ಆ್ಯಪ್ನಗರ

ಪಂಡಿತ್ ಭೀಮಸೇನ್ ಜೋಶಿ ಜನ್ಮ ಶತಾಬ್ದಿ; ಸೆ.12ರಂದು ಬಾಗಲಕೋಟೆಯಲ್ಲಿ ಸಂಗೀತೋತ್ಸವ ಆಯೋಜನೆ!

ಪಂಡಿತ್ ಭೀಮಸೇನ್ ಜೋಶಿ ಜನ್ಮ ಶತಾಬ್ದಿ ಅಂಗವಾಗಿ ಬಾಗಲಕೋಟೆಯಲ್ಲಿ ಸೆ.12ರಂದು ಸಂಗೀತೋತ್ಸವ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದಾದ್ಯಂತ ನಾಲ್ಕು ಕಡೆಗಳಲ್ಲಿ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

Lipi 11 Sep 2021, 2:38 pm

ಹೈಲೈಟ್ಸ್‌:

  • ಭಾರತ ರತ್ನ ಪಂಡಿತ್ ಭೀಮಸೇನ್ ಜೋಶಿ ಜನ್ಮ ಶತಾಬ್ದಿ
  • ಬಾಗಲಕೋಟೆಯಲ್ಲಿ ಭೀಮಫಲಾಸ್ ಸಂಘಟನೆಯಿಂದ ಸಂಗೀತೋತ್ಸವ
  • ಬಾಗಲಕೋಟೆ ನವನಗರದಲ್ಲಿರುವ ಕಲಾ ಭವನದಲ್ಲಿ ಸಂಗೀತ ಕಾರ್ಯಕ್ರಮ
  • ರಾಜ್ಯದಾದ್ಯಂತ ನಾಲ್ಕು ಕಡೆಗಳಲ್ಲಿ ಸಂಗೀತ ಕಾರ್ಯಕ್ರಮ ಆಯೋಜನೆ
  • ಪಂಡಿತ್ ಬಿಂದು ಮಾಧವಾಚಾರ್ಯ ಅವರಿಂದ ಸಂಗೀತೋತ್ಸವ ಉದ್ಘಾಟನೆ
  • ನಾಳೆ (ಸೆ.12-ಭಾನುವಾರ) ಬಾಗಲಕೋಟೆಯಲ್ಲಿ ನಡೆಯಲಿದೆ ಸಂಗೀತೋತ್ಸವ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಸಂಗೀತೋತ್ಸವ
ಬಾಗಲಕೋಟೆ: ಭಾರತ ರತ್ನ ಪಂಡಿತ್ ಭೀಮಸೇನ್ ಜೋಶಿ ಅವರ ಜನ್ಮ ಶತಾಬ್ದಿ ಸಂಗೀತೋತ್ಸವ ಕಾರ್ಯಕ್ರಮವನ್ನು ನಾಳೆ(ಸೆ.12-ಭಾನುವಾರ) ಬಾಗಲಕೋಟೆಯಲ್ಲಿ ಆಯೋಜಿಸಲಾಗಿದೆ ಎಂದು ರಾಷ್ಟ್ರೀಯ ತಬಲಾ ವಾದಕ ಕೇಶವ್ ಜೋಶಿ ತಿಳಿಸಿದ್ದಾರೆ.

ಬಾಗಲಕೋಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಶವ್ ಜೋಶಿ, ನಟರಾಜ್ ಸಂಗೀತ ವಿದ್ಯಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬಾಗಲಕೋಟೆ ನವನಗರದಲ್ಲಿರುವ ಕಲಾ ಭವನದಲ್ಲಿ ನಾಳೆ ಸಾಯಂಕಾಲ 5 ಗಂಟೆಗೆ ಸಂಗೀತೋತ್ಸವ ನಡೆಯಲಿದೆ ಎಂದರು.
ಪಿಯಾನೋ ನುಡಿಸುತ್ತಾ ಖುಷಿಪಟ್ಟ ರತನ್ ಟಾಟಾ: ಕಲಿಯುವ ಆಸಕ್ತಿಗೆ ಮನಸೋತ ನೆಟ್ಟಿಗರು
ಪಂಡಿತ್ ಭೀಮಸೇನ ಜೋಶಿ ಅವರ ಜನ್ಮ ಶತಾಬ್ದಿ ಕಾರ್ಯಕ್ರಮವನ್ನು ದೇಶದಾದ್ಯಂತ ಮಾಡಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಭೀಮಫಲಾಸ್ ಎನ್ನುವ ಸಂಘಟನೆಯವರು ರಾಜ್ಯದಾದ್ಯಂತ ನಾಲ್ಕು ಕಡೆಗಳಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದಾರೆ. ಅದರಲ್ಲಿ ಬಾಗಲಕೋಟೆಯಲ್ಲಿ ಆಯೋಜಿಸಿರುವ ಸಂಗೀತ ಕಾರ್ಯಕ್ರಮ ಒಂದಾಗಿದೆ ಎಂದು ಕೇಶವ್ ಜೋಶಿ ಸ್ಪಷ್ಟಪಡಿಸಿದರು. ಸಂಗೀತೋತ್ಸವ ಕಾರ್ಯಕ್ರಮಕ್ಕೆ ಧಾರವಾಡದ ಜಿಬಿ ಜೋಶಿ ಮೆಮೋರಿಯಲ್ ಟ್ರಸ್ಟ್, ಹುಬ್ಬಳ್ಳಿಯ ಕ್ಷಮಿತಾ ನೆರವು ನೀಡಿದ್ದು, ಇನ್ಪೋಸಿಸ್, ಎಲ್ ಐಸಿ ಹಾಗೂ ನಟರಾಜ್ ಸಂಗೀತ ವಿದ್ಯಾಲಯ ಪ್ರಾಯೋಜಕರಾಗಿದ್ದಾರೆ. ಪಂಡಿತ್ ಬಿಂದು ಮಾಧವಾಚಾರ್ಯ ಅವರು ಈ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ಕೇಶವ್ ಜೋಶಿ ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ