ಆ್ಯಪ್ನಗರ

ಮೋದಿ ಮತ್ತೆ ಪ್ರದಾನಿಯಾಗಲಿ: ಚೈತ್ರಾ

ಗುಳೇದಗುಡ್ಡ: ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಾಗ ಮಾತ್ರ ಭಾರತ ಮಾತಾಕಿ ಜೈ ಎಂಬ ಘೋಷಣೆ ಮೊಳಗುತ್ತದೆ. 2019ರ ಚುನಾವಣೆಯ ಮತ ಎಣಿಕೆಯಲ್ಲಿ ಪ್ರತಿ ಮತಗಟ್ಟೆಯಲ್ಲಿ ಈ ಘೋಷಣೆ ಮೊಳಗಬೇಕು ಎಂದು ಚೈತ್ರಾ ಕುಂದಾಪುರ ಹೇಳಿದರು.

Vijaya Karnataka 10 Feb 2019, 5:00 am
ಗುಳೇದಗುಡ್ಡ: ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಾಗ ಮಾತ್ರ ಭಾರತ ಮಾತಾಕಿ ಜೈ ಎಂಬ ಘೋಷಣೆ ಮೊಳಗುತ್ತದೆ. 2019ರ ಚುನಾವಣೆಯ ಮತ ಎಣಿಕೆಯಲ್ಲಿ ಪ್ರತಿ ಮತಗಟ್ಟೆಯಲ್ಲಿ ಈ ಘೋಷಣೆ ಮೊಳಗಬೇಕು ಎಂದು ಚೈತ್ರಾ ಕುಂದಾಪುರ ಹೇಳಿದರು.
Vijaya Karnataka Web narendra modi to be re elected chaitra
ಮೋದಿ ಮತ್ತೆ ಪ್ರದಾನಿಯಾಗಲಿ: ಚೈತ್ರಾ


ಪಟ್ಟಣದ ಮೋದಿ ಅಭಿಮಾನಿಗಳು ಸ್ಥಳೀಯ ಸಾಲೇಶ್ವರ ದೇವಸ್ಥಾನ ಹತ್ತಿರ ಹಮಿಕೊಂಡಿದ್ದ ಮೋದಿ ಮತ್ತೊಮ್ಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮೋದಿ ಅವರ ಸ್ವಚ್ಛ ಸ್ಪಟಿಕದಂತಹ ವ್ಯಕ್ತಿ. ಅವರ ತಾಯಿ ಇನ್ನೂ ಅಟೋರಿಕ್ಷಾದಲ್ಲಿ ಓಡಾಡುತ್ತಿದ್ದಾರೆ, ಅವರ ಕುಟುಂಬದವರು ರಾಜಕೀಯಕ್ಕೆ ಬಂದಿಲ್ಲ. ಒಬ್ಬ ವ್ಯಕ್ತಿ ಮೂರುಬಾರಿ ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿಯೂ ಇಂತಹ ಸ್ಪಟಿಕದಂತಹ ವ್ಯಕ್ತಿತ್ವ ಉಳಿಸಿಕೊಳ್ಳಬೇಕಾದರೆ ಸಾಧನೆ ಬೇಕು, ತಪಸ್ಸು ಬೇಕು ಎಂದರು.

ಆಗ ಬ್ರೀಟಿಷರು, ಈಗಲೂ ರಾಜಕೀಯ ಪಕ್ಷ ಗಳು ನಮ್ಮ ಸಮಾಜವನ್ನು ಜಾತಿಯ ಆಧಾರದಲ್ಲಿ ಒಡೆಯುತ್ತಿವೆ. ದಲಿತ ನಾಯಕ ಎಂದು ಹೇಳಿಕೊಳ್ಳುತ್ತ ತಮ್ಮ ಕುಟುಂಬವನ್ನು ಮಾತ್ರ ಬೆಳಿಸಿದರು. ದಲಿತರು ಹಾಗೇ ಉಳಿದರು. ಆದರೆ ದಲಿತರೊಬ್ಬರನ್ನು ದೇಶದ ಮೊದಲ ಪ್ರಜೆಯನ್ನಾಗಿ ಮಾಡಿದ್ದು ನರೇಂದ್ರ ಮೋದಿ ಎಂದರು.

ಅಧ್ಯಕ್ಷ ತೆ ವಹಿಸಿದ್ದ ವಿ.ಜಿ. ಮ್ಯಾಗಿನಹಳ್ಳಿ ಮಾತನಾಡಿ, ನರೇಂದ್ರ ಮೋದಿ ಅವರು ಇಡೀ ಜಗತ್ತಿನ ನಾಯಕರಾಗಿ ಬೆಳೆದಿದ್ದಾರೆ. ಅವರು ಮೊತ್ತಮ್ಮೆ ಪ್ರದಾನಿಯಾಗಬೇಕು ಎಂದರು.

ಮರಡಿಮಠದ ಶ್ರೀಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳು, ಭುವನೇಶ ಪೂಜಾರಿ ಮಾತನಾಡಿದರು. ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ. ರಾಜಶೇಖರ ಶೀಲವಂತ, ಸಂಪತಕುಮಾರ ರಾಠಿ, ಸಿದ್ದು ಅರಕಾಲಚಿಟ್ಟು, ಕಮಲಕಿಶೋರ ಮಾಲಪಾಣಿ, ಪೋಲಿಸಪ್ಪ ರಾಮದುರ್ಗ, ಜಿಪಂ ಸದಸ್ಯ ಆಸಂಗೆಪ್ಪ ನಕ್ಕರಗುಂದಿ, ವಿವೇಕಾನಂದ ದೇವಾಂಗಮಠ, ಆದಪ್ಪ ಕಲಬುರ್ಗಿ, ಮಲ್ಲು ಬಾದಾಮಿಮಠ, ಮುತ್ತು ಚಿಕ್ಕನರಗುಂದ, ರಾಮು ಮಿಣಜಗಿ, ಸಂಜಯ ಕಾರಕೂನ, ಪ್ರಶಾಂತ ಜವಳಿ, ಸುನೀತಾ ಮರಡಿಮಠ, ಸಂಗಣ್ಣ ಹುನಗುಂದ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ