ಆ್ಯಪ್ನಗರ

ಬಾಗಲಕೋಟೆ: 3 ಸಾವಿರ ಹಾವು ರಕ್ಷಣೆ ಮಾಡಿದ್ದ ಉರಗ ತಜ್ಞ ಹಾವು ಕಡಿದು ಸಾವು

ಕಳೆದ 10 ವರ್ಷಗಳಿಂದ ಹಾವು ಹಿಡಿಯುವಲ್ಲಿ ಪರಿಣಿತಿ ಸಾಧಿಸಿದ್ದ ಡೇನಿಯಲ್ ಉಚಿತವಾಗಿ ಹಾವು ರಕ್ಷಿಸಿ ಜನರ ಪ್ರೀತಿ ಗಳಿಸಿದ್ದರು. ಅತ್ಯುತ್ತಮ ಕ್ರಿಕೆಟ್ ಪಟುವಾಗಿದ್ದ ಡೇನಿಯಲ್ 14 ವರ್ಷದೊಳಗಿನ ತಂಡದಲ್ಲಿ ವಿಕೆಟ್ ಕೀಪರ್ ಆಗಿದ್ದರು.

Vijaya Karnataka Web 15 Dec 2020, 3:47 pm
ಬಾಗಲಕೋಟೆ: 3 ಸಾವಿರ ಹಾವುಗಳ ರಕ್ಷಣೆ ಮಾಡಿದ್ದ ನಗರದ ಉರಗ ತಜ್ಞ ಡೇನಿಯಲ್ ನ್ಯೂಟನ್ ಹಾವು ಕಡಿದು ಮೃತಪಟ್ಟಿದ್ದಾರೆ.
Vijaya Karnataka Web ಉರಗ ತಜ್ಞ ಡೇನಿಯಲ್‌ ನ್ಯೂಟನ್
ಉರಗ ತಜ್ಞ ಡೇನಿಯಲ್‌ ನ್ಯೂಟನ್


ಸಿಕ್ಕೇರಿ ಕ್ರಾಸ್‌ನಲ್ಲಿ ಹಾವು ಕಾಣಿಸಿಕೊಂಡಿದೆ ಎಂದು ಡೇನಿಯಲ್‌ ನ್ಯೂಟನ್‌ಗೆ ಸ್ಥಳೀಯರು ಕರೆ ಮಾಡಿದ್ದರು. ಕೂಡಲೇ ಉರಗ ರಕ್ಷಿಸಲು ಮುಂದಾದಾಗ ಅದು ಕಚ್ಚಿದ ಪರಿಣಾಮ ಡ್ಯಾನಿಯಲ್ ಗಾಯಗೊಂಡರು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಡೇನಿಯಲ್ ಮಂಗಳವಾರ ನಿಧನರಾದರು.

ಕಳೆದ 10 ವರ್ಷಗಳಿಂದ ಹಾವು ಹಿಡಿಯುವಲ್ಲಿ ಪರಿಣಿತಿ ಸಾಧಿಸಿದ್ದ ಡೇನಿಯಲ್ ಉಚಿತವಾಗಿ ಹಾವು ರಕ್ಷಿಸಿ ಜನರ ಪ್ರೀತಿ ಗಳಿಸಿದ್ದರು.

ಅತ್ಯುತ್ತಮ ಕ್ರಿಕೆಟ್ ಪಟುವಾಗಿದ್ದ ಡೇನಿಯಲ್ 14 ವರ್ಷದೊಳಗಿನ ತಂಡದಲ್ಲಿ ವಿಕೆಟ್ ಕೀಪರ್ ಆಗಿದ್ದರು. ಶ್ರೀನಿವಾಸನ್ ಟ್ರೋಫಿ ಪಂದ್ಯಾವಳಿಯಲ್ಲಿಯೂ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ