ಆ್ಯಪ್ನಗರ

ಪ್ರವಾದಿ ಜನ್ಮದಿನಾಚರಣೆ: ರಕ್ತದಾನ ಶ್ರೇಷ್ಠ ದಾನ

ಬಾಗಲಕೋಟ: ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠವಾದ ದಾನ. ಈ ದಾನದಿಂದ ಪ್ರಾಣಾಪಾಯದಲ್ಲಿ ಇರುವವರನ್ನು ಉಳಿಸಬಹುದು ಎಂದು ಅಂಜುಮನ್‌ ಸಂಸ್ಥೆ ಅಧ್ಯಕ್ಷ ಮೈನುದ್ದೀನ ನಬಿವಾಲೆ ಹೇಳಿದರು.

Vijaya Karnataka 21 Nov 2018, 5:00 am
ಬಾಗಲಕೋಟ: ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠವಾದ ದಾನ. ಈ ದಾನದಿಂದ ಪ್ರಾಣಾಪಾಯದಲ್ಲಿ ಇರುವವರನ್ನು ಉಳಿಸಬಹುದು ಎಂದು ಅಂಜುಮನ್‌ ಸಂಸ್ಥೆ ಅಧ್ಯಕ್ಷ ಮೈನುದ್ದೀನ ನಬಿವಾಲೆ ಹೇಳಿದರು.
Vijaya Karnataka Web prophets birthday blood donation is a great gift
ಪ್ರವಾದಿ ಜನ್ಮದಿನಾಚರಣೆ: ರಕ್ತದಾನ ಶ್ರೇಷ್ಠ ದಾನ


ಮಹಮ್ಮದ ಪೈಗಂಬರ ಅವರ ಜನ್ಮೋತ್ಸವದ ಅಂಗವಾಗಿ ಅಂಜುಮನ್‌ ಸಂಸ್ಥೆ ಹಾಗೂ ಸೀರತ್‌ ಕಮಿಟಿ ಆಶ್ರಯದಲ್ಲಿ ಮರಕಜ-ಎ-ತಂಜೀಮ್‌ ಅಹ್ಲೆ ಸುನ್ನತ್‌ಉಲ್‌ ಜಮಾತ, ಬಾಗಲಕೋಟ ಇವರ ಸಹಯೋಗದಲ್ಲಿ ಕೈಗೊಂಡ ರಕ್ತದಾನ ಶಿಬಿರ ಉದ್ದೇಶಿಸಿ ಅವರು ಮಾತನಾಡಿದರು. ರಕ್ತದಾನ ಪುಣ್ಯದ ಕಾರ್ಯ. ಜನತೆ ರಕ್ತದಾನ ಮಾಡುವುದರ ಕಡೆಗೆ ಒಲವು ತೋರಬೇಕು ಎಂದರು.

ಬಾಗಲಕೋಟ ಜಿಲ್ಲಾ ಆಸ್ಪತ್ರೆಯ ರೆಡ್‌ ಬ್ಯಾಂಕ್‌ ಅಧಿಕಾರಿ ಸಿ.ಕೆ.ಮೀನಾ ರಕ್ತದಾನದ ಮಹತ್ವ ಕುರಿತು ತಿಳಿಸಿದರು. ವೇದಿಕೆಯಲ್ಲಿ ಸೀರತ್‌ ಕಮೀಟಿ ಅಧ್ಯಕ್ಷ ನೂರಅಹ್ಮದ ಪಟ್ಟೇವಾಲೆ, ಕಾರ್ಯದರ್ಶಿ ಸಲೀಂ ಮೋಮಿನ್‌, ಕುಮಾರ ಬಾವಾಖಾನ, ಎಫ್‌.ಎನ್‌.ಜಮಖಾನೆ, ಎಂ.ಎ.ನದಾಫ, ಸಂಸ್ಥೆ ಪದಾಧಿಕಾರಿಗಳು, ಸೀರತ್‌ ಕಮೀಟಿಯ ಸದಸ್ಯರು, ಗಣ್ಯರು, ಸಿಬ್ಬಂದಿಗಳು ಇದ್ದರು.

ಬ್ಲಡ್‌-ಬಿಜಿಕೆ-20

ಬಾಗಲಕೋಟದಲ್ಲಿ ಅಂಜುಮನ್‌ ಸಂಸ್ಥೆ ವತಿಯಿಂದ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ ಸಂಸ್ಥೆ ಅಧ್ಯಕ್ಷ ಮೈನುದ್ದೀನ ನಬಿವಾಲೆ ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ