ಆ್ಯಪ್ನಗರ

ನಗರಸಭೆ ತೆರಿಗೆ ಹೆಚ್ಚಳಕ್ಕೆ ವಿರೋಧ

ಸ್ಥಳೀಯ ನಗರಸಭೆ ಎಲ್ಲತೆರಿಗೆಗಳನ್ನು ಶೇ.20ರಷ್ಟು ಹೆಚ್ಚಳಗೊಳಿಸುವ ಮೂಲಕ ನೇಕಾರರ ಗಾಯದ ಮೇಲೆ ಬರೆ ಎಳೆಯುವಂತೆ ಮಾಡಿದ್ದು ತಕ್ಷಣವೇ ಮೊದಲಿದ್ದ ತೆರಿಗೆಯನ್ನೇ ಮುಂದುವರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Vijaya Karnataka Web 14 May 2020, 5:00 am
ರಬಕವಿ/ಬನಹಟ್ಟಿ: ಸ್ಥಳೀಯ ನಗರಸಭೆ ಎಲ್ಲತೆರಿಗೆಗಳನ್ನು ಶೇ.20ರಷ್ಟು ಹೆಚ್ಚಳಗೊಳಿಸುವ ಮೂಲಕ ನೇಕಾರರ ಗಾಯದ ಮೇಲೆ ಬರೆ ಎಳೆಯುವಂತೆ ಮಾಡಿದ್ದು ತಕ್ಷಣವೇ ಮೊದಲಿದ್ದ ತೆರಿಗೆಯನ್ನೇ ಮುಂದುವರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
Vijaya Karnataka Web opposition to municipal tax increases
ನಗರಸಭೆ ತೆರಿಗೆ ಹೆಚ್ಚಳಕ್ಕೆ ವಿರೋಧ


ಈ ಕುರಿತು ಬನಹಟ್ಟಿ ನಗರದ ಭದ್ರನ್ನವರ ಕಲ್ಯಾಣ ಮಂಟಪದಲ್ಲಿಸಭೆ ಸೇರಿ ಸಭೆಯಲ್ಲಿದುಂಡಪ್ಪ ಮಾಚಕನೂರ, ಶಂಕರ ಜುಂಜಪ್ಪನವರ ಮಾತನಾಡಿ ಈಗಾಗಲೇ ಪ್ರವಾಹದಿಂದ ಹಾನಿಗೊಳಗಾದ ನೇಕಾರಿಕೆಗೆ ಕೊರೊನಾ ವೈರಸ್‌ನಿಂದ ಉದ್ಯೋಗಕ್ಕೆ ಪಾಶ್ರ್ವವಾಯು ಬಡಿದಂತಾಗಿದೆ. ಸದ್ಯ ಉಳ್ಳವರು ನೀಡುತ್ತಿರುವ ಆಹಾರ, ದಿನಸಿ ಹಾಗು ತರಕಾರಿ ಪೊಟ್ಟಣಗಳಿಂದಲೇ ಬದುಕು ಸಾಗಿಸುತ್ತಿದ್ದಾರೆ. ಇದನ್ನೆಲ್ಲಅರಿತು ಈ ಮೊದಲು ಸಿಎಂ ಯಡಿಯೂರಪ್ಪನವರು ನೇಕಾರರು ಪಡೆದ ಸಾಲದಲ್ಲಿತಲಾ 1ಲಕ್ಷ ರೂ. ಮನ್ನಾ ಮಾಡಿದ್ದಾರೆ. ಸೀರೆ ಉದ್ಯೋಗಕ್ಕೆ ಏಪ್ರಿಲ್‌ ಹಾಗು ಮೇ ತಿಂಗಳು ಅತಿ ಮಹತ್ವದ್ದು, ಇಂತಹ ಸಮಯದಲ್ಲಿಕೊರೊನಾ ಮಹಾಮಾರಿಯಿಂದ ಉದ್ಯೋಗವನ್ನೇ ಕಸಿದುಕೊಂಡಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿಮನೆ, ಬಾಡಿಗೆ ಸೇರಿದಂತೆ ಇತರೆ ನಗರಸಭೆಯ ತೆರಿಗೆಗಳನ್ನು ಹೆಚ್ಚಳಗೊಳಿಸಿದ್ದನ್ನು ಕೈಬಿಟ್ಟು ಮೊದಲಿದ್ದ ತೆರಿಗೆಯನ್ನೇ ಮುಂದುವರೆಸುವಂತೆ ಒತ್ತಾಯಿಸಿದರು. ಮಲ್ಲಿಕಾರ್ಜುನ ಬಾಣಕಾರ, ಧರೆಪ್ಪ ಉಳ್ಳಾಗಡ್ಡಿ, ಸತೀಶ ಹಜಾರೆ, ರಾಮಣ್ಣ ಹುಲಕುಂದ, ಹಟ್ಟಿ, ಬಸವರಾಜ ತೆಗ್ಗಿ, ಮಹಾದೇವ ಚರ್ಕಿ, ಬ್ರಿಜ್‌ಮೋಹನ ಡಾಗಾ, ಚಿದಾನಂದ ಕಕಮರಿ, ಮಲ್ಲುಕುಚನೂರ, ಮಹಾದೇವ ಧೂಪದಾಳ, ಗೋವಿಂದ ಡಾಗಾ, ಪರಪ್ಪ ಬಿಳ್ಳೂರ, ಮಲ್ಲಣ್ಣ ಕಕಮರಿ, ಓಂಪ್ರಕಾಶ ಕಾಬರಾ, ಮಹಾದೇವ ಮುನ್ನೋಳ್ಳಿ, ಗಣಪತಿ ಹಜಾರೆ ಸೇರಿದಂತೆ ಅನೇಕರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ