ಆ್ಯಪ್ನಗರ

ರೋಹಿಣಿ ಮಳೆ, ರೈತರಲ್ಲಿ ಮಂದಹಾಸ

ಶಿರೂರ: ಭಾನುವಾರ ಹಾಗೂ ಸೋಮವಾರ ಸಂಜೆ ಶಿರೂರ, ನೀಲಾನಗರ, ಬೆನಕಟ್ಟಿ, ಬೇವಿನಮಟ್ಟಿ, ಗುಂಡನಪಲ್ಲೆ, ಗ್ರಾಮಗಳ ಸುತ್ತಮುತ್ತ ಗುಡುಗು, ಸಿಡಿಲು ಮಿಶ್ರಿತ ಸುರಿದ ರೋಹಿಣಿ ಮಳೆಯಿಂದ ರೈತಾಪಿ ಜನಾಂಗಕ್ಕೆ ಹರುಷವಾಗುವುದರೊಂದಿಗೆ ಕೃಷಿ ಚಟುವಟಿಕೆಗಳಿಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

Vijaya Karnataka 7 Jun 2019, 5:00 am
ಶಿರೂರ: ಭಾನುವಾರ ಹಾಗೂ ಸೋಮವಾರ ಸಂಜೆ ಶಿರೂರ, ನೀಲಾನಗರ, ಬೆನಕಟ್ಟಿ, ಬೇವಿನಮಟ್ಟಿ, ಗುಂಡನಪಲ್ಲೆ, ಗ್ರಾಮಗಳ ಸುತ್ತಮುತ್ತ ಗುಡುಗು, ಸಿಡಿಲು ಮಿಶ್ರಿತ ಸುರಿದ ರೋಹಿಣಿ ಮಳೆಯಿಂದ ರೈತಾಪಿ ಜನಾಂಗಕ್ಕೆ ಹರುಷವಾಗುವುದರೊಂದಿಗೆ ಕೃಷಿ ಚಟುವಟಿಕೆಗಳಿಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
Vijaya Karnataka Web rohini rain the smell of farmers
ರೋಹಿಣಿ ಮಳೆ, ರೈತರಲ್ಲಿ ಮಂದಹಾಸ


ಕಳೆದ 3 ತಿಂಗಳಿಂದ ನಿತ್ಯವೂ ಬಿಸಿಲ ತಾಪಕ್ಕೆ ಬೆಂದುಹೋಗಿದ್ದ ಜನತೆಗೆ ಆಗಾಗ ಸುರಿದ ಮಳೆಯಿಂದ ರೈತರಲ್ಲಿ ಮಂದಹಾಸ ಮೂಡಿದೆ. ಸಿಡಿಲು, ಗುಡುಗಿನಿಂದ ಸುರಿದ ಮಳೆಯಿಂದಾಗಿ ಗ್ರಾಮದಲ್ಲಿ ಹಾಗೂ ಕೃಷಿ ಭೂಮಿಗಳಲ್ಲಿ ತಂಪಿನ ವಾತಾವರಣ ಮೂಡಿದೆ, ಈ ಮಳೆ ಕೃಷಿ ಭೂಮಿಗಳಲ್ಲಿ ನೀರು ನಿಂತು ಕೆರೆಗಳಂತೆ ನಿರ್ಮಾಣವಾಗಿದ್ದು, ಮಳೆಯಿಂದ ರಾತ್ರಿ ವಿದ್ಯುತ್‌ ಕಡಿತಗೊಂಡಿದ್ದರಿಂದ ಕುಡಿಯುವ ನೀರು ಗಿರಣಿಗಳಿಗೆ ಗ್ರಾಮಸ್ಥರು ಅಲೆಯುವಂತಾಯಿತು. ಕಳೆದ 3 ವರ್ಷಗಳಿಂದ ಈ ಭಾಗದ ರೈತ ಸಮುದಾಯಕ್ಕೆ ಮುಂಗಾರು ಹಾಗೂ ಹಿಂಗಾರು ಕೈಕೊಟ್ಟಿದ್ದರಿಂದ ರೈತರು ಬರದ ಚಾಯೆಗೆ ಸಿಲುಕಿದ್ದಾರೆ. ಈ ಬಾರಿ ಮುಂಬರುವ ಮುಂಗಾರು ಮಳೆ ರೈತರ ಪಾಲಿಗೆ ಹರ್ಷದ ಸೂಚನೆ ನೀಡುವ ಸಂಭವ ಕಾಣುತ್ತಿದ್ದು ದಿನವೂ ಆಗಾಗ ಆಕಾಶದಲ್ಲಿ ಮೋಡಕವಿದ ವಾತಾವರಣ ಕಾಣುತ್ತಿದ್ದು ಮುಂದಿನ ದಿನದಲ್ಲಿ ಇನ್ನಷ್ಟು ಉತ್ತಮವಾಗಿ ಸುರಿದರೆ ಸಜ್ಜೆ, ಸೂರ್ಯಕಾಂತಿ, ಹೆಸರು, ಕುಸುಬೆಗಳನ್ನು ಬಿತ್ತನೆಗೆ ಸಜ್ಜಾಗುವದು ಎಂಬುದು ಈ ಬಾಗದ ರೈತರ ಮಾತುಗಳು ಏನೆಯಾಗಲಿ ಬಿಸಲಿನ ತಾಪಕ್ಕೆ ಬ್ರೇಕ್‌ ಬಿಳುವ ಸೂಚನೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಪೂರ್ಣವಾಗಿ ಕೃಷಿ ಭೂಮಿಗಳು ತೇವಾಮಶವಾಗುವ ಹಾಗೆ ಮಳೆ ಆದರೆ ಬಿತ್ತನೆಯನ್ನು ಚುರುಕುಗೊಳಿಸುವವಾಗುವುದು ಎಂದು ಈ ಭಾಗದ ರೈತರ ಮಾತುಗಳಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ