ಆ್ಯಪ್ನಗರ

ಸೋಲಿಗೆ ಆತ್ಮಾವಲೋಕನ ಸಭೆಯಲ್ಲಿ ಕಣ್ಣೀರಿಟ್ಟ ಕಾಶಪ್ಪನವರ

ಇಳಕಲ್‌ : ಜಿಲ್ಲೆಯ 5 ಸ್ಥಾನಗಳಲ್ಲಿ ಕಾಂಗ್ರೆಸ್‌ ಪಕ್ಷ ದ ಅಭ್ಯರ್ಥಿಗಳು ಸೋಲಲು ಪಕ್ಷ ದ ಜಿಲ್ಲಾ ಮುಖಂಡರೇ ನೇರ ಹೊಣೆಗಾರರು ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‌ ನೇರವಾಗಿ ಆರೋಪಿಸಿದರು.

Vijaya Karnataka 18 May 2018, 5:00 am
ಇಳಕಲ್‌ : ಜಿಲ್ಲೆಯ 5 ಸ್ಥಾನಗಳಲ್ಲಿ ಕಾಂಗ್ರೆಸ್‌ ಪಕ್ಷ ದ ಅಭ್ಯರ್ಥಿಗಳು ಸೋಲಲು ಪಕ್ಷ ದ ಜಿಲ್ಲಾ ಮುಖಂಡರೇ ನೇರ ಹೊಣೆಗಾರರು ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‌ ನೇರವಾಗಿ ಆರೋಪಿಸಿದರು.
Vijaya Karnataka Web my defeat was due to the district congress leaders
ಸೋಲಿಗೆ ಆತ್ಮಾವಲೋಕನ ಸಭೆಯಲ್ಲಿ ಕಣ್ಣೀರಿಟ್ಟ ಕಾಶಪ್ಪನವರ


ತಮ್ಮ ನಿವಾಸದ ಪಕ್ಷ ದ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಹುನಗುಂದ ಮತಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಹಾಗೂ ಆತ್ಮಾವಲೋಕನಾ ಸಭೆಯಲ್ಲಿ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದರೂ ಜನತೆ ಕೈ ಹಿಡಿಯದಿರುವ ಕುರಿತು ಕಣ್ಣೀರಿಟ್ಟು ಮಾತನಾಡಿದ ಅವರು ಈ ಬಾರಿ ಸೋತರೂ ಸರಿ, ಮುಂದಿನ ಬಾರಿಯೂ ನಾನೇ ಕಾಂಗ್ರೆಸ್‌ ಪಕ್ಷ ದ ಅಭ್ಯರ್ಥಿ ಎಂದರು.

ಮುಂಬರುವ ಚುನಾವಣೆಯಲ್ಲಿ ಶಾಸಕನಾಗಿ ಪುನರಾಯ್ಕೆಯಾಗಿ ಸಚಿವನೂ ಆಗುತ್ತೇನೆ. ಮಾತ್ರವಲ್ಲ ಮುಂಬರುವ ದಿನಮಾನದಲ್ಲಿ ರಾಜ್ಯದ ಸಿ.ಎಂ.ಸಹ ನಾನೇ ಆಗುತ್ತೇನೆ. ಆಗ ನನ್ನ ಗೆಲುವಿಗೆ ಶ್ರಮಿಸದವರನ್ನು ನೋಡುತ್ತೇನೆ ಎಂದರು. ಬಾದಾಮಿ ಕ್ಷೇತ್ರದಲ್ಲಿ ಸಿ.ಎಂ. ಸಿದ್ಧರಾಮಯ್ಯ ಆಯ್ಕೆಯಾಗಲೂ ಸಹ ಅಲ್ಲಿನ ಪಕ್ಷ ದ ಕಾರ್ಯಕರ್ತರೇ ಕಾರಣ ಹೊರತು ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಕಾರಣರಲ್ಲ, ನನ್ನ ಸೋಲಿಗೂ ಸಹ ಜಿಲ್ಲಾ ಕಾಂಗ್ರೆಸ್‌ ಮುಖಂಡರೇ ಕಾರಣ.

ತಕ್ಷ ಣ ರಾಜೀನಾಮೆ ನೀಡಲಿ

ಉತ್ತರ ಕರ್ನಾಟಕದ ಕಾಂಗ್ರೆಸ್‌ ಪಕ್ಷ ದ ಕಾರ್ಯಾಧ್ಯಕ್ಷ ಎಸ್‌.ಆರ್‌.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ತಕ್ಷ ಣ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ನಗರದಲ್ಲಿ ಸರ್ವ ಸಮಾಜ ಬಾಂಧವರಿಗೂ ಸಾಕಷ್ಟು ಸಹಾಯ ಸಹಕಾರ ಮಾಡಿದರೂ ನನ್ನ ಗೆಲುವಿಗೆ ಸಹಕರಿಸಲಿಲ್ಲ ಎಂದು ತಮ್ಮ ಮನದಾಳದ ನೋವು ತೋಡಿಕೊಂಡರು. ಬಿಜೆಪಿ ಕಾರ‍್ಯಕರ್ತರು ಕಾಂಗ್ರೆಸ್‌ ಕಾರ‍್ಯಕರ್ತರ ಮೇಲೆ ದಬ್ಬಾಳಿಕೆ ಹಾಗೂ ಅನ್ಯಾಯವೆಸಗಿದರೆ ನಾನು ಸುಮ್ಮನಿರಲಾರೆ ಎಂದು ಎಚ್ಚರಿಕೆ ನೀಡಿದರು.

ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಅವರು ಮಾತನಾಡಿ ತಾಲೂಕಿನ ಗ್ರಾಪಂ ತಾಪಂ ಹಾಗೂ ಜಿ.ಪಂ ಸದಸ್ಯರ, ಅಧ್ಯಕ್ಷ ರ ಗೆಲುವಿಗಾಗಿ ನನ್ನ ಪತಿ ವಿಜಯಾನಂದ ಕಾಶಪ್ಪನವರ ಅವರು ಸಾಕಷ್ಟು ಶ್ರಮಿಸಿದ್ದರಾದರೂ ಅವರೆಲ್ಲ ಪರಿಶ್ರಮಪಟ್ಟಿದ್ದರೆ, ನನ್ನ ಪತಿಯ ಗೆಲವು ಖಂಡಿತ ಆಗುತ್ತಿತ್ತು. ಆದರೆ ಆ ಕಾರ್ಯ ನಡೆಯಲಿಲ್ಲ ಎಂದು ಕಣ್ಣೀರಿಡುತ್ತ ವಿಷಾಧಿಸಿದರು. ವೇದಿಕೆಯಲ್ಲಿದ್ದ ಗಂಗಾಧರ ದೊಡ್ಡಮನಿ, ನ್ಯಾಯವಾದಿಗಳಾದ ಬಿ ವಿ ಪಾಟೀಲ, ಶಾಂತಗೇರಿ, ರವಿ ವಸ್ತ್ರದ, ಮತ್ತಿತರರು ಉಪಸ್ಥಿತರಿದ್ದು ಮಾತನಾಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ