ಆ್ಯಪ್ನಗರ

ನರೇಂದ್ರ ಮೋದಿ ವಿಶ್ವಮಟ್ಟದ ನಾಯಕ

ನರೇಂದ್ರ ಮೋದಿ ವಿಶ್ವಮಟ್ಟದ ನಾಯಕ ವಿಕ ಸುದ್ದಿಲೋಕ ಇಳಕಲ್‌ ಪ್ರಧಾನಿ ನರೇಂದ್ರ ಮೋದಿಯವರಂತಹ ದಕ್ಷ , ಚಾಣಾಕ್ಷ ಹಾಗೂ ಧೀಮಂತ ನಾಯಕನ ಆಡಳಿತ ದೇಸಕ್ಕೆ ಅಗತ್ಯವಿದೆ ಎಂಬ ...

Vijaya Karnataka 26 May 2019, 5:00 am
ಇಳಕಲ್‌: ಪ್ರಧಾನಿ ನರೇಂದ್ರ ಮೋದಿಯವರಂತಹ ದಕ್ಷ , ಚಾಣಾಕ್ಷ ಹಾಗೂ ಧೀಮಂತ ನಾಯಕನ ಆಡಳಿತ ದೇಸಕ್ಕೆ ಅಗತ್ಯವಿದೆ ಎಂಬ ಸತ್ಯವನ್ನರಿತ ಇಡೀ ದೇಶದ ಜನತೆ ಅವರಿಗೇ ದೇಶದ ಚುಕ್ಕಾಣಿ ಹಿಡಿಯುವಂತೆ ಜನಾದೇಶ ನೀಡಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
Vijaya Karnataka Web narendra modi is the world leader
ನರೇಂದ್ರ ಮೋದಿ ವಿಶ್ವಮಟ್ಟದ ನಾಯಕ


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಯುವ ಸಮೂಹ ದೇಶದ ಪ್ರಧಾನಿ ಹುದ್ದೆಯನ್ನೇರುವ ಮೂಲಕ ಕ್ರಿಯಾಶೀಲತೆ, ದಕ್ಷ ತೆ ಹಾಗೂ ಚಾಣಾಕ್ಷ ತನದಿಂದ ಅಧಿಕಾರ ನಡೆಸುವ ಮೂಲಕ ದೇಶವನ್ನಾಳುವ ಮೂಲಕ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸ್ಮಧಾರಣೆಯತ್ತ ಕೊಂಡೊಯ್ಯಲು ಅಭೂತಪೂರ್ವ ಯಶಸ್ಸು ತಂದುಕೊಟ್ಟಿದ್ದಾರೆ. ಕಳೆದ 5 ವರ್ಷಗಳಿಂದ ವಿಶ್ವದ ಎಲ್ಲಾ ರಾಷ್ಟ್ರಗಳೊಂದಿಗೆ ಒಳ್ಳೆಯ ಬಾಂಧವ್ಯ ಬೆಳೆಸಿಕೊಡು ಬರುವ ಜತೆಗೆ ನೋಟ್‌ ಬದಲಾವಣೆ, ಜಿಎಸ್‌ಟಿ ಅಳವಡಿಕೆಯಂಥ ಮಹತ್ವದ ನಿರ್ಧಾರ ಕೈಗೊಂಡದ್ದು ಹಾಗೂ ಪಾಪಿ ಪಾಕಿಸ್ತಾನದ ಮೇಲೆ ಸರ್ಜಿಕಲ್‌ ದಾಳಿ ನಡೆಸಿದ್ದೇ ಅವರ ಜನಮನ್ನಣೆಗೆ ಪಾತ್ರವಾಗಿದೆ ಎಂದು ಹೇಳಿದರು.

ನರೇಂದ್ರ ಮೋದಿ ಅವರು ನಮ್ಮ ದೇಶದ ಪ್ರಧಾನಿಯಾಗಿದ್ದರೂ ಅವರು ವಿಶ್ವ ಮಟ್ಟದ ನಾಯಕರೆನಿಸಿಕೊಂಡ ಪರಿಣಾಮವಾಗಿಯೇ, ಅವೆರ ದಕ್ಷ , ಪ್ರಾಮಾಣಿಕ ಆಡಳಿತವನ್ನು ಮೆಚ್ಚಿದ ದೇಶದ ಜನತೆ ಅವರ ಕೈ ಬಲಪಡಿಸಲು ಬಿಜೆಪಿಗೆ ಅಭೂತಪೂರ್ವ ಗೆಲುವು ತಂದು ಕೊಡುವ ಮೂಲಕ ಪುನ ನರೇಂದ್ರ ಮೋದಿ ದೇಶದ ಪ್ರಧಾನಿ ಎಂದು ಜನಾದೇಶ ನೀಡಿರುವುದು ಅಭಿನಂದನಾರ್ಹ. ಬಾಗಲಕೋಟ ಲೋಕಸಭಾ ಮತಕ್ಷೇತ್ರದ ಜನತೆ 4ನೇ ಅವಧಿಗೆ ಪಿ.ಸಿ. ಗದ್ದಿಗೌಡರ ಅವರಿಗೆ ನಿರೀಕ್ಷೆ ಮೀರಿ ಅತ್ಯಧಿಕ ಮತಗಳನ್ನು ನೀಡಿ ಭಾರೀ ಅಂತರದ ಗೆಲುವನ್ನು ತಂದುಕೊಟ್ಟಿರುವುದು ಐತಿಹಾಸಿಕ ದಾಖಲೆಯಾಗಿದೆ. ಒಟ್ಟಾರೆ ದೇಶದ ಒಳಿತಿಗಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಪುನ: ಪ್ರಧಾನಿಯನ್ನಾಗಿಸುವ ನಿಟ್ಟಿನಲ್ಲಿ ಇಡೀ ದೇಶದ ಜನತೆ ಅವರನ್ನು ಬೆಂಬಲಿಸಿದೆ ಎಂದರು.

ಮೊಮ್ಮಗ ಪ್ರಜ್ವಲ ರೇವಣ್ಣನ ಸಂಸದೀಯ ಸದಸ್ಯತ್ವ ಕಳೆದುಕೊಳ್ಳುವ ಕಾಲ ಸನ್ನಿಹಿತವಾಗಿದೆ ಎಂದುಕೊಂಡು, ಅಜ್ಜನಿಗಾಗಿ ರಾಜೀನಾಮೆ ಕೊಡುವೆ ಎಂಬ ಪ್ರಹಸನವನ್ನು ಆರಂಭಿಸಿದ್ದಾರೆ ಪ್ರಜ್ಜಲ ರೇವಣ್ಣ.ಎಂದು ಗೇಲಿ ಮಾಡಿದರು.

ಮಳೆ ಬೆಳೆ ಇಲ್ಲದೇ ಇಡೀ ರಾಜ್ಯದ ಜನತೆ ಪರಿತಪಿಸುತ್ತಿದ್ದರೂ, ಜನರಿಗೆ ಕುಡಿವ ನೀರಿಲ್ಲ, ದನಗಳಿಗೆ ಮೇವಿಲ್ಲ ಎಂದರೂ ಸಿ.ಎಂ. ಹೆಚ್‌.ಡಿ. ಕುಮಾರಸ್ವಾಮಿ ಮಗನ ಗೆಲುವಿಗಾಗಿ ಇಡೀ ತಿಂಗಳು ಮಂಡ್ಯದಲ್ಲಿ ಠಿಕಾಣಿ ಹೂಡಿ, ದುರಾಡಳಿತಕ್ಕೆ ನಾಂದಿಯಾದರು.ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಹಾಗೂ ಜೆ.ಡಿ.ಎಸ್‌ ಪಕ್ಷ ಗಳಿಗೆ ರಾಜ್ಯದ ಜನತೆ ಹೀನಾಯವಾಗಿ ಸೋಲುಣಿಸಿದತೀರ್ಪು ಐತಿಹಾಸಿಕ. ಈ ತೀರ್ಪನ್ನು ಕಂಡು ನೈತಿಕ ಹೊಣೆ ಹೊತ್ತು ಸಿ.ಎಂ. ರಾಜೀನಾಮೆ ನೀಡುವುದೇ ಒಳಿತು ಎಂದರು.

ಧುರೀಣರಾದ ಜಿ.ಪಿ. ಪಾಟೀಲ, ಎಂ.ವಿ. ಪಾಟೀಲ, ಕೆ.ಎಸ್‌. ಕಂದಿಕೊಂಡ, ಚೋಳಪ್ಪ ಇಂಡಿ, ಮಹಾಂತಪ್ಪ ಚೆನ್ನಿ, ಶಾಮಸುಂದರ ಕರವಾ, ರಾಜು ಕುಲಕರ್ಣಿ, ಚಂದ್ರಶೇಖರ ಏಕಬೋಟೆ, ಪಂಪಣ್ಣ ಸಜ್ಜನ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ