ಆ್ಯಪ್ನಗರ

ಪಾಕಿಸ್ತಾನ ಭೂಪಟದಲ್ಲಿ ಉಳಿಯುವುದಿಲ್ಲ: ಈಶ್ವರಪ್ಪ

ಭಾರತಾಂಬೆ ಜಗತ್ತಿನ ಜನನಿ ಆಗುತ್ತಾಳೆ, ಪಕ್ಷ ಶಿಸ್ತಿನ ಪಕ್ಷ , ಶಿಸ್ತೇ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯ ಮಾಡುತಿದ್ದಾರೆ. ನಮ್ಮ ಸೈನಿಕರನ್ನು ಹತ್ಯೆ ಮಾಡಿದ ಉಗ್ರರ ಸಂಹಾರಕ್ಕೆ ಪ್ರಧಾನಿ ಮೋದಿ ಅವರು ಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ನನ್ನ ಮಾತು ಈಗ ಅತಿಶೋಕ್ತಿ ಎನಿಸಬಹುದು ಆದರೆ ಮೋದಿ ಅವರು ಆ ಕಾರ್ಯ ಮಾಡುತ್ತಾರೆ ಎಂದರು.

Vijaya Karnataka 20 Feb 2019, 10:46 pm
ಜಮಖಂಡಿ: ಪಾಕಿಸ್ತಾನ ಭೂ ಪಟದಲ್ಲಿ ಉಳಿಯುವುದಿಲ್ಲ, ಅದನ್ನು ಅಳಿಸಿ ಹಾಕಿ ಅಖಂಡ ಭಾರತ ಆಗುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿದರು.
Vijaya Karnataka Web ks eshwarappa


ನಗರದ ನಂದಿಕೇಶ್ವರ ದೇವಸ್ಥಾನ ಆವರಣದಲ್ಲಿ ಬಿಜೆಪಿ ವಿಧಾನಸಭೆ ಕ್ಷೇತ್ರ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಭಾರತಾಂಬೆ ಜಗತ್ತಿನ ಜನನಿ ಆಗುತ್ತಾಳೆ, ಪಕ್ಷ ಶಿಸ್ತಿನ ಪಕ್ಷ , ಶಿಸ್ತೇ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯ ಮಾಡುತಿದ್ದಾರೆ. ನಮ್ಮ ಸೈನಿಕರನ್ನು ಹತ್ಯೆ ಮಾಡಿದ ಉಗ್ರರ ಸಂಹಾರಕ್ಕೆ ಪ್ರಧಾನಿ ಮೋದಿ ಅವರು ಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ನನ್ನ ಮಾತು ಈಗ ಅತಿಶೋಕ್ತಿ ಎನಿಸಬಹುದು ಆದರೆ ಮೋದಿ ಅವರು ಆ ಕಾರ್ಯ ಮಾಡುತ್ತಾರೆ ಎಂದರು.

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಸಣ್ಣಪುಟ್ಟ ಲೋಪಗಳನ್ನು ಸರಿಪಡಿಸಿಕೊಳ್ಳೊಣ, ಈ ಚುನಾವಣೆಯಲ್ಲಿ ಯುದ್ಧ ರೀತಿ ಕಾರ್ಯ ಮಾಡೋಣ ಎಂದರು.

ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಗೋವಿಂದ ಕಾರಜೋಳ, ಹನುಮಂತರಾಯ ಬಿರಾದಾರ ಮಾತನಾಡಿದರು. ಜಿ.ಎಸ್‌.ನ್ಯಾಮಗೌಡ, ನಾರಾಯಣಸಾ ಬಾಂಢಗೆ, ಹಣಮಂತ ನಿರಾಣಿ, ಮಹಾಂತೇಶ ಮಮದಾಪುರ, ಟಿ.ಎ.ಬಿರಾದಾರ. ನಾಗವ್ವ ಕುರಣಿ, ಡಾ.ವಿಜಯಲಕ್ಷ್ಮಿ ತುಂಗಳ, ವಿಜಯಲಕ್ಷ್ಮಿ ಉಕುಮನಾಳ, ಇತರರು ಇದ್ದರು. ನಗರಸಭೆ ಮಾಜಿ ಸದಸ್ಯ ಶ್ರೀನಿವಾಸ ಅಪರಂಜಿ ನಿರೂಪಿಸಿದರು.

ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದು ಸವದಿ ಮಾತನಾಡುತಿದ್ದ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಎಲ್ಲರೂ ಕಾರ್ಯ ಮಾಡಬೇಕು, ಈ ನಿಟ್ಟಿನಲ್ಲಿ ಎಲ್ಲರೂ ಕೈ ಮೇಲಿತ್ತಿರಿ ಎಂದಾಗ, ವೇದಿಕೆ ಕೆಳಗಡೆ ಕುಳಿತಿದ್ದ ಕೆಲ ಕಾರ್ಯಕರ್ತರು ವೇದಿಕೆಯಲ್ಲಿನ ನಾಯಕರು ಪ್ರಾಮಾಣಿಕವಾಗಿ ಕಾರ್ಯ ಮಾಡುವುದಿಲ್ಲ, ಉಪಚುನಾವಣೆಯಲ್ಲಿ ಹಣ ಹಂಚುತ್ತಾರೆ ಎಂದು ಹೇಳಿದರು ತಡೆಯುವ ಕಾರ್ಯ ನಾಯಕರು ಮಾಡುವುದಿಲ್ಲ, ನಮ್ಮ ಸಮಸ್ಯೆಯನ್ನು ಯಾರು ಹತ್ತಿರ ಹೇಳಿಕೊಳ್ಳೊಣ ಎಂದು ಜೋರಾಗಿ ಹೇಳಿದರು. ಆಗ ಈಶ್ವರಪ್ಪ ಕಾರ್ಯಕರ್ತರನ್ನು ಸಮಾಧಾನಪಡಿಸಿ ನಿಮ್ಮ ಸಮಸ್ಯೆಗಳನ್ನು ನೇರವಾಗಿ ನನಗೆ ತಿಳಿಸಿ ಅವುಗಳನ್ನು ಪರಿಹರಿಸುತ್ತೇನೆ ಎಂದು ಭರವಸೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ