ಆ್ಯಪ್ನಗರ

ಬಾಗಲಕೋಟೆ: ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ; ಸಂಪರ್ಕ ಕಡಿತ, ಮನೆಗಳು ಧರಶಾಹಿ!

ತಡರಾತ್ರಿಯಿಂದ ಸುರಿಯುತ್ತಿರೋ ಮಳೆಗೆ ಅಕ್ಕಪಕ್ಕದ ಹೊಲಗದ್ದೆಗಳಲ್ಲಿ ನೀರು ತುಂಬಿ ಬಿಟ್ಟಿದ್ದು ಅನ್ನದಾತರು ತಲೆ ಮೇಲೆ ಕೈ ಇಟ್ಟುಕೊಂಡು ಕೂರುವಂತೆ ಆಗಿದೆ. ಇನ್ನು ಮುಧೋಳ, ಬಾಗಲಕೋಟೆ ಸೇರಿದಂತೆ ಹಲವೆಡೆ ಮಳೆ ಸುರಿಯುತ್ತಿದೆ.

Vijaya Karnataka Web 26 Sep 2020, 9:19 am
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ನಿರಂತರ ಸುರಿಯುತ್ತಿರುವ ಮಳೆ ಹಿನ್ನೆಲೆ
Vijaya Karnataka Web G03LBJzc

ಜಿಲ್ಲೆಯ ಬೇಕಮಲದಿನ್ನಿ - ಕರಡಿ- ಹುನಗುಂದದ ಸಂಪರ್ಕ ಕಡಿತಗೊಂಡಿದೆ. ಬೇಕಮಲದಿನ್ನಿ ಗ್ರಾಮದಲ್ಲಿ ಸಂಪರ್ಕ ರಸ್ತೆ ಮೇಲೆಯೇ ಹಳ್ಳದ ನೀರು ಹರಿಯುತ್ತಿದೆ.

ಹೀಗಾಗಿ ಸಂಚಾರ ಸ್ಥಗಿತಗೊಂಡಿದ್ದು ಗ್ರಾಮಸ್ಥರು ಪರದಾಡುತ್ತವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ತಡರಾತ್ರಿಯಿಂದ ಸುರಿಯುತ್ತಿರೋ ಮಳೆಗೆ ಅಕ್ಕಪಕ್ಕದ ಹೊಲಗದ್ದೆಗಳಲ್ಲಿ ನೀರು ತುಂಬಿ ಬಿಟ್ಟಿದ್ದು ಅನ್ನದಾತರು ತಲೆ ಮೇಲೆ ಕೈ ಇಟ್ಟುಕೊಂಡು ಕೂರುವಂತೆ ಆಗಿದೆ. ಇನ್ನು ಮುಧೋಳ, ಬಾಗಲಕೋಟೆ ಸೇರಿದಂತೆ ಹಲವೆಡೆ ಮಳೆ ಸುರಿಯುತ್ತಿದೆ

ಮಳೆಗೆ ಧರೆಗುಳಿದ ಮನೆಗಳು!
ಇನ್ನು ತಡರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿ ಮಳೆಯಿಂದಾಗಿ ಕೆಲವೆಡೆ ಮನೆಗಳು ಬಿದ್ದ ಘಟನೆಗಳು ವರದಿಯಾಗಿದೆ. ಮನ್ನಿಕಟ್ಟಿ ಗ್ರಾಮದಲ್ಲಿ ರಾತ್ರಿ ಸುರಿದ ಮಳೆಗೆ ಮನೆಯೊಂದು ಬಿದ್ದಿದೆ. ಬಸಮ್ಮ ಹುಣಸಿಕಟ್ಟಿ ಸೇರಿದ ಮನೆ ಇದಾಗಿದ್ದು, ನಿರಂತರ ಸುರಿದ ಮಳೆಗೆ ಮನೆ ಉರುಳಿ ಬಿದ್ದಿದೆ. ಮುಂಜಾಗ್ರತಾ ಹಿನ್ನೆಲೆ ಮೊದಲೇ ಮನೆಯಿಂದ ಕುಟುಂಬ ಹೊರ ಬಂದಿದ್ದ ಹಿನ್ನೆಲೆ ದೊಡ್ಡ ಅವಘಡವೊಂದು ತಪ್ಪಿದಂತೆ ಆಗಿದೆ.

ಆನ್‌ಲೈನ್‌ನಲ್ಲಿ ಮಕ್ಕಳಿಗೆ ವ್ಯಂಗ್ಯ ಚಿತ್ರ ರಚನೆ ತರಬೇತಿ: ಕಾರ್ಟೂನಿಸ್ಟ್‌ ಸಾಹಸಕ್ಕೆ ಭಾರೀ ಪ್ರತಿಕ್ರಿಯೆ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ