ಆ್ಯಪ್ನಗರ

ರಕ್ತದಿಂದ ಅಜಾತಶತ್ರುಗೆ ಶ್ರದ್ಧಾಂಜಲಿ

ಸಾವಳಗಿ(ಬಾಗಲಕೋಟ): ತಮ್ಮ ರಕ್ತದಿಂದ ಅಜಾತ ಶತ್ರು, ಶಿಕ್ಷಣ ಪ್ರೇಮಿ ಮಾಜಿ ಪ್ರಧಾನಿ ದಿ.ಅಟಲ್‌ ಬಿಹಾರಿ ವಾಜಪೇಯಿಯವರ ಭಾವಚಿತ್ರ ಬಿಡಿಸಿ ವಿಭಿನ್ನರೀತಿಯಲ್ಲಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ ಕಲಾವಿದ ಡಾ.ಸಂಗಮೇಶ ಬಗಲಿ.

Vijaya Karnataka 18 Aug 2018, 5:00 am
ಸಾವಳಗಿ(ಬಾಗಲಕೋಟ): ತಮ್ಮ ರಕ್ತದಿಂದ ಅಜಾತ ಶತ್ರು, ಶಿಕ್ಷಣ ಪ್ರೇಮಿ ಮಾಜಿ ಪ್ರಧಾನಿ ದಿ.ಅಟಲ್‌ ಬಿಹಾರಿ ವಾಜಪೇಯಿಯವರ ಭಾವಚಿತ್ರ ಬಿಡಿಸಿ ವಿಭಿನ್ನರೀತಿಯಲ್ಲಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ ಕಲಾವಿದ ಡಾ.ಸಂಗಮೇಶ ಬಗಲಿ.
Vijaya Karnataka Web pray for blood from the blood
ರಕ್ತದಿಂದ ಅಜಾತಶತ್ರುಗೆ ಶ್ರದ್ಧಾಂಜಲಿ


ಸಮೀಪದ ತುಬಚಿ ಗ್ರಾಮದ ಸರಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷ ಕರಾಗಿ ಕಾರ್ಯ ನಿರ್ವಹಿಸುತ್ತಿರುವ ಬಗಲಿ, ರಕ್ತ ಕಲಾವಿದರೆಂದೆ ಹೆಸರುವಾಸಿಯಾಗಿದ್ದಾರೆ.

ಜಮಖಂಡಿಯಲ್ಲಿರುವ ತಮ್ಮ ಸಂಗಮೇಶ ಆರ್ಟ್‌ ಗ್ಯಾಲರಿಯಲ್ಲಿ ತಮ್ಮ ಸ್ವಂತ ರಕ್ತದಿಂದ ದಿ.ಅಟಲ್‌ಜಿಯವರ ಭಾವಚಿತ್ರ ಬಿಡಿಸಿದ್ದಾರೆ.

''ದಿ.ಅಟಲ್‌ಜಿಯವರ ಶಿಕ್ಷ ಣದ ಪ್ರೇಮ ಇಂದು ಇಡೀ ರಾಷ್ಟ್ರದಲ್ಲಿನ ಶಾಲೆಗಳು ಹೊಸ ಕಟ್ಟಡ ಪಡೆದು ನಳ-ನಳಿಸುತ್ತಿರಲು ಕಾರಣ ದಿ.ಅಟಲ್‌ಜಿಯವರ ಕಲ್ಪನೆಯ ಕೂಸು ಸರ್ವ ಶಿಕ್ಷ ಣ ಅಭಿಯಾನ. ಇವರು ಪ್ರಧಾನಿಯಾಗುವುದಕ್ಕಿಂತಲೂ ಪೂರ್ವದಲ್ಲಿ ಶಾಲೆಯ ಕಟ್ಟಡಗಳ ಪರಿಸ್ಥಿತಿ ಅಧೋಗತಿಯಲ್ಲಿತ್ತು. ಮುರುಕಲು ಜೋಪಡಿಗಳು ಮಕ್ಕಳು ಕಲಿಯುವ ಪಾಠಶಾಲೆಯ ಕೋಣೆಗಳಾಗಿದ್ದವು. ಇದನ್ನು ಅರಿತ ಶಿಕ್ಷ ಣ ಪ್ರೇಮಿ ದಿ.ಅಟಲ್‌ಜಿ ದೇಶದ ಪ್ರಧಾನಿಯಾದ ನಂತರ ನಮ್ಮ ಸರಕಾರಿ ಶಾಲೆಗಳಿಗೆ ಹೊಸ ಕಟ್ಟಡಗಳನ್ನು ನೀಡಿ ಮಕ್ಕಳು ಖುಷಿಯಿಂದ ಪಾಠ ಕಲಿಯಲು ಮೆರಗು ನೀಡಿದರು. ಈ ಹಿನ್ನೆಲೆಯಲ್ಲಿ ಶಿಕ್ಷ ಣ ಪ್ರೇಮಿಗೆ ಇಡೀ ದೇಶದ ಶಿಕ್ಷ ಕರು ಹಾಗೂ ಸರಕಾರಿ ಶಾಲೆ ಮಕ್ಕಳ ಪರವಾಗಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇನೆ''ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ