ಆ್ಯಪ್ನಗರ

ಸಿದ್ದರಾಮಯ್ಯ ಟೀಕಿಸುವ ಭರದಲ್ಲಿ ಆಕ್ಷೇಪಾರ್ಹ ಪದ ಬಳಕೆ, ಈಶ್ವರಪ್ಪ ಕ್ಷಮೆಗೆ ಆಗ್ರಹ

ಸಿದ್ದರಾಮಯ್ಯ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್‌ ಶಾರನ್ನು ದಡ್ಡ ಎಂದು ಕರೆದಿದ್ದರು. ಇದಕ್ಕೆ ತಿರುಗೇಟು ನೀಡಲು ಹೋಗಿದ್ದ ಈಶ್ವರಪ್ಪ, ಸಿದ್ದರಾಮಯ್ಯ ವಿರುದ್ಧ ದಡ್ಡ ಹಾಗೂ ಆಕ್ಷೇಪಾರ್ಹ ಪದವನ್ನು ಬಳಸಿದ್ದರು.

Vijaya Karnataka 24 Sep 2019, 4:56 pm
ಬಾಗಲಕೋಟೆ: ಕೆಲವು ದಿನಗಳ ಹಿಂದೆ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದರು. ಇದರಿಂದ ಕೆರಳಿರುವ ಭೋವಿ ಸಮುದಾಯ, ಆಕ್ಷೇಪಾರ್ಹ ಪದ ಬಳಕೆಗೆ ಅವರು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದೆ.
Vijaya Karnataka Web KS Eshwarappa


ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಭೋವಿ ಮಹಾಸಭಾದ ಕಾರ್ಯಾಧ್ಯಕ್ಷ ಹುಲ್ಲಪ್ಪ ಹುಳ್ಳೂರ, 'ಭೋವಿ ಸಮುದಾಯದ ಕುರಿತು ಈಶ್ವರಪ್ಪ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದು ಸರಿಯಲ್ಲ,' ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್‌ ಶಾರನ್ನು ದಡ್ಡ ಎಂದು ಕರೆದಿದ್ದರು. ಇದಕ್ಕೆ ತಿರುಗೇಟು ನೀಡಲು ಹೋಗಿದ್ದ ಈಶ್ವರಪ್ಪ, ಸಿದ್ದರಾಮಯ್ಯ ವಿರುದ್ಧ ದಡ್ಡ ಹಾಗೂ ಆಕ್ಷೇಪಾರ್ಹ ಪದವನ್ನು ಬಳಸಿದ್ದರು. ಈ ಸಂದರ್ಭದಲ್ಲೇ ಎಚ್ಚೆತ್ತುಕೊಂಡಿದ್ದ ಈಶ್ವರಪ್ಪ, ಸಿದ್ದರಾಮಯ್ಯ ವರ್ತನೆಗೆ ಹಾಗೆ ಹೇಳಿದೆ ಅಷ್ಟೇ. ಸಮುದಾಯದ ಬಗ್ಗೆ ನನಗೆ ಅಪಾರ ಗೌರವವಿದೆ ಎಂದಿದ್ದರು. ಜೊತೆಗೆ ಭೋವಿ ಸಮಾಜದವರು ಶ್ರಮಿಕರು ಎಂದು ಹೊಗಳಿದ್ದರು.

ಸಿದ್ದರಾಮಯ್ಯ ದಡ್ಡ: ಕೆ.ಎಸ್. ಈಶ್ವರಪ್ಪ

ಆದರೆ ಈ ವಿವಾದ ಇಲ್ಲಿಗೆ ನಿಂತಿಲ್ಲ. ಭೋವಿ ಸಮಾಜದವರು ಈಶ್ವರಪ್ಪ ವಿರುದ್ಧ ತಿರುಗಿ ಬಿದ್ದಿದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಮ್ಮ ಸಚಿವ ಸಂಪುಟದಿಂದ ಈಶ್ವರಪ್ಪ ಅವರನ್ನು ಕೈಬಿಡಬೇಕು ಎಂದು ಹಳ್ಳೂರ ಆಗ್ರಹಿಸಿದರು.

ಕೂಡಲೆ ಅವರು ಬಳಸಿರುವ ಪದವನ್ನು ವಾಪಸ್‌ ಪಡೆಯಬೇಕು. ಬಹಿರಂಗವಾಗಿ ಸಮುದಾಯದ ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ಸಚಿವ ಈಶ್ವರಪ್ಪ ಅವರು ಜಿಲ್ಲೆಗೆ ಆಗಮಿಸಿದಾಗ ಸಮುದಾಯದಿಂದ ಘೇರಾವ್‌ ಹಾಕಿ ಪ್ರತಿಭಟಿಸಲಾಗುವುದು. ಜೊತೆಗೆ ಮುಂದಿನ ದಿನದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಮುದಾಯದ ನಾಯಕರು ಎಚ್ಚರಿಸಿದರು. ವೆಂಕಟೇಶ ವಡ್ಡರ, ತಿಪ್ಪಣ್ಣ ಗಜಲಗಟ್ಟಿ, ಕಾಳಪ್ಪ ಬಂಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ