ಆ್ಯಪ್ನಗರ

ಜ್ಯೋತಿಷ್ಯ ನಂಬಲ್ಲ: ಸಚಿವ ಶಿವಾನಂದ ಪಾಟೀಲ್‌

ಯಡಿಯೂರಪ್ಪ ಸಿಎಂ ಅಗಬೇಕಿದ್ದರೆ ಎಂದೋ ಆಗುತ್ತಿದ್ದರು. ಎಷ್ಟೋ ಸ್ವಾಮೀಜಿಗಳು ಆಗುತ್ತದೆ, ಆಗುವುದಿಲ್ಲ ಎನ್ನುತ್ತಾರೆ. ಈ ಬಗ್ಗೆ ನಾನೇನೂ ಮಾತನಾಡುವುದಿಲ್ಲ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.

Vijaya Karnataka Web 8 Jul 2018, 2:40 pm
ಬಾಗಲಕೋಟ: ನಾನು ಜ್ಯೋತಿಷ್ಯವನ್ನು ನಂಬುವುದಿಲ್ಲ. ಈ ಬಗ್ಗೆ ಕಾಮೆಂಟ್ ಕೂಡ ಮಾಡುವುದಿಲ್ಲ. ಯಡಿಯೂರಪ್ಪ ಸಿಎಂ ಅಗಬೇಕಿದ್ದರೆ ಎಂದೋ ಆಗುತ್ತಿದ್ದರು. ಎಷ್ಟೋ ಸ್ವಾಮೀಜಿಗಳು ಆಗುತ್ತದೆ, ಆಗುವುದಿಲ್ಲ ಎನ್ನುತ್ತಾರೆ. ಈ ಬಗ್ಗೆ ನಾನೇನೂ ಮಾತನಾಡುವುದಿಲ್ಲ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.
Vijaya Karnataka Web shivananda patil


ಅಕ್ಟೋಬರ್‌ ಎರಡನೇ ವಾರದಲ್ಲಿ ಸರಕಾರ ಉರುಳುತ್ತದೆ, ಬಿಎಸ್‌ವೈ ಮುಖ್ಯಮಂತ್ರಿ ಆಗುತ್ತಾರೆ ಎಂಬ ರಂಭಾಪುರಿ ಶ್ರೀಗಳ ಹೇಳಿಕೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.

ಬಿಜೆಪಿ ಜತೆ ಜೆಡಿಎಸ್ ಹೊಂದಾಣಿಕೆ ಬೇಡ ಎಂದೇ ಸಮ್ಮಿಶ್ರ ಸರಕಾರ ರಚನೆಯಾಗಿರುವುದು. ಎಲ್ಲರೂ ಅಧಿವೇಶನದಲ್ಲಿ ಜತೆ ಕುಳಿತಿರುತ್ತಾರೆ. ಆದರೆ ಮಾಧ್ಯಮದವರು ಏನೋ ಸೃಷ್ಟಿ ಮಾಡುವುದನ್ನು ನಿಲ್ಲಿಸಬೇಕು.ಯಾರೋ ಹೇಳಿದ್ದನ್ನು ದೊಡ್ಡ ಇಶ್ಯೂ ಮಾಡುತ್ತೀರಿ. ಒಬ್ಬ ಹೇಳಿದ್ದನ್ನು ಇಪ್ಪತ್ತು ಮಂದಿಗೆ ಹೋಲಿಸುತ್ತೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆಯನ್ನು ಒಟ್ಟಿಗೆ ಎದುರಿಸುತ್ತೇವೆ. ಸೀಟು ಹಂಚಿಕೆ ಬಗ್ಗೆ ಹಿರಿಯರು ನಿರ್ಧರಿಸುತ್ತಾರೆ. ನೀರಾವರಿ ಯೋಜನೆ ಬಗ್ಗೆ ನನಗೆ ನೋವಿದೆ. ಕಾಲಬದ್ಧವಾಗಿ ಮುಗಿದಿದ್ದರೆ ರಾಜ್ಯಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ. ಇದೆಲ್ಲ ಹಿಂದಿನ ಎಲ್ಲ ಸರಕಾರಗಳು ಮಾಡಿದ ತಪ್ಪು. ಬಿಜೆಪಿ, ಕಾಂಗ್ರೆಸ್ ,ಜೆಡಿಎಸ್ ಎಂದು ನಾನು ಹೇಳುವುದಿಲ್ಲ. ಯಾವಾಗ ನೀರಾವರಿಗೆ ಆದ್ಯತೆ ಕೊಡಬೇಕಿತ್ತೋ ಆಗ ಕೊಡದೆ ಇರುವುದರಿಂದ ಈ ರೀತಿ ಆಗಿದೆ. ಈ ಬಗ್ಗೆ ಮುಖ್ಯಮಂತ್ರಿ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ