಮ್ಮೆ ಸಿಗುವುದಿಲ್ಲ. ಸಮಯ ಮನುಷ್ಯನನ್ನು ಎತ್ತರಕ್ಕೆ ಬೆಳೆಸುತ್ತದೆ. ನಮ್ಮ ಆಸೆ, ಆಕಾಂಕ್ಷೆಗಳನ್ನು ವಿದ್ಯಾಭ್ಯಾಸ ಮುಗಿಯವರೆಗೂ ಬದಿಗಿಡುವ ಕೆಲಸ ಮಾಡಬೇಕು. ಗುರಿ ಮುಟ್ಟಿದ ಬಳಿಕ ಯಶಸ್ವಿ ಪ್ರಯಾಣ ಸಾಗಿಸಬೇಕು. ತಂದೆ, ತಾಯಿ ಹಾಕಿಕೊಟ್ಟ ಸಂಸ್ಕಾರ ಇಡೀ ಮನಕುಲಕ್ಕೆ ಮಾದರಿಯಾಗಿ ಮಾಡುತ್ತದೆ ಎಂದರು.

ಶಾಸಕ ಗೋವಿಂದ ಕಾರಜೋಳ ಮಾತನಾಡಿ, ವಿದ್ಯಾರ್ಥಿಗಳ ಹಿತವನ್ನು ಸದಾ ಬಯಸುವ ಹೊರಟ್ಟಿ ಅವರ ಪರಿಶ್ರಮ, ಯಡಹಳ್ಳಿ ಗ್ರಾಮದ ಮೇಲೆ ಅಭಿಮಾನ ಎಲ್ಲರಿಗೂ ಮಾದರಿಯಾಗಿದೆ ಎಂದರು.

ಮೇಲ್ಮನೆ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, 19 ಕೋಟಿ ರೂ.ವೆಚ್ಚದಲ್ಲಿ ಕಾಲೇಜ್‌ ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮಹಿಳಾ ಕಾಲೇಜ್‌ ಆರಂಭಿಸಲು ಅನುಮತಿ ನೀಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು.

ಗುಪ್ತ ವಾರ್ತೆ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಎಲ್‌.ಚೆನ್ನಬಸು, ಡಿಡಿಪಿಯು ಡಾ.ಶಶಿಧರ ಪೂಜಾರ, ಪ್ರಾಚಾರ‍್ಯ ವಿಜಯಲಕ್ಷ್ಮಿ ಪೆಟ್ಲೂರ್‌, ಗಿರೀಶ ಲಕ್ಷಾಣಿ, ಜಿಪಂ ಮಾಜಿ ಅಧ್ಯಕ್ಷ ಎಂ.ಎಲ್‌.ಕೆಂಪಲಿಂಗಣ್ಣವರ, ವಿ.ಎಚ್‌.ಕಳ್ಳಿಗುದ್ದಿ, ಚಂದ್ರಕಾಂತ ರಂಗನ್ನವರ, ಕೆ.ಎಚ್‌.ಬಳ್ಳೂರ, ಎಸೈ ಶ್ರೀಶೈಲ ಬ್ಯಾಕೂಡ ಇತರರು ಇದ್ದರು.

ಎನ್‌.ಜಿ.ನೀಲವಾಣಿ, ಎಸ್‌.ಐ.ಕುರಬೇಟ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ